For Quick Alerts
  ALLOW NOTIFICATIONS  
  For Daily Alerts

  ತಾತ ಆದ ಧನಂಜಯ್ : ಇದು ರೀಲ್ ಸುದ್ದಿ ಅಲ್ಲ

  |
  ಮತ್ತೊಂದು ಸಂತಸದ ಸುದ್ದಿ ಹಂಚಿಕೊಂಡ ನಟ ಧನಂಜಯ್ | Filmibeat Kannada

  ನಟ ಧನಂಜಯ್ ಸದ್ಯ 'ಭೈರವ ಗೀತ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡು ನಿನ್ನೆ ತಾನೇ ಬಿಡುಗಡೆಯಾಗಿದೆ. ಈ ಸಂತಸದಲ್ಲಿ ಇದ್ದ ಧನಂಜಯ್ ಗೆ ಈಗ ಮತ್ತೊಂದು ಖುಷಿಯ ವಿಚಾರ ಸಿಕ್ಕಿದೆ.

  ಡಾಲಿಯನ್ನ 'ಭೈರವ'ನಾಗಿ ನೋಡಲು ದಿನಾಂಕ ಪಕ್ಕಾ ಆಗಿದೆ ಡಾಲಿಯನ್ನ 'ಭೈರವ'ನಾಗಿ ನೋಡಲು ದಿನಾಂಕ ಪಕ್ಕಾ ಆಗಿದೆ

  ಧನಂಜಯ್ ಈಗ ತಾತ ಆಗ್ತಿದ್ದಾರೆ... ಅಯ್ಯೋ ಇದೇನೂ ಹಬ್ಬದ ದಿನ ತಮಾಷೆ ಮಾಡ್ತಿದ್ದಾರೆ ಅಂತ ಕೇಳಬೇಡಿ. ನಿಜಕ್ಕೂ ನಿಮ್ಮ ಡಾಲಿ ಧನಂಜಯ್ ತಾತ ಆಗಿದ್ದಾರೆ. ನಂಬಿಕೆ ಇಲ್ಲ ಅಂದರೆ ನೀವೆ ಅವರ ಇನ್ಟಾಗ್ರಾಮ್ ಖಾತೆಯನ್ನು ಒಮ್ಮೆ ನೋಡಿ.

  ತಮ್ಮ ಇನ್ಟಾಗ್ರಾಮ್ ಖಾತೆಯ ಮೂಲಕ ಧನಂಜಯ್ ತಮ್ಮ ಕುಟುಂಬದ ಖುಷಿಯ ವಿಷಯವನ್ನು ಹಂಚಿಕೊಂಡಿದ್ದಾರೆ. ''ಅಣ್ಣನ ಮಗಳ ಮಗ, ನನ್ನ ಮೊಮ್ಮಗ Allready ತಾತ ಆಗೋದೆ ನೋಡಿ'' ಎಂದಿದ್ದಾರೆ. ಹೌದು, ಧನಂಜಯ್ ಸಹೋದರರ ಮಗಳಿಗೆ ಮಗು ಹುಟ್ಟಿದ್ದು, ಧನಂಜಯ್ ಆ ಮಗುವಿನಿಂದ 'ತಾತ' ಎಂದು ಕರೆಸಿಕೊಳ್ಳುತ್ತಾರೆ.

  ಅರಸಿಕೆರೆ ಹುಡುಗ ಧನಂಜಯ್ ಸಿನಿಮಾಗಳ ಜೊತೆಗೆ ಕುಟುಂಬಕ್ಕೆ ನೀಡಬೇಕಾದ ಸಮಯ, ಪ್ರೀತಿ ಎಲ್ಲವನ್ನು ನೀಡುತ್ತಾರೆ. ಸಿನಿಮಾದ ಕೆಲಸ ಇಲ್ಲದ ಟೈಂ ನಲ್ಲಿ ಆದಷ್ಟೂ ಸಮಯವನ್ನು ಊರಿನಲ್ಲಿರುವ ಫ್ಯಾಮಿಲಿ ಜೊತೆಗೆ ಕಳೆಯುತ್ತಾರೆ.

  English summary
  Kannada actor Dolly fame, Dhananjay become a grandfather.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X