'ಕುರುಕ್ಷೇತ್ರ' ಸಿನಿಮಾವನ್ನು ದರ್ಶನ್ ಎಷ್ಟುಬಾರಿ ನೋಡಿದ್ದಾರೆ ಗೊತ್ತಾ?
Recommended Video
ಕುರುಕ್ಷೇತ್ರ ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ಪೌರಾಣಿಕ ಸಿನಿಮಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಎನ್ನುವ ವಿಶೇಷತೆ ಒಂಡೆದೆ ಆದ್ರೆ, ದೊಡ್ಡ ತಾರಾಬಳಗ, 3ಡಿ ಎಫೆಕ್ಟ್, ಅದ್ದೂರಿ ಗ್ರಾಫಿಕ್ಸ್ ಚಿತ್ರದ ಮತ್ತೊಂದು ಹೈಲೆಟ್.
ಮಹಾಭಾರತ ಕಥೆಯನ್ನು ಸಿನಿಮಾ ಮೂಲಕ ಇಂದಿನ ಯುವಜನತೆಯ ಮುಂದಿಟ್ಟು ಯುವಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ನಿರ್ಮಾಪಕ ಮುನಿರತ್ನ. ಕುರುಕ್ಷೇತ್ರ ಸಿನಿಮಾಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ದುರ್ಯೋಧನನಾಗಿ ಮಿಂಚಿರುವ ದರ್ಶನ್ ಕುರುಕ್ಷೇತ್ರ ಸಿನಿಮಾವನ್ನು ಮೂರು ಬಾರಿ ನೋಡಿದ್ದಾರಂತೆ. ಒಂದು ಬಾರಿ 2 ಡಿಯಲ್ಲಿ ಚಿತ್ರ ವೀಕ್ಷಿಸಿದ್ರೆ, ಎರಡು ಭಾರಿ 3ಡಿಯಲ್ಲಿ ನೋಡಿದ್ದಾರಂತೆ. ಸಾಮಾನ್ಯವಾಗಿ ದರ್ಶನ್ ಅವರ ಸಿನಿಮಾವನ್ನು ನೋಡುವುದು ಅಪರೂಪ. ಅಂತಹದ್ರಲ್ಲಿ ದರ್ಶನ್ ಮೂರು ಬಾರಿ ಸಿನಿಮಾ ವೀಕ್ಷಿಸಿದ್ದಾರೆ.

ಇತ್ತೀಚಿಗಷ್ಟೆ ಚಿತ್ರತಂಡ ಸೆಲೆಬ್ರಿಟಿ ಶೋ ಆಯೋಜಿಸಿತ್ತು. ಅನೇಕ ಕಲಾವಿದರು ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಮೂರು ಬಾರಿ ಸಿನಿಮಾ ನೋಡಿರುವ ಬಗ್ಗೆ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ನಿರ್ಮಾಪಕ ಮುನಿರತ್ನ ಸಿಎಂ ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಶಾಲೆ ಮಕ್ಕಳಿಗಾಗಿ ಸಿನಿಮಾ ಶೋ ಮಾಡಲು ಟ್ಯಾಕ್ಸ್ ಫ್ರೀ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಮಕ್ಕಳಿಗಾಗಿ ಟ್ಯಾಕ್ಸ್ ಫ್ರೀ ಮಾಡುತ್ತಾ ಸರ್ಕಾರ ಕಾದು ನೋಡಬೇಕು.


Click it and Unblock the Notifications











