For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಮರೆಯಲಾಗದ ದಿನ

  |

  ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಅಭಿಮಾನಿಗಳ ನೆಚ್ಚಿನ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ತುಂಬ ವಿಶೇಷವಾದ ದಿನ. ಇಂದು ಡಿ ಬಾಸ್ ಆಗಿ ಚಿತ್ರರಂಗವಾಳುತ್ತಿರುವ ದರ್ಶನ್, ಇದೆ ದಿನ ಅಂದರೆ 18 ವರ್ಷಗಳ ಹಿಂದೆ ನಾಯಕನಾಗಿ ಸಿನಿಪ್ರೇಕ್ಷಕರ ಮುಂದೆ ಬಂದಿದ್ದರು. ಹೌದು, ದರ್ಶನ್ ಹೀರೋ ಆಗಿ ಬಣ್ಣ ಹಚ್ಚಿದ ಮೆಜೆಸ್ಟಿಕ್ ಸಿನಿಮಾ ರಿಲೀಸ್ ಆಗಿ ಇವತ್ತಿಗೆ ಬರೋಬ್ಬರಿ 18 ವರ್ಷಗಳು ಕಳೆದಿವೆ.

  ದರ್ಶನ್ ನಾಯಕನಾಗಿ ಮಿಂಚುವ ಮೊದಲೆ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಒಬ್ಬ ತಂತ್ರಜ್ಞನಾಗಿ ಬಣ್ಣದ ಲೋಕದಲ್ಲಿ ವೃತ್ತಿ ಜೀವನ ಪ್ರಾರಂಭಸಿದ್ದರು. ಆದರೆ ನಾಯಕನಾಗಿ ಮಿಂಚಿದ್ದು ಮೆಜೆಸ್ಟಿಕ್ ಸಿನಿಮಾ ಮೂಲಕ. ಅಪ್ಪ ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗಕಂಡ ಲೆಜೆಂಡ್ ಕಲಾವಿದ. ಆದರು ಮಗ ಹೀರೋ ಆಗಿ ಮಿಂಚುವುದು ಅಷ್ಟು ಸುಲಭವಾಗಿರಲಿಲ್ಲ.

  ದರ್ಶನ್-ವಿಜಯಲಕ್ಷ್ಮಿ: ಒಂದೊಳ್ಳೆ ಕಾರಣಕ್ಕೆ ಮತ್ತೆ ಸುದ್ದಿಯಾದಾಗ...ದರ್ಶನ್-ವಿಜಯಲಕ್ಷ್ಮಿ: ಒಂದೊಳ್ಳೆ ಕಾರಣಕ್ಕೆ ಮತ್ತೆ ಸುದ್ದಿಯಾದಾಗ...

  ಕಷ್ಟಪಟ್ಟು, ಶ್ರಮವಹಿಸಿ ದುಡಿದು ಚಿತ್ರರಂಗದಲ್ಲಿ ಬೆಳೆದು ಇಂದು ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ ದರ್ಶನ್. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಅಂದ್ಹಾಗೆ ಮೆಜೆಸ್ಟಿಕ್ ಪಿ.ಎನ್ ಸತ್ಯ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಚಿತ್ರಕ್ಕೆ ಸಾಧು ಕೋಕಿಲಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ರೇಖಾ ಕಾಣಿಸಿಕೊಂಡಿದ್ದರು.

  ಪಕ್ಕಾ ಮಾಸ್ ಎಂಟಟೈನರ್ ಸಿನಿಮಾ ಮೆಜೆಸ್ಟಿಕ್. ಚಿತ್ರದಲ್ಲಿ ದರ್ಶನ್ ಗೆಟಪ್, ಸ್ಟೈಲ್ ಪ್ರತಿಯೊಂದು ಕನ್ನಡ ಚಿತ್ರಾಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಮೊದಲ ಸಿನಿಮಾದಲ್ಲಿಯೆ ಭರವಸೆಯ ನಾಯಕನಾಗಿ ಹೊರಹೊಮ್ಮಿದ್ದರು. ದರ್ಶನ್ ಫೈಟಿಂಗ್ ಗೆ ಫಿದಾ ಆಗದವರೆ ಇಲ್ಲ. ವಿಶೇಷ ಅಂದರೆ ದರ್ಶನ್ ಮೊದಲೆ ಸಿನಿಮಾನೆ ಯಶಸ್ವಿ 100 ದಿನಗಳನ್ನು ಪೂರೈಸಿ ಸಂಭ್ರಮಿಸಿತ್ತು.

  ಇಂದು ದರ್ಶನ್ 50ಕ್ಕು ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕೊನೆಯದಾಗಿ ಒಡೆಯ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ರಾಬರ್ಟ್ ಸಿನಿಮಾ ಚಿತ್ರೀಕರಣ ಮುಗಿಸಿರುವ ದರ್ಶನ್ ಬಹುನಿರೀಕ್ಷೆಯ ರಾಜವೀರ ಮದಕರಿ ನಾಯಕ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ.

  English summary
  Kannada Actor Darshan starrer Majestic film completed 18 years. Majestic movie release on February 8 2002.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X