ಶನೇಶ್ವರನಿಗೆ ತುಲಾಭಾರ, ಸೂರ್ಯ ದೇವನಿಗೆ ಪೂಜೆ ಸಲ್ಲಿಸಿದ ನಟ ದರ್ಶನ್

ಯಾವ ದೇವರ ಕೃಪೆಯೋ, ಏನೋ.. ಇತ್ತೀಚೆಗಷ್ಟೆ ಕಾರು ಅಪಘಾತದಲ್ಲಿ ಕನ್ನಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಸಣ್ಣ-ಪುಟ್ಟ ಪೆಟ್ಟು ಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ನಟ ದರ್ಶನ್ ನಿನ್ನೆಯಷ್ಟೇ ತಿರುನಲ್ಲರ್ ಶನೇಶ್ವರ ಪುಣ್ಯಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು.

ಶನೇಶ್ವರ ದೇವಾಲಯದಲ್ಲಿ ತುಲಾಭಾರ ಸೇವೆ ಸಲ್ಲಿಸಿದ ನಟ ದರ್ಶನ್ ಇಂದು ತಮಿಳುನಾಡಿನ ಸೂರ್ಯ ಭಗವಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸೂರ್ಯ ದೇವನಿಗೆ ಭಕ್ತಿಯಿಂದ ನಮಸ್ಕರಿಸಿದ್ದಾರೆ ನಟ ದರ್ಶನ್.

Kannada Actor Darshan visits Surya Bhagvan temple in Tamil Nadu

ಹಾಗ್ನೋಡಿದ್ರೆ, ನಟ ದರ್ಶನ್ ಅಪ್ಪಟ ದೈವ ಭಕ್ತ. ಪ್ರತಿ ವರ್ಷ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಸ್ನೇಹಿತರೊಂದಿಗೆ ನಟ ದರ್ಶನ್ ಯಾತ್ರೆ ಕೈಗೊಳ್ತಾರೆ. ಯಾವುದೇ ಶುಭ ಕೆಲಸ ಮಾಡುವ ಮುನ್ನ ಚಾಮುಂಡಿ ದೇವಿಗೆ ನಟ ದರ್ಶನ್ ನಮಿಸುತ್ತಾರೆ. ಇದೀಗ ನಟ ದರ್ಶನ್ ಶನೇಶ್ವರ ಹಾಗೂ ಸೂರ್ಯ ಭಗವಾನ್ ದೇವಸ್ಥಾನಕ್ಕೆ ಭೇಟಿ ಕೊಟ್ಟು, ತಮ್ಮ ಹರಕೆ ತೀರಿಸಿದ್ದಾರೆ.

Kannada Actor Darshan visits Surya Bhagvan temple in Tamil Nadu

ಅಪಘಾತದ ಬಳಿಕ ನಟ ದರ್ಶನ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ. ತಮ್ಮ ಬಲಗೈ ಸಂಪೂರ್ಣವಾಗಿ ಸರಿಹೋದ ಬಳಿಕ 'ಯಜಮಾನ' ಶೂಟಿಂಗ್ ನಲ್ಲಿ ದರ್ಶನ್ ಭಾಗವಹಿಸುತ್ತಾರೆ. ಅದು ಮುಗಿದ್ಮೇಲೆ, 'ಒಡೆಯ' ಚಿತ್ರೀಕರಣ ಶುರುವಾಗಲಿದೆ.

More from Filmibeat

English summary
Kannada Actor Darshan visits Surya Bhagvan temple in Tamil Nadu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X