For Quick Alerts
  ALLOW NOTIFICATIONS  
  For Daily Alerts

  ಆರ್ ಆರ್ ನಗರದಲ್ಲಿ ಮತದಾನ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  |

  ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದು ಆರ್‌ ಆರ್‌ ನಗರದ ಮೌಂಟ್ ಕಾರ್ಮೆಲ್ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.

  ಮಧ್ಯಾಹ್ನದ ವೇಳೆ ಮತಗಟ್ಟೆ ಬಳಿ ಬಂದ ದರ್ಶನ್ ಅವರು, ತಮ್ಮ ಮತದಾನದ ಹಕ್ಕು ಚಲಾಯಿಸಿದರು.

  ಆರ್‌ಆರ್‌ ನಗರದಲ್ಲಿ ಮತದಾನದ ಹಕ್ಕು ಚಲಾಯಿಸಿದ ನಟಿ ಅಮೂಲ್ಯಆರ್‌ಆರ್‌ ನಗರದಲ್ಲಿ ಮತದಾನದ ಹಕ್ಕು ಚಲಾಯಿಸಿದ ನಟಿ ಅಮೂಲ್ಯ

  ಆರ್‌ ಆರ್ ನಗರ ವಿಧಾನಸಭೆ ಕ್ಷೇತ್ರದಲ್ಲಿರುವ ಸೆಲೆಬ್ರಿಟಿಗಳು ಇಂದು ಬೆಳಗ್ಗೆಯಿಂದಲೂ ಮತ ಚಲಾವಣೆ ಮಾಡಿದ್ದಾರೆ. ನಟಿ ಅಮೂಲ್ಯ, ನೆನಪಿರಲಿ ಪ್ರೇಮ್ ದಂಪತಿ, ಅವಿನಾಶ್, ಕಾರುಣ್ಯ ರಾಮ್ ಸಹೋದರಿಯರು ಸೇರಿದಂತೆ ಹಲವು ಮತದಾನ ಮಾಡಿದ್ದಾರೆ.

  ಅಂದ್ಹಾಗೆ, ನಟ ದರ್ಶನ್ ಅವರು ಆರ್ ಆರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಿದ್ದರು. ಮುನಿರತ್ನ ಅವರನ್ನು ಗೆಲ್ಲಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು.

  DIRECTOR'S DIARY : ಬೆಳೆಯೋ ಟೈಮ್ ನಲ್ಲಿ ನನ್ನ ವಿರುದ್ಧ ರವಿ ಬೆಳಗೆರೆ ಪತ್ರಿಕೆಯಲ್ಲಿ ಆರ್ಟಿಕಲ್ ಬಂದಿತ್ತು| Part 1

  ಮಂಡ್ಯ ಚುನಾವಣೆಯ ನಂತರ ಆರ್ ಆರ್ ನಗರದಲ್ಲಿ ದರ್ಶನ್ ಪ್ರಚಾರ ಮಾಡಿರುವುದರಿಂದ ಸಹಜವಾಗಿ ಫಲಿತಾಂಶದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ದರ್ಶನ್ ಅವರ ಪ್ರಚಾರ ಮುನಿರತ್ನ ಅವರ ಕೈ ಹಿಡಿಯುತ್ತಾ ಎಂದು ಕಾದುನೋಡಬೇಕಿದೆ.

  English summary
  Challenging star darshan voted at RR Nagar assembly constituency.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X