ಟ್ವಿಟ್ಟರ್ ನಲ್ಲಿ 'ದರ್ಶನ್' ಹೆಸರನ್ನು ತೆಗೆದುಹಾಕಿದ ಪತ್ನಿ ವಿಜಯಲಕ್ಷ್ಮಿ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಸಾರದ ಗಲಾಟೆ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ದರ್ಶನ್ ಮತ್ತೆ ಪತ್ನಿ ವಿಜಯಲಕ್ಷ್ಮಿಗೆ ಹೊಡೆದಿದ್ದಾರೆ ಎನ್ನುವ ಸುದ್ದಿ ನಿನ್ನೆಯಿಂದ(ಆಗಸ್ಟ್ 10) ಗಾಂಧಿನಗರದಲ್ಲಿ ದೊಡ್ಡ ಸುದ್ದಿಯಾಗಿದೆ.
ಸಂಸಾರದ ವಿಚಾರ ಮತ್ತೆ ಬೀದಿಗೆ ಬಂದಿದೆ ಎನ್ನುವ ಮಾತುಗಳು ಜೋರಾಗಿ ಹರಿದಾಡುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ದಿಢಾರ್ ನೆ ಟ್ವೀಟ್ ಮಾಡಿದ್ದಾರೆ. "ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು" ಎಂದು ಹೇಳಿದ್ದಾರೆ.
ವಿಜಯಲಕ್ಷ್ಮಿ ಟ್ವೀಟ್ ಮಾಡುತ್ತಿದ್ದಂತೆ ಏನಿರ ಬಹುದು, ಏನಾಗಿದೆ ಎನ್ನುವ ಗೊಂದಲ ಅಭಿಮಾನಿಗಳಲ್ಲೂ ಕಾಡುತ್ತಿದೆ. ವಿಜಯಲಕ್ಷ್ಮಿ ಯಾಕೆ ಹೀಗೆ ಟ್ವೀಟ್ ಮಾಡಿದ್ರು ಎನ್ನುವಷ್ಟೊತ್ತಿಗೆ ವಿಜಯಲಕ್ಷ್ಮಿ ಅವರ ಹೆಸರಿನ ಪಕ್ಕದಲ್ಲೆ ಇದ್ದ ದರ್ಶನ್ ಹೆಸರನ್ನು ತೆಗೆದುಹೊಕಿದ್ದಾರೆ.

ವಿಜಯಲಕ್ಷ್ಮಿದರ್ಶನ್ ಈಗ ಬರಿ ವಿಜಯಲಕ್ಷ್ಮಿ
ಟ್ವಿಟರ್ ನಲ್ಲಿ ವಿಜಯಲಕ್ಷ್ಮಿ ಅವರ ಹೆಸರು ವಿಜಯಲಕ್ಷ್ಮಿದರ್ಶನ್ ಎಂದು ಇತ್ತು. ಆದ್ರೀಗ ವಿಜಯಲಕ್ಷ್ಮಿ ಪಕ್ಕದಲ್ಲಿದ್ದ ದರ್ಶನ್ ಹೆಸರು ಮಾಯವಾಗಿದೆ. ನಿನ್ನೆ(ಆಗಸ್ಟ್ 10) ರಾತ್ರಿವರೆಗೂ ಟ್ವಿಟರ್ ನಲ್ಲಿ ವಿಜಯಲಕ್ಷ್ಮಿ ಹೆಸರಿನ ಜೊತೆ ದರ್ಶನ್ ಹೆಸರಿತ್ತು ಆದ್ರೀಗ ಕಾಣುತ್ತಿಲ್ಲ. ದರ್ಶನ್ ಹೆಸರು ತೆಗೆದುಹಾಕಿದ್ದು ಎದ್ದ ಗಾಳಿಸುದ್ದಿಗೆ ಮತ್ತಷ್ಟು ಪುಷ್ಟಿ ನೀಡುವಂತಿದೆ.

ಇಂದು ಟ್ವೀಟ್ ಮಾಡಿರುವ ವಿಜಯಲಕ್ಷ್ಮಿ
ಇಂದು ವಿಜಯಲಕ್ಷ್ಮಿ "ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು" ಎಂದು ಟ್ವೀಟ್ ಮಾಡಿದ್ದಾರೆ. ದರ್ಶನ್ ಮತ್ತೆ ಪತ್ನಿ ವಿಜಯಲಕ್ಷ್ಮಿಗೆ ಚೆನ್ನಾಗಿ ಹೊಡೆದಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿತ್ತು. ಇದರ ಬೆನ್ನಲ್ಲೆ ವಿಜಯಲಕ್ಷ್ಮಿ ಟ್ವೀಟ್ಟ್ ಮಾಡುವ ಮೂಲಕ ಎದ್ದ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಮತ್ತೆ ಪತ್ನಿ ಮೇಲೆ ಕೈ ಮಾಡಿದ ದರ್ಶನ್?
ಸದ್ಯ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಹೊಸಕೆರೆ ಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಾರಂತೆ. ಇಬ್ಬರು ಹಳೆಯದನ್ನೆಲ್ಲವನ್ನು ಮರೆತು ಒಟ್ಟಿಗೆ ಜೀವನ ಸಾಗಿಸುತ್ತಿದ್ದರು. ಆದ್ರೀಗ ಮತ್ತೆ ಪತ್ನಿಯ ಮೇಲೆ ಕೈ ಮಾಡಿದ್ದಾರೆ ಎನ್ನುವ ಮಾತುಗಳು ಹೇಳಿ ಬರುತ್ತಿವೆ. ಪತ್ನಿಗೆ ರಕ್ತ ಬರುವ ಹಾಗೆ ಹೊಡೆದು ಸಿಗರೇಟಿನಿಂದ ಸುಟ್ಟಿದ್ದಾರಂತೆ. ಪತ್ನಿ ಮಾತ್ರವಲ್ಲದೆ ವಿಜಯಲಕ್ಷ್ಮಿ ತಾಯಿಗೂ ಸರಿಯಾಗಿ ಹೊಡೆದಿದ್ದಾರಂತೆ. ಹೀಗಂತ ಸುದ್ದಿ ಜೋರಾಗಿ ಹರಿದಾಡುತ್ತಿದೆ.

ಇಂದು ಸಂದಾನ ಸಾಧ್ಯತೆ?
ದರ್ಶನ್ ಸಂಸಾರ ಗಲಾಟೆ ವಿಚಾರ ಮತ್ತೆ ಬೀದಿಗೆ ಬಂದಿರುವುದು ದೊಡ್ಡ ಸುದ್ದಿಯಾಗುತ್ತಿದ್ದಂತೆ ರಾಜಕೀಯ ವ್ಯಕ್ತಿಯೊಬ್ಬರು ಮಧ್ಯಪ್ರವೇಶಿಸಿ ಇಬ್ಬರ ಸಂದಾನಕ್ಕೆ ಮುಂದಾಗಿದ್ದಾರಂತೆ. ಪತ್ನಿ ವಿಜಯಲಕ್ಷ್ಮಿ ಅವರನ್ನು ಸಮಾಧಾನ ಮಾಡಿ ಪತಿ-ಪತ್ನಿಯ ಸಂದಾನ ಕಾರ್ಯಾ ಮಾಡುತ್ತಿದ್ದಾರೆ. ದರ್ಶನ್ ಕುಟುಂಬಕ್ಕೆ ತುಂಬ ಆಪ್ತರಾಗಿರುವರು ಇಂದು ಇಬ್ಬರನ್ನು ಮತ್ತೆ ಒಂದು ಮಾಡುವ ಪ್ರಯತ್ನ ಮಾಡಲಾಗುತ್ತಿ ಎಂದು ಹೇಳಲಾಗುತ್ತಿದೆ.

ಕಾರಣ ಏನು?
ಮೂಲಗಳ ಪ್ರಕಾರ ದರ್ಶನ್ ಕುರುಕ್ಷೇತ್ರ ಸಿನಿಮಾ ರಿಲೀಸ್ ಆದ್ಮೇಲೆ ತುಂಬ ಅಪ್ ಸೆಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ನಿರೀಕ್ಷೆ ತಕ್ಕಂತೆ ಅವರ ಪಾತ್ರ ಮೂಡಿ ಬಂದಿಲ್ಲ ಎಂದು ಬುಸುಗುಟ್ಟುತ್ತಿದ್ದರಂತೆ. ಅದೇ ಸಿಟ್ಟನ್ನು ಪತ್ನಿ ಮತ್ತು ಅತ್ತೆಯ ಮೇಲೆ ಹೊಡೆದು ತೀರಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಆದ್ರೆ ಇದೆಲ್ಲ ಸುಳ್ಳು ಎಂದು ವಿಜಯಲಕ್ಷ್ಮಿ ಟ್ವೀಟ್ ಮಾಡಿದ್ದಾರೆ. ಆದ್ರೆ ಅವರು ಸುಳ್ಳು ಎಂದು ಹೇಳುತ್ತಿದ್ದರು ಅವರ ಹೆಸರಿನ ಜೊತೆಯಲ್ಲಿದ್ದ ದರ್ಶನ್ ಹೆಸರು ದಿಢೀರನೆ ಮಾಯವಾಗಿದ್ದು ಮತ್ತಷ್ಟು ಅನುಮಾನ ಮೂಡಿಸಿದೆ.


Click it and Unblock the Notifications











