'ನನ್ನ ಫೇಸ್ ಮಾಡಬೇಕು ಅಂದರೆ ಗುಂಡಿಗೆಲಿ ಧಮ್ ಇರಬೇಕು: ಒಡೆಯ ಡೈಲಾಗ್ ಗೆ ಅಭಿಮಾನಿಗಳು ಫಿದಾ
'ಇನ್ಮುಂದೆ ಅಧಿಕಾರನು ನಂದೇನೆ, ಆಜ್ಞೆನೂ ನಂದೇನೆ' ಎಂದು ಅಬ್ಬರಿಸುತ್ತ ಎಂಟ್ರಿ ಕೊಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಹು ನಿರೀಕ್ಷೆಯ ಒಡೆಯ ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದೆ. ಒಡೆಯ ದರ್ಶನಕ್ಕಾಗಿ ಕಾಯುತ್ತಿದ್ದ ಡಿ ಬಾಸ್ ಅಭಿಮಾನಿಗಳು ದರ್ಶನ್ ಖಡಕ್ ಲುಕ್ ಮತ್ತು ಪಂಚಿಂಗ್ ಡೈಲಾಗ್ ಗೆ ಫಿದಾ ಆಗಿದ್ದಾರೆ. ಕನ್ನಡ ರಾಜ್ಯೋತ್ಸವದ ಗಿಫ್ಟ್ ಆಗಿ ಒಡೆಯ ಟೀಸರ್ ಮಾಡಲಾಗಿದೆ.
ಒಂದು ನಿಮಿಷ ನಾಲ್ಕು ಸೆಕೆಂಡ್ ಟೀಸರ್ ನೋಡಿ ಅಭಿಮಾನಿಗಳು ಸಂತಸಪಡುತ್ತಿದ್ದಾರೆ. "ಇನ್ಮುಂದೆ ಅಧಿಕಾರನು ನಂದೇನೆ, ಆಜ್ಞೆನು ನಂದೇನೆ. ನನ್ನ ಫೇಸ್ ಮಾಡಬೇಕು ಅಂದರೆ ಗುಂಡಿಗೆಯಲಿ ಧಮ್ ಇರಬೇಕು" ಎನ್ನುವ ಪಂಚಿಂಗ್ ಡೈಲಾಗ್ ಇರುವ ಪುಟ್ಟ ಟೀಸರ್ ಡಿ ಬಾಸ್ ಅಭಿಮಾನಿಗಳ ಮನ ತಣಿಸಿದೆ. ಆಕ್ಷನ್, ಮಾಸ್ ಲುಕ್, ಪಂಚಿಂಗ್ ಡೈಲಾಡ್, ಕೈಯಲ್ಲಿ ಲಾಂಗ್ ದರ್ಶನ್ ಅಭಿಮಾನಿಗಳಿಗೆ ಒಡೆಯ ಹೇಳಿ ಮಾಡಿಸಿದ ಹಾಗಿದೆ.
ಒಡೆಯ ಟೀಸರ್ ಗಾಗಿ ಅಭಿಮಾನಿಗಳು ತಿಂಗಳುಗಳಿಂದ ಕಾಯುತ್ತಿದ್ದರು. ಈ ಹಿಂದೆಯ ಟೀಸರ್ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಟೀಸರ್ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು. ಆದ್ರೀಗ ಅಭಿಮಾನಿಗಳಿಗೆ ನಿರಾಸೆ ಮಾಡದೆ ರಾಜ್ಯೋತ್ಸವದ ಪ್ರಯುಕ್ತ ಒಡೆಯ ಅಭಿಮಾನಿಗಳಿಗೆ ದರ್ಶನ ನೀಡಿದೆ.
ಅಂದ್ಹಾಗೆ ಒಡೆಯ ತಮಿಳಿನ 'ವೀರಂ' ಸಿನಿಮಾದ ರಮೇಕ್. ತಮಿಳಿನಲ್ಲಿ ನಟ ಅಜಿತ್ ಅಬ್ಬರಿಸಿದ್ದರು. ಕನ್ನಡದ ಒಡೆಯ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ರಾಘವಿ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ರಾಘವಿ ಕನ್ನಡ ಚಿತ್ರಪ್ರಿಯರ ಮುಂದೆ ಬರ್ತಿದ್ದಾರೆ.

ಸದ್ಯ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ ಸಿನಿಮಾವನ್ನು ಡಿಸೆಂಬರ್ ನಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿದೆ. ಮೂಲಗಳ ಪ್ರಕಾರ ಸಿನಿಮಾ ಡಿಸೆಂಬರ್ 20ಕ್ಕೆ ತೆರೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಚಿತ್ರತಂಡ ರಿಲೀಸ್ ಡೇಟ್ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.


Click it and Unblock the Notifications











