twitter
    For Quick Alerts
    ALLOW NOTIFICATIONS  
    For Daily Alerts

    ಅತಿಯಾಗಿ ಟ್ರೋಲ್ ಆದ ದರ್ಶನ್: ಹೇಳಿದ್ದು ಒಂದು ಆಗಿದ್ದು ಇನ್ನೊಂದು

    |

    ಕಳೆದ ಎರಡು ದಿನದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದಾರೆ. ಜಂಟಲ್ ಮನ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ದರ್ಶನ್ ಹೇಳಿದ 'ಆ ಮಾತು' ಅನೇಕರನ್ನು ಕೆರಳಿಸಿದೆ.

    'ಇದು ನಿಜವಾಗಲೂ ಅಸಹ್ಯ': ಜಂಟಲ್ ಮ್ಯಾನ್ ಕಾರ್ಯಕ್ರಮದಲ್ಲಿ ಡಿ-ಬಾಸ್ ಬೇಸರ'ಇದು ನಿಜವಾಗಲೂ ಅಸಹ್ಯ': ಜಂಟಲ್ ಮ್ಯಾನ್ ಕಾರ್ಯಕ್ರಮದಲ್ಲಿ ಡಿ-ಬಾಸ್ ಬೇಸರ

    ಜವಾಬ್ದಾರಿಯುತ ಸ್ಥಾನದಲ್ಲಿರುವ ನಟ ಆಗಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ 'ಅಂ..... ಮುಚ್ಕೊಂಡು ಬಂದು ಸಿನಿಮಾ ನೋಡ್ರಿ' ಎಂದು ಪ್ರೇಕ್ಷಕರನ್ನು ಧಮ್ಕಿ ಹಾಕಿದ್ದು ತಪ್ಪು ಎಂದು ಹೇಳುತ್ತಿದ್ದಾರೆ.

    ನಿಜಕ್ಕೂ ದರ್ಶನ್ ಪ್ರೇಕ್ಷಕರಿಗೆ ಧಮ್ಕಿ ಹಾಕಿದ್ರಾ? ಯಾವ ಅರ್ಥದಲ್ಲಿ ದರ್ಶನ್ ಆ ಪದ ಬಳಸಿದರು? ಡಿ ಬಾಸ್ ಆ ಮಾತು ಹೇಳಿದ್ದು ನಿಜಾನಾ ಅಥವಾ ತಪ್ಪಾ? ಮುಂದೆ ಓದಿ....

    ದರ್ಶನ್ ಹೇಳಿದ್ದು ಎಲ್ಲ ಪ್ರೇಕ್ಷಕರಿಗಲ್ಲ

    ದರ್ಶನ್ ಹೇಳಿದ್ದು ಎಲ್ಲ ಪ್ರೇಕ್ಷಕರಿಗಲ್ಲ

    'ಅಂ....ಬಗ್ಗಿಸಿ ಕೂತ್ಕೊಂಡು ಇಂತಹ ಸಿನಿಮಾ ನೋಡ್ರಯ್ಯಾ....' ದರ್ಶನ್ ಈ ಮಾತನ್ನು ಹೇಳಿದ್ದು ಕನ್ನಡ ಸಿನಿಮಾ ಪ್ರೇಕ್ಷಕರಿಗಲ್ಲ. ಕನ್ನಡ ಸಿನಿಮಾಗಳ ಬಗ್ಗೆ ಕೀಳಾಗಿ ಮಾತನಾಡುವವರಿಗೆ. ಅದಕ್ಕೆ ಅವರು ಸಂದರ್ಭವೊಂದನ್ನು ಕೂಡ ವಿವರಿಸಿದ್ದಾರೆ.

    ಕನ್ನಡದಲ್ಲಿ ಇಂತಹ ಸಿನಿಮಾ ಬರಲ್ಲ ದರ್ಶನ್....

    ಕನ್ನಡದಲ್ಲಿ ಇಂತಹ ಸಿನಿಮಾ ಬರಲ್ಲ ದರ್ಶನ್....

    ಬೇರೆ ಭಾಷೆ ಚಿತ್ರ ಮತ್ತು ಕಲಾವಿದನಿಗೆ ಸಿಗುವಷ್ಟು ಗೌರವ ಕನ್ನಡದ ಕಲಾವಿದರಿಗೆ, ಚಿತ್ರಕ್ಕೆ ಸಿಗುತ್ತಿಲ್ಲ ಎಂಬ ವಿಚಾರವನ್ನು ಸಂಚಾರಿ ವಿಜಯ್ ಅವರನ್ನು ಉದಾಹರಣೆನ್ನಾಗಿಸಿ ಹೇಳಿದರು. ಜಂಟಲ್ ಮನ್ ಒಳ್ಳೆಯ ಚಿತ್ರ. ಇಂತಹ ಸಿನಿಮಾ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ''ಕೆಲವರು ಸಿಕ್ತಾರೆ, ಏನ್ ದರ್ಶನ್ ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುವುದಿಲ್ಲ ಅಂತಾರೆ'' ಎಂದು ಹೇಳುತ್ತಾ, ಅಂತವರಿಗೆ ''ಅಂ.....ಬಗ್ಗಿಸಿ ಕೂತ್ಕೊಂಡು ಇಂತಹ ಸಿನಿಮಾ ನೋಡ್ರಯ್ಯಾ'' ಎಂದು ಹೇಳಿದರು. ಹಾಗ್ನೋಡಿದ್ರೆ, ದರ್ಶನ್ ಹೇಳಿದ ವಿಚಾರದಲ್ಲಿ ಸತ್ಯ ಇದೆ.

    ತಮಿಳು ನಟ ವಿಜಯ್ ಸೇತುಪತಿಗೆ ಟಾಂಗ್ ಕೊಟ್ರಾ ಚಾಲೆಂಜಿಂಗ್ ಸ್ಟಾರ್ ದರ್ಶನ್?ತಮಿಳು ನಟ ವಿಜಯ್ ಸೇತುಪತಿಗೆ ಟಾಂಗ್ ಕೊಟ್ರಾ ಚಾಲೆಂಜಿಂಗ್ ಸ್ಟಾರ್ ದರ್ಶನ್?

    ಟ್ರೋಲ್ ಗೆ ಸಿಲುಕಿದ ಡಿ ಬಾಸ್

    ಟ್ರೋಲ್ ಗೆ ಸಿಲುಕಿದ ಡಿ ಬಾಸ್

    ಆದರೆ, ದರ್ಶನ್ ಅವರು ಪ್ರೇಕ್ಷಕರನ್ನು, ಅಭಿಮಾನಿಗಳನ್ನು ''ಅಂ.....ಬಗ್ಗಿಸಿ ಕೂತ್ಕೊಂಡು ಸಿನಿಮಾ ನೋಡ್ರಯ್ಯಾ'' ಎಂದಿದ್ದಾರೆ ಎಂದು ಟ್ರೋಲ್ ಗೆ ಗುರಿಯಾಗಿದ್ದಾರೆ. ಸ್ಟಾರ್ ನಟ ಆಗಿದ್ದು, ಅವರ ಅಭಿಮಾನಿಗಳು ಅವರನ್ನು ಅನುಕರಣೆ ಮಾಡ್ತಾರೆ ಎಂದು ತಿಳಿದಿದ್ದು ಸಾರ್ವಜನಿಕವಾಗಿ ಇಂತಹ ಪದ ಬಳಕೆ ಮಾಡಿದ್ದು ತಪ್ಪು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಇನ್ನು ಈ ವಿಷಯದ ಬಗ್ಗೆ ಅರ್ಥವಾಗದೆ ಸುಮ್ಮನೆ ಟ್ರೋಲ್ ಮಾಡುತ್ತಿರುವುದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಗಮನಿಸಬಹುದು.

    2019ರ ಅತ್ಯುತ್ತಮ ಚಿತ್ರ 'ಯಜಮಾನ': ದರ್ಶನ್ ಚಿತ್ರಕ್ಕೆ ಸಿಕ್ಕ ಮತವೆಷ್ಟು?2019ರ ಅತ್ಯುತ್ತಮ ಚಿತ್ರ 'ಯಜಮಾನ': ದರ್ಶನ್ ಚಿತ್ರಕ್ಕೆ ಸಿಕ್ಕ ಮತವೆಷ್ಟು?

    ನಟರಿಗೂ ಜವಾಬ್ದಾರಿ ಇರಬೇಕು

    ನಟರಿಗೂ ಜವಾಬ್ದಾರಿ ಇರಬೇಕು

    ಹಾಗಂತ ದರ್ಶನ್ ಅವರ ಮಾತನಾಡಿದ್ದು ಸರಿ ಎಂದು ಹೇಳಲು ಸಾಧ್ಯವಿಲ್ಲ. ಅವರ ವಿಚಾರ ಸತ್ಯ ಎನಿಸಿದರೂ ಬಹಿರಂಗವಾಗಿ ಮಾತನಾಡುವ ವೇಳೆ ಜವಾಬ್ದಾರಿಯಿಂದ ವರ್ತಿಸಬೇಕಿರುವುದು ಅವರ ಕರ್ತವ್ಯ. ದರ್ಶನ್ ಅವರದ್ದು ನೇರ ನುಡಿ, ನೇರ ವ್ಯಕ್ತಿತ್ವ ಇರಬಹುದು. ಅದನ್ನ ಡಿ ಬಾಸ್ ಅಭಿಮಾನಿಗಳು ಪಾಸಿಟೀವ್ ಆಗಿ ಸ್ವೀಕರಿಸಬಹುದು. ಆದರೆ, ಕನ್ನಡ ಚಿತ್ರರಂಗದ ಕಲಾಭಿಮಾನಿಗಳು ಹಾಗೆ ಪರಿಗಣಿಸಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.

    English summary
    Challenging star darshan heavily trolled in internet because of he use bad word.
    Wednesday, February 5, 2020, 16:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X