For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ಸಿನಿಮಾದಲ್ಲಿ ನಟಿಸಿದ ಕನ್ನಡದ ದತ್ತಣ್ಣ

  |

  ಕನ್ನಡದ ಹೆಮ್ಮೆಯ ನಟ ದತ್ತಣ್ಣ ಈಗ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ನಟಿಸಿದ್ದಾರೆ. 'ಮಿಷನ್ ಮಂಗಲ್' ಸಿನಿಮಾದಲ್ಲಿ ದತ್ತಣ್ಣ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

  'ಮಿಷನ್ ಮಂಗಲ್' ಸಿನಿಮಾದ ಟ್ರೇಲರ್ ಇಂದು (ಜುಲೈ 9) ರಂದು ಬಿಡುಗಡೆಯಾಗಿದೆ. ಭಾರತ ಮಂಗಳ ಗ್ರಹಕ್ಕೆ ರಾಕೆಟ್ ಉಡಾವಣೆ ಮಾಡಿದ ಸಾಧನೆಯ ಕಥೆ ಸಿನಿಮಾ ರೂಪ ಪಡೆದಿದೆ. ರಾಕೆಟ್ ಉಡಾವಣೆ ಹಿಂದಿನ ಶ್ರಮ ಹಾಗೂ ಅದರ ಪ್ರತಿ ಕ್ಷಣವನ್ನು ಇಲ್ಲಿ ಕಟ್ಟಿಕೊಡಲಾಗಿದೆ.

  ನೀರ್ ದೋಸೆ 'ದತ್ತಣ್ಣ'ಗೆ 75 ವರ್ಷ ಆಯ್ತಣ್ಣಾ.! ನೀರ್ ದೋಸೆ 'ದತ್ತಣ್ಣ'ಗೆ 75 ವರ್ಷ ಆಯ್ತಣ್ಣಾ.!

  ಅಕ್ಷಯ್ ಕುಮಾರ್ ರಾಕೇಶ್ ಧವಾನ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್ ಐಯ್ಯರ್ ಎಂಬ ಪಾತ್ರವನ್ನು ದತ್ತಣ್ಣ ನಿರ್ವಹಿಸಿದ್ದಾರೆ. ಟ್ರೇಲರ್ ನ ಮೂರ್ನಾಲ್ಕು ಶಾಟ್ ನಲ್ಲಿ ಅವರು ಕಾಣಿಸುತ್ತಾರೆ. ಇದೇ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜೊತೆಗೆ ದತ್ತಣ್ಣ ತೆರೆ ಹಂಚಿಕೊಳ್ಳುತ್ತಿದ್ದಾರೆ.

  ಸಿನಿಮಾದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ದತ್ತಣ್ಣ, ತಾಪ್ಸಿ ಪನ್ನು, ನಿತ್ಯಾ ಮೆನನ್ ಎಲ್ಲರೂ ಸೌತ್ ಇಂಡಿಯಾದವರೇ ಆಗಿದ್ದಾರೆ. ಉಳಿದಂತೆ, ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ ಇದ್ದಾರೆ.

  ಹಿರಿಯ ನಟ 'ದತ್ತಣ್ಣ' ಫಿಲ್ಮಿಬೀಟ್ ಕನ್ನಡಕ್ಕೆ ಬರೆದಿರುವ ಪತ್ರ... ಹಿರಿಯ ನಟ 'ದತ್ತಣ್ಣ' ಫಿಲ್ಮಿಬೀಟ್ ಕನ್ನಡಕ್ಕೆ ಬರೆದಿರುವ ಪತ್ರ...

  'ಮಿಷನ್ ಮಂಗಲ್' ಸಿನಿಮಾವನ್ನು ಜಗನ್ ಶಕ್ತಿ ನಿರ್ದೇಶನ ಮಾಡಿದ್ದಾರೆ. ಅಮಿತ್ ತ್ರಿವೇದಿ ಸಂಗೀತ ನೀಡಿದ್ದಾರೆ. ಆಗಸ್ಟ್ 15 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ.

  ಟ್ರೇಲರ್ ನೋಡಲು ಇಲ್ಲಿ ಕ್ಲಿಕ್ ಮಾಡಿ

  English summary
  Kannada actor Dattatreya played important role in 'Mission Mangal' movie. Akshay Kumar 'Mission Mangal' trailer released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X