ಸಾಂಗ್ ರೆಕಾರ್ಡಿಂಗ್ ನಲ್ಲಿ ದರ್ಶನ್ 'ರಾಬರ್ಟ್': ವಿಡಿಯೋ ಹಂಚಿಕೊಂಡ ಅರ್ಜುನ್ ಜನ್ಯ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಸುಮಾರು 108 ದಿನಗಳ ಕಾಲ ರಾಬರ್ಟ್ ಶೂಟಿಂಗ್ ಮಾಡಲಾಗಿದ್ದು, ಯಶಸ್ವಿಯಾಗಿ ಅಂದುಕೊಂಡಂತೆ ಸಿನಿಮಾ ಮುಗಿಸಿದ್ದಾರೆ. ರಾಬರ್ಟ್ ಶೂಟಿಂಗ್ ಮುಗಿಸಿದ ಖುಷಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಕಳೆದ ಜೂನ್ ತಿಂಗಳಲ್ಲಿ ಸೆಟ್ಟೇರಿದ್ದ ಸಿನಿಮಾ ಬೆಂಗಳೂರು, ಮೈಸೂರು, ಹೈದರಾಬಾದ್, ಪುದುಚೇರಿ, ವಾರಣಾಸಿ, ಲಕ್ನೋ ಸುತ್ತಮುತ್ತ ಚಿತ್ರೀಕರಣ ಮಾಡಿ ಮುಗಿಸಿದೆ. ಇತ್ತೀಚಿಗಷ್ಟೆ ಚಿತ್ರದ ಎರಡನೆ ಲುಕ್ ರಿವೀಲ್ ಮಾಡಿ ಸಂಚಲನ ಮೂಡಿಸಿರುವ ರಾಬರ್ಟ್ ಚಿತ್ರತಂಡ ಮತ್ತೊಂದು ಸುದ್ದಿಯನ್ನು ಹಂಚಿಕೊಂಡಿದೆ. ಹೌದು, ರಾಬರ್ಟ್ ಸದ್ಯ ಹಾಡಿನ ರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಸಂಗೀತ ಟೀಂ ಜೊತೆ ಹಾಡು ರೆಕಾರ್ಡ್ ಮಾಡುತ್ತಿರುವ ವಿಡಿಯೋವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಿರ್ದೇಶಕ ತರುಣ್ ಸುಧೀರ್ ಕೂಡ ಇದ್ದಾರೆ. ಅಂದ್ಹಾಗೆ ರಾಬರ್ಟ್ ಚಿತ್ರದ ಒಂದು ಹಾಡನ್ನು 20 ಗಾಯಕರಿಂದ ಹಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹಿಂದೆ ಸುದ್ದಿಯಾಗಿತ್ತು. ಆ ಹಾಡು ಇದೇನಾ ಎನ್ನುವುದು ಸಹ ಕುತೂಹಲ ಮೂಡಿಸಿದೆ.

Kannada Actor Darshan Starrer Roberrt Team Busy In Movie Song Recording

ಇನ್ನು 'ರಾಬರ್ಟ್' ಚಿತ್ರದಲ್ಲಿ ಇಬ್ಬರು ಸಂಗೀತ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅರ್ಜುನ್ ಜನ್ಯ ಹಾಡುಗಳು ಹಾಗೂ ಹರಿಕೃಷ್ಣ ಹಿನ್ನಲೆ ಸಂಗೀತ ನಿರ್ವಹಿಸುತ್ತಿದ್ದಾರಂತೆ. ಸದ್ಯ ಚಿತ್ರೀಕರಣ ಮುಗಿಸಿ ಹಾಡಿನ ರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಚಿತ್ರವನ್ನು ಬೇಸಿಗೆ ರಜೆಯ ಸಮಯದಲ್ಲಿ ತೆರೆಗೆ ತರುವ ಪ್ಲಾನ್ ಮಾಡಿದೆ.

More from Filmibeat

English summary
Kannada Actor Darshan starrer Roberrt team busy in movie song recording. Music Director Arjun Janya shared recording video in Social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X