ಅರ್ಜುನ್ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್

Recommended Video

ದರ್ಶನ್ ಗೆ ಸೀನಿಯರ್ ಅಂದ್ರೆ ತುಂಬಾ ಇಷ್ಟ..? | Darshan

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ಅರ್ಜುನ್ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಚೆನ್ನೈನ ನಿವಾಸದಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಅರ್ಜುನ್ ಸರ್ಜಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಗೆ ಹೋಗಿ ಶುಭಕೋರಿದ್ದಾರೆ.

ದರ್ಶನ್ ಕೂಡ ಚೆನ್ನೈನಲ್ಲೆ ಇದ್ದಾರೆ. ಇಂದು ದರ್ಶನ್ ಅಭಿನಯದ ಕುರುಕ್ಷೇತ್ರ ತಮಿಳು ವರ್ಷನ್ ತೆರೆಗೆ ಬಂದಿದೆ. ಚಿತ್ರದ ಪ್ರಮೋಷನ್ ಗೆ ಚೆನ್ನೈಗೆ ತೆರಳಿರುವ ದರ್ಶನ್ ಇಂದು ಅರ್ಜುನ್ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲೂ ಭಾಗಿಯಾಗಿ ಅರ್ಜುನ್ ಸರ್ಜಾಗೆ ವಿಶ್ ಮಾಡಿದ್ದಾರೆ.

Kannada Actor Darshan Visit To Arjun Sarja House In Chennai

ಅರ್ಜುನ್ ಸರ್ಜಾ ಜೊತೆ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಕೂಡ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಸರ್ಜಾ. ಅಂದ್ಹಾಗೆ ಅರ್ಜುನ್ ಸರ್ಜಾ ಮತ್ತು ದರ್ಶನ್ ನಡುವೆ ಉತ್ತಮವಾದ ಬಾಂಧವ್ಯವಿದೆ. ಇಬ್ಬರು ಕೂಡ ಉತ್ತಮ ಸ್ನೇಹಿತರು.

Kannada Actor Darshan Visit To Arjun Sarja House In Chennai

ಕುರುಕ್ಷೇತ್ರ ಚಿತ್ರದಲ್ಲಿ ಅರ್ಜುನ್ ಸರ್ಜಾ ಕರ್ಣನ ಪಾತ್ರದಲ್ಲಿ ಮಿಂಚಿದ್ದಾರೆ. ಮನೆಗೆ ಹೋಗಿ ವಿಶ್ ಮಾಡಿದ್ದಲ್ಲದೆ ಟ್ವಿಟ್ಟರ್ ನಲ್ಲಿರೂ ಅರ್ಜುನ್ ಸರ್ಜಾಗೆ ಹುಟ್ಟುಹಬ್ಬದ ಶುಭಾಶಯತಿಳಿಸಿದ್ದಾರೆ. "ನನ್ನ ನಲ್ಮೆಯ ಸೀನಿಯರ್ ಅರ್ಜುನ್ ಸರ್ಜಾ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು.ನಿಮ್ಮ ಇಷ್ಟಾರ್ಥಗಳೆಲ್ಲಾ ಈಡೇರಲಿ" ಎಂದು ಪ್ರೀತಿಯಿಂದ ಶುಭಕೋರಿದ್ದಾರೆ. ಅಲ್ಲದೆ ಮನೆಗೂ ಹೋಗಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

More from Filmibeat

English summary
Kannada actor Darshan visit to Arjun Sarja house in Chennai. Arjun Sarja celebrated his 57th birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X