'ಒಡೆಯ' ಚಿತ್ರೀಕರಣ ಮುಗಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Recommended Video

Odeya : Darshan starrer Odeya movie shooting completed |FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾದ ಚಿತ್ರೀಕರಣ ಮುಕ್ತಾಯಾಗಿದೆ. 'ಒಡೆಯ' ಟಾಕಿ ಭಾಗ ಮುಗಿಸಿ ಅನೇಕ ದಿನಗಳಾಗಿತ್ತು. ಎರಡು ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದ್ದ ಚಿತ್ರತಂಡ ಈಗ ಎರಡು ಹಾಡನ್ನು ಸೆರೆಹಿಡಿಯುವ ಮೂಲಕ ಕುಂಬಳಕಾಯಿ ಒಡೆದಿದೆ.

ಚಿತ್ರದ ಎರಡು ಬಹು ನಿರೀಕ್ಷೆಯ ಹಾಡಿನ ಚಿತ್ರೀಕರಣ ಸ್ವಿಡ್ಜರ್ಲ್ಯಾಂಡ್ ನಲ್ಲಿ ಮಾಡಲು ಪ್ಲಾನ್ ಮಾಡಿಕೊಂಡಿತ್ತು ಚಿತ್ರತಂಡ. ಯೋಜನೆ ಪ್ರಕಾರ ಒಡೆಯ ಟೀಂ ಕಳೆದ 15 ದಿನಗಳಿಂದ ಸ್ವಿಡ್ಜರ್ಲ್ಯಾಂಡ್ ನಲ್ಲಿ ಬೀಡುಬಿಟ್ಟಿತ್ತು. ಸ್ವಿಡ್ಜರ್ಲ್ಯಾಂಡ್ ನ ಸುಂದರ ತಾಣಗಳಲ್ಲಿ ಒಡೆಯ ಹಾಡಿನ್ನು ಸೆರೆಹಿಡಿಯಲಾಗಿದೆ.

ಹಾಡಿನ ಚಿತ್ರೀಕರಣಕ್ಕೆ ತೆರಳಿದ ತಂಡದ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಾಯಕಿ ರಾಘವಿ ತಿಮ್ಮಯ್ಯ ಫೋಟೋಗಳು ವೈರಲ್ ಆಗಿವೆ. ಜೊತೆಗೆ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Kannada Actor Darshan Starrer Odeya Movie Shooting Completed

ಸ್ವಿಡ್ಜರ್ಲ್ಯಾಂಡ್ ನಲ್ಲಿರುವ ಇಡೀ ಒಡೆಯ ತಂಡ ಫೋಟೋಗೆ ಪೋಸ್ ನೀಡುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ಸಂದೇಶ್ ನಾಗರಾಜ್, ನಿರ್ದೇಶಕ ಎಂ.ಡಿ ಶ್ರೀಧರ್ ಸೇರಿದಂತೆ ತಂತ್ರಜ್ಞರು ಮತ್ತು ಡ್ಯಾನ್ಸರ್ ಕೂಡ ಈ ಫೋಟೋದಲ್ಲಿ ಸೆರೆಯಾಗಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ಒಡೆಯ ಡಿಸೆಂಬರ್ ನಲ್ಲಿ ತೆರೆಗೆ ಬರುವ ಪ್ಲಾನ್ ಮಾಡಿದೆ.

Kannada Actor Darshan Starrer Odeya Movie Shooting Completed

ಮೂಲಗಳ ಪ್ರಕಾರ ಒಡೆಯ ಡಿಸೆಂಬರ್ 20ಕ್ಕೆ ರಿಲೀಸ್ ಆಗುತ್ತೆ ಎಂದು ಹೇಳಲಾಗುತ್ತಿದೆ. ಸಲ್ಮಾನ್ ಖಾನ್ ಮತ್ತು ಸುದೀಪ್ ಅಭಿನಯದ ದಬಾಂಗ್-3 ಸಿನಿಮಾ ಡಿಸೆಂಬರ್ 20ಕ್ಕೆ ತೆರೆಗೆ ಬರುತ್ತಿದೆ. ಅದೆ ದಿನ ಒಡೆಯ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

More from Filmibeat

English summary
Kannada actor Darshan starrer Odeya movie shooting completed. This movie is directed by M.D Shridhar.
Read more about: darshan ದರ್ಶನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X