For Quick Alerts
  ALLOW NOTIFICATIONS  
  For Daily Alerts

  ಆಷಾಢ ಶುಕ್ರವಾರ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ದರ್ಶನ್

  |

  ಇಂದು ಆಷಾಢ ಶುಕ್ರವಾಡ. ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ವಿಶೇಷವಾದ ಪೂಜೆ ಕೈಂಕರ್ಯಗಳು ನೆರವೇರಲಿದೆ. ಈಗಾಗಲೆ ಚಾಮುಂಡಿ ಬೆಟ್ಟದಲ್ಲಿ ಆಷಾಢ ಶ್ರುಕ್ರವಾರದ ಪೂಜೆಯ ಸಂಭ್ರಮ ಮನೆ ಮಾಡಿದೆ. ಈ ವಿಶೇಷ ದಿನದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಮುಂಡಿ ತಾಯಿ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

  ಪ್ರತೀ ವರ್ಷ ಆಷಾಢದಲ್ಲಿ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಆಷಾಢದ ಮೊದಲ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಹೋಗುವುದನ್ನು ದರ್ಶನ್ ಯಾವಾಗಲು ಮಿಸ್ ಮಾಡುವುದೆ ಇಲ್ಲ. ಇನ್ನು ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯುವ ಕಾರಣ ಭಕ್ತಾದಿಗಳ ಸಂಖ್ಯೆಯು ಹೆಚ್ಚಾಗಿರುತ್ತೆ.

  'ಕುರುಕ್ಷೇತ್ರ' ಚಿತ್ರದ ಹೊಸ ಪೋಸ್ಟರ್ ನಲ್ಲೊಂದು ವಿಶೇಷ

  ಅಪಾರ ಸಂಖ್ಯೆ ಭಕ್ತಾದಿಗಳ ನಡುವೆ ದರ್ಶನ್ ತಾಯಿಯ ಆಶೀರ್ವಾದ ಪಡೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಗೆ ಸಾಕಷ್ಟು ಸ್ನೇಹಿತರು ಸಾಥ್ ನೀಡಿದ್ದಾರೆ. ವಿಶೇಷ ಪೂಜೆ ಬಳಿಕ ಮಾತನಾಡಿದ ದರ್ಶನ್ ಚಾಮುಂಡಿ ತಾಯಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.

  ಡಿ ಬಾಸ್ ಸದ್ಯ 'ರಾಬರ್ಟ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಫಸ್ಟ್ ಲುಕ್ ಮೂಲಕವೆ ಭಾರಿ ನಿರೀಕ್ಷೆ ಮೂಡಿಸಿರುವ 'ರಾಬರ್ಟ್' ಸಾಕಷ್ಟು ವಿಶೇಷತೆಗಳಿಂದ ಗಮನ ಸಳೆಯುತ್ತಿದೆ. ಇನ್ನು ದರ್ಶನ್ ಅಭಿನಯ 'ಒಡೆಯ' ಸಿನಿಮಾ ರಿಲೀಸ್ ಗೆ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಅಲ್ಲದೆ ಬಹು ನಿರೀಕ್ಷೆಯ 'ಕುರುಕ್ಷೇತ್ರ' ಚಿತ್ರದ ಆಡಿಯೋ ರಿಲೀಸ್ ಆಗುತ್ತಿದ್ದು ಸಿನಿಮಾ ಮುಂದಿನ ತಿಂಗಳು ತೆರೆಗೆ ಬರುತ್ತಿದೆ.

  English summary
  Kannada actor Darshan visits to Chamundi hills for Ashada Shukravara. Darshan visits to Chamundi hill on Asha Friday for every year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X