ರಂಜಾನ್ ಗೆ ಶುಭಕೋರಿದ ನಟ ದರ್ಶನ್ ಮತ್ತು ಸಹೋದರ

By Bharath Kumar

ದೇಶದಲ್ಲೆಡೆ ಇಂದು ರಂಜಾನ್ ಹಬ್ಬವನ್ನ ಸಂಪ್ರದಾಯವಾಗಿ ಆಚರಿಸುತ್ತಿದ್ದಾರೆ. ಸಮಸ್ತ ಮುಸ್ಲಿಂರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈದ್ ಮುಬಾರಕ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಶುಭಕೋರಿರುವ ದರ್ಶನ್ ''ಅಲ್ಲಾ ನಿಮ್ಮನ್ನು ಪ್ರಾಮಾಣಿಕತೆ ಮತ್ತು ಸಮೃದ್ಧಿಯ ಮಾರ್ಗದ ಕಡೆಗೆ ಕರೆದೊಯ್ಯುಲಿ ಮತ್ತು ಸಂತೋಷದಿಂದ ನಿಮ್ಮನ್ನು ಆಶೀರ್ವದಿಸಲಿ. ಈದ್ ಮುಬಾರಕ್!!'' ಎಂದು ಹೇಳಿದ್ದಾರೆ.

ಮುಸ್ಲಿಂ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದ ಫೋಟೋವನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವುದು ವಿಶೇಷವಾಗಿ ಗಮನ ಸೆಳೆಯುತ್ತಿದೆ. ದರ್ಶನ್ ಜೊತೆಗೆ ದರ್ಶನ್ ಸಹೋದರ ದಿನಕರ್ ತೂಗುದೀಪ ಅವರು ಕೂಡ ರಂಜಾನ್ ಹಬ್ಬಕ್ಕೆ ಶುಭ ಕೋರಿದ್ದಾರೆ.

''ಈ ದಿನದ ಪ್ರತಿ ಕ್ಷಣಗಳು ನಿಮಗೆ ಸಂತೋಷ ಸಿಗಲಿ. ವರ್ಷವಿಡಿ ನಿಮ್ಮ ಮನೆ ಮತ್ತು ಕುಟುಂಬ ಮತ್ತು ವಿಶೇಷವಾಗಿ ಎಲ್ಲರಿಗೂ ಒಳ್ಳೆಯದಾಗಲಿ. ಈದ್ ಮುಬಾರಕ್!'' ಎಂದು ಟ್ವೀಟ್ ಮಾಡಿದ್ದಾರೆ.

Kannada actor darshan wish to ramzan festival

ದಿನಕರ್ ತೂಗುದೀಪ್ ನಿರ್ದೇಶನದ 'ಲೈಪ್ ಜೊತೆ ಸೆಲ್ಫಿ' ಸಿನಿಮಾದ ಟ್ರೈಲರ್ ಮತ್ತು ಹಾಡುಗಳು ನಿನ್ನೆಯಷ್ಟೇ ಬಿಡುಗಡೆಯಾಗಿದೆ. ನೆನಪಿರಲಿ ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಅಭಿನಯದ ಈ ಚಿತ್ರಕ್ಕೆ ದಿನಕರ್ಅವರ ಪತ್ನಿ ಕಥೆ ಬರೆದಿದ್ದಾರೆ.

More from Filmibeat

English summary
Kannada actor, challenging star darshan, and his brother dinakar thoogudeepa has taken their twitter account to wish for ramzan festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X