'ಡಾಲಿ' ಧನಂಜಯ್ ಸಿಕ್ಸ್ ಪ್ಯಾಕ್ ಧನಂಜಯ್ ಆಗ್ತಿದ್ದಾರೆ
ನಟ ಧನಂಜಯ್ 'ಡಾಲಿ' ಅಂತ್ತಾನೆ ಫೇಮಸ್ ಆಗಿದ್ದಾರೆ. ಆದರೆ, ಡಾಲಿ ಈಗ ಸಿಕ್ಸ್ ಪ್ಯಾಕ್ ಮೈ ಹೊತ್ತು ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದಾರೆ. ಈಗಾಗಲೇ, ಧನಂಜಯ್ ವರ್ಕ್ ಔಟ್ ಶುರು ಮಾಡಿದ್ದಾರೆ.
'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾಗಾಗಿ ಧನಂಜಯ್ ಸಿಕ್ಸ್ ಪ್ಯಾಕ್ ಮಾಡುತ್ತಿದ್ದಾರೆ. ತಮ್ಮ ಟ್ರೈನರ್ ಜೊತೆಗೆ ವರ್ಕ್ ಔಟ್ ನಲ್ಲಿ ಭಾಗಿಯಾಗಿರುವ ಫೋಟೋವನ್ನು ಧನಂಜಯ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಡಾಲಿ ಎಂಬ ಕ್ರೂರನ ಪಾತ್ರ ನಂತರ ಮತ್ತೊಂದು ಭಯಾನಕ ಪಾತ್ರದ ಮೂಲಕ ಧನಂಜಯ್ ಬಂದಿದ್ದಾರೆ. 'ಪಾಪ್ ಕಾರ್ನ್ ಮಂಕಿ ಟೈಗರ್' ಮೂಲಕ ಮತ್ತೆ ತಮ್ಮ ನಟನ ಸಾಮರ್ಥವನ್ನು ಹೊರ ಹಾಕುತ್ತಿದ್ದಾರೆ. ಮತ್ತೆ ನಿರ್ದೇಶಕ ಸೂರಿ ಗ್ಯಾಂಗ್ ನಲ್ಲಿ ಡಾಲಿ ಕೆಲಸ ಮಾಡುತ್ತಿದ್ದಾರೆ.

'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಶೂಟಿಂಗ್ ಸದ್ಯ ನಡೆಯುತ್ತಿದೆ. ಈ ಸಿನಿಮಾದಲ್ಲಿ ನೀವೇದಿತಾ, ಸಪ್ತಮಿ ಹಾಗೂ ಅಮೃತ ಮೂರು ನಾಯಕಿಯರು ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು.
English summary
Kannada actor Dhananjay workout for 'Popcorn Monkey Tiger' movie.


Click it and Unblock the Notifications