ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಧನಂಜಯ್

By Naveen

Recommended Video

ಹೇಗಿದೆ ನೋಡಿ ಡಾಲಿ ಡೇ..!! | Filmibeat Kannada

ಇಂದು ನಟ ಧನಂಜಯ್ ಅವರ ಹುಟ್ಟುಹಬ್ಬ. ಪ್ರತಿ ವರ್ಷ ಕೂಡ ಈ ದಿನವನ್ನು ಅವರು ತಮ್ಮ ಅಭಿಮಾನಿಗಳೊಂದಿಗೆ ಆಚರಣೆ ಮಾಡುತ್ತಾರೆ. ಅದೇ ರೀತಿ ಈ ವರ್ಷ ಸಹ ತಮ್ಮ ಫ್ಯಾನ್ಸ್ ಜೊತೆ ಸೇರಿ ಮಧ್ಯರಾತ್ರಿಯಿಂದಲೇ ಧನಂಜಯ್ ಸಂಭ್ರಮ ಪ್ರಾರಂಭ ಆಗಿದೆ.

ಹುಟ್ಟುಹಬ್ಬದ ಆಚರಣೆಗೆ ಮೊದಲು ಧನಂಜಯ್ ಅಭಿಮಾನಿಗಳಿಗೆ ಒಂದು ಮನವಿ ಮಾಡಿದರು. ಕೊಡಗಿನಲ್ಲಿ ಪ್ರವಾಹದಿಂದ ಕಣ್ಣೀರು ಹಾಕುತ್ತಿರುವ ಜನರಿಗೆ ಸಹಾಯ ಮಾಡೋಣ ಎಂದು ಕೇಳಿಕೊಂಡರು. ಅದೇ ರೀತಿ ಧನಂಜಯ್ ಅಭಿಮಾನಿಗಳು ಹೆಚ್ಚು ಕೇಕ್, ಹಾರ, ಪಟಾಕಿ ಇಲ್ಲದೆ ದುಡ್ಡನ್ನು ಕೊಡಗು ಜನರಿಗೆ ನೀಡಿದರು.

kannada actor dhananjay calibrated his birthday

ಅಭಿಮಾನಿಗಳ ಹಣದ ಜೊತೆಗೆ ತಾವು ಒಂದಷ್ಟು ಹಣ ಸೇರಿಸಿ ಅದನ್ನು ಕೊಡಗು ಜನರಿಗೆ ನೀಡುವುದಾಗಿ ಧನಂಜಯ್ ತಿಳಿಸಿದರು. 'ಟಗರು' ಸಿನಿಮಾದ ನಂತರ ದೊಡ್ಡ ಅಭಿಮಾನಿ ಬಳಗವನ್ನು ಧನಂಜಯ್ ಪಡೆದಿದ್ದು, ಈ ಬಾರಿ ಹುಟ್ಟುಹಬ್ಬಕ್ಕೆ ಬಂದ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಿತ್ತು. ಜಿ ಪಿ ನಗರದ ಒಂದು ಮೈದಾನದಲ್ಲಿ ಧನಂಜಯ್ ಬರ್ತ್ ಡೇ ನಡೆಯಿತು.

ಅಂದಹಾಗೆ, ಡಾಲಿ ಪಾತ್ರದ ಬಳಿಕ ಧನಂಜಯ್ ದೊಡ್ಡ ಹೆಸರು ಮಾಡಿದ್ದಾರೆ. ಇದೀಗ ರಾಮ್ ಗೋಪಾಲ್ ವರ್ಮ ಅವರ ನಿರ್ದೇಶನ 'ಭೈರವ ಗೀತ' ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಜೊತೆಗೆ ನಿರ್ದೇಶಕ ಸೂರಿ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರವನ್ನು ಧನಂಜಯ್ ಗಾಗಿ ಮಾಡುತ್ತಿದ್ದಾರೆ.

More from Filmibeat

English summary
Kannada actor Dhananjay calibrated his birthday in JP Nagara, Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X