For Quick Alerts
  ALLOW NOTIFICATIONS  
  For Daily Alerts

  ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್

  |
  Robert Movie: ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ದಿಢೀರನೆ ಧರ್ಮಸ್ಥಳಕ್ಕೆ ಬೇಟಿ ನೀಡಿದ್ದಾರೆ. ಚಿತ್ರೀಕರಣದ ನಡುವೆಯು ಧರ್ಮಸ್ಥಳಕ್ಕೆ ಭೇಟಿ ನೀಡಿರುವ ಡಿ ಬಾಸ್ ಇಂದು ಬೆಳಗ್ಗೆ ಶ್ರೀ ಮಂಜುನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಜುನಾಥನ ಸನ್ನಿಧಿಯಲ್ಲಿ ದಿಢೀರನೆ ದರ್ಶನ್ ಅವರನ್ನು ನೋಡಿದ ಅಭಿಮಾನಿಗಳು ಒಮ್ಮೆ ಫುಲ್ ಖುಷ್ ಆಗಿದ್ದಾರೆ.

  ಅಷ್ಟೆಯಲ್ಲ ದರ್ಶನ್ ಅವರನ್ನು ನೋಡುತ್ತಿದಂತೆ ಅಭಿಮಾನಿಗಳು ಪೋಟೋ ಕ್ಲಿಕ್ಕಿಸಿಕೊಳ್ಳಲು ಮತ್ತು ಸೆಲ್ಫಿಗಾಗಿ ಮುಗಿಬಿದ್ದಾರೆ. ದರ್ಶನ್ ಜೊತೆ ಅವರ ಸ್ನೇಹಿತರು ಕೂಡ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

  ರಿಲೀಸ್ ಆಗ್ತಿವೆ 'ಕುರುಕ್ಷೇತ್ರ' ಸಿನಿಮಾದ ಹಾಡುಗಳು

  ದರ್ಶನ್ ಸದ್ಯ ರಾಬರ್ಟ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ರಾಬರ್ಟ್ ಚಿತ್ರದ ಚಿತ್ರೀಕರಣ ಸಾಕಷ್ಟು ಭಾಗ ಮುಗಿಯುತ್ತ ಬಂದಿದೆ. ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಾಕಷ್ಟು ನಿರೀಕ್ಷೆಯನ್ನು ರಾಬರ್ಟ್ ಚಿತ್ರದ ಫಸ್ಟ್ ಲುಕ್ ಇತ್ತೀಚಿಗಷ್ಟೆ ರಿವೀಲ್ ಮಾಡಲಾಗಿದೆ.

  ಇನ್ನು ದರ್ಶನ್ ಅಭಿನಯದ ಕುರುಕ್ಷೇತ್ರ ಮತ್ತು ಒಡೆಯ ಸಿನಿಮಾ ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿವೆ. ಕುರುಕ್ಷೇತ್ರ ಚಿತ್ರದ ಆಡಿಯೋ ಜುಲೈ 7ಕ್ಕೆ ತೆರೆಗೆ ಬರಲು ಸಿದ್ಧವಾಗಿವೆ. ಜೊತೆಗೆ ಬಹು ನಿರೀಕ್ಷೆಯ 'ಗಂಡುಗಲಿ ಮದಕರಿನಾಯಕ' ಚಿತ್ರದ ಚಿತ್ರೀಕರಣ ಕೂಡ ಸಧ್ಯದಲ್ಲೆ ಪ್ರಾರಂಭವಾಗಲಿದೆ.

  English summary
  Kannada actor Darshan visits Dharmasthala Sri Manjunatha Temple. Darshan currently busy in 'Robert' film shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X