ಎಕ್ಸ್ ಕ್ಲ್ಯೂಸಿವ್: ಗುಮ್ಮೋ 'ಟಗರಿಗೆ' ಎದುರಾಗಿ ನಿಂತ ಧನಂಜಯ್
ಚಿತ್ರಗಳಲ್ಲಿ ಹೀರೋ ಆಗಿ ನಟನೆ ಮಾಡುತ್ತಿದ್ದವರು, ಸಡನ್ ಆಗಿ ವಿಲನ್ ರೋಲ್ ಮಾಡಿದರೆ ಹೇಗಿರುತ್ತದೆ. ಆವಾಗ ಅವರಿಗೆ ಸಿಗೋ ಪಬ್ಲಿಸಿಟಿನೇ ಬೇರೆ ಇರುತ್ತೆ. ಇತ್ತೀಚೆಗೆ ಈ ಟ್ರೆಂಡ್ ಭಾರಿ ಚಾಲ್ತಿಯಲ್ಲಿದ್ದು, ಬೇರೆ ಭಾಷೆಗಳಲ್ಲಿ ಆಗಲೇ ಶುರುವಾಗಿ ಬಿಟ್ಟಿದೆ.
ಇದೀಗ ಈ ಹೊಸ ಟ್ರೆಂಡ್ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದೆ. ಇಷ್ಟು ದಿನ ಹೀರೋ ಆಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ, ಕನ್ನಡದ 'ಬದ್ಮಾಶ್', 'ಬಾಕ್ಸಾರ್' ಅಂತಾನೇ ಖ್ಯಾತಿ ಹೊಂದಿರುವ ನಟ ಧನಂಜಯ್ ಅವರು ಇನ್ನುಮುಂದೆ ವಿಲನ್ ಆಗಿ ಅಭಿಮಾನಿಗಳಿಗೆ ತಮ್ಮ ಇನ್ನೊಂದು ಮುಖ ತೋರಿಸಲಿದ್ದಾರೆ.['ಜೆಸ್ಸಿ' ನಟ ಧನಂಜಯ್ ಗೆ ಸ್ಫೂರ್ತಿಯ ಸೆಲೆ ಯಾರು?]
ಅಷ್ಟಕ್ಕೂ ನಟ ಧನಂಜಯ್ ಅವರು ಯಾವ ಚಿತ್ರದಲ್ಲಿ, ಯಾರಿಗೆ ವಿಲನ್ ಅಂತ ಯೋಚನೆ ಮಾಡ್ತಾ ಇದ್ದೀರಾ?. ನಿಮ್ಮ ಫಿಲ್ಮಿಬೀಟ್ ಕನ್ನಡಕ್ಕೆ ದೊರಕಿರುವ ಎಕ್ಸ್ ಕ್ಲ್ಯೂಸಿವ್ ಮಾಹಿತಿ ತಿಳಿಯುವ ಕುತೂಹಲವಿದ್ದರೆ, ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ.....

ಯಾರಿಗೆ ವಿಲನ್.?
ಅಂದಹಾಗೆ ನಟ ಧನಂಜಯ್ ವಿಲನ್ ಆಗಿದ್ದು ಬೇರೆ ಯಾರಿಗೂ ಅಲ್ಲ, ನಮ್ಮೆಲ್ಲರ ಮೆಚ್ಚಿನ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ. ಇದೇ ಮೊದಲ ಬಾರಿಗೆ ಶಿವಣ್ಣ ಅವರಿಗೆ ಎದುರಾಗಿ ನಿಂತಿದ್ದಾರೆ ಧನಂಜಯ್.['ದೊಡ್ಮನೆ ಹುಡುಗ' ಬಂದ ತಕ್ಷಣ 'ಟಗರು' ಪಳಗಿಸ್ತಾರಾ ಸೂರಿ.?]

'ಟಗರಿಗೆ' ಧನಂಜಯ್ ವಿಲನ್
ಶಿವರಾಜ್ ಕುಮಾರ್ ಅವರ 'ಟಗರು-ಮೈಯೆಲ್ಲಾ ಪೊಗರು' ಚಿತ್ರದಲ್ಲಿ ನಟ ಧನಂಜಯ್ ಅವರು ಶಿವಣ್ಣ ಅವರಿಗೆ ವಿಲನ್ ಆಗಿದ್ದಾರೆ. ಈ ಮಾಹಿತಿಯನ್ನು ಖುದ್ದು 'ಟಗರು' ಚಿತ್ರತಂಡ, ನಿಮ್ಮ ಫಿಲ್ಮಿಬೀಟ್ ಕನ್ನಡಕ್ಕೆ ಒದಗಿಸಿದೆ.[ಶಿವಣ್ಣ 54: ಯಾರ್ಯಾರು ಏನೇನು ಗಿಫ್ಟ್ ಕೊಟ್ಟರು.?]

ಮುಂದಿನ ತಿಂಗಳು ಲಾಂಚ್
ನಿರ್ದೇಶಕ ದುನಿಯಾ ಸೂರಿ ನಿರ್ದೇಶನದ 'ಟಗರು-ಮೈಯೆಲ್ಲಾ ಪೊಗರು' ಮುಂದಿನ ತಿಂಗಳು 21ನೇ ತಾರೀಖಿನಂದು ಸೆಟ್ಟೇರುತ್ತಿದೆ. ಚಿತ್ರದಲ್ಲಿ ಶಿವಣ್ಣ ಅವರಿಗೆ ನಾಯಕಿಯಾಗಿ 'ಕೆಂಡಸಂಪಿಗೆ' ಚಿತ್ರದ ಚೆಲುವೆ ಮಾನ್ವಿತಾ ಹರೀಶ್ ಅವರು ಕಾಣಿಸಿಕೊಂಡಿದ್ದಾರೆ.['ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ]

ಯಾವುದಕ್ಕೂ ಸೈ ಎನ್ನುವ ಧನಂಜಯ್
'ಡೈರೆಕ್ಟರ್ ಸ್ಪೆಷಲ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ನಟ ಧನಂಜಯ್ ಅವರು ಯಾವುದೇ ಪಾತ್ರ ಕೊಟ್ಟರು ನಿಭಾಯಿಸಲು ತಯಾರಿರುತ್ತಾರೆ. ಅದಕ್ಕೆ ಉತ್ತಮ ನಿದರ್ಶನ ಎಂದರೆ 'ರಾಟೆ' ಮತ್ತು 'ಬಾಕ್ಸರ್' ಚಿತ್ರಗಳು.

ಸಲ್ಮಾನ್ ಮೆಚ್ಚಿದ 'ಬದ್ಮಾಶ್'
ಸದ್ಯಕ್ಕೆ 'ಬದ್ಮಾಶ್' ಮತ್ತು 'ಅಲ್ಲಮ' ಚಿತ್ರವನ್ನು ಪೂರ್ಣಗೊಳಿಸಿರುವ ನಟ ಬಿಡುಗಡೆಗೆ ಕಾಯುತ್ತಿದ್ದಾರೆ. ಅಲ್ಲದೇ ವಿಶೇಷವಾಗಿ ಬಾಲಿವುಡ್ ನಟ ಸಲ್ಮಾನ್ 'ಬದ್ಮಾಶ್' ಚಿತ್ರದ ಟ್ರೈಲರ್ ನೋಡಿ ಧನಂಜಯ್ ಅವರ ನಟನೆಯನ್ನು ಮೆಚ್ಚಿಕೊಂಡಿದ್ದರು.

ಹೀರೋಗಿರಿ ಬಿಟ್ಟು ವಿಲನ್ ಗಿರಿ
ಅಂತೂ-ಇಂತೂ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಸದ್ದಿಲ್ಲದೇ ಯಶಸ್ಸಿನ ಮೆಟ್ಟಿಲನ್ನು ಒಂದೊಂದಾಗಿ ಏರುತ್ತಿರುವ ನಟ ಧನಂಜಯ್ ಅವರು ಇದೀಗ ಹೀರೋಗಿರಿ ಪಕ್ಕಕ್ಕಿಟ್ಟು, ವಿಲನ್ ಗಿರಿ ತೋರಿಸಲು ತಯಾರಿ ನಡೆಸುತ್ತಿದ್ದಾರೆ.


Click it and Unblock the Notifications











