ಆಕ್ಟರ್ -ಡಾಕ್ಟರ್ ಮದುವೆ; ಧನಂಜಯ್- ಧನ್ಯತಾ ಮದುವೆ ಲಗ್ನಪತ್ರಿಕೆ ಹೇಗಿದೆ ನೋಡಿ

ನಟ ಡಾಲಿ ಧನಂಜಯ್ ಮದುವೆ ನಿಶ್ಚಯವಾಗಿದೆ. ವೈದ್ಯೆ ಧನ್ಯತಾ ಜೊತೆ ಡಾಲಿ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಇದೀಗ ಬಹಳ ಸರಳ ಸುಂದರವಾದ ಮದುವೆ ಆಮಂತ್ರಣ ಪತ್ರಿಕೆಯನ್ನು ಕೂಡ ಹಂಚಿಕೊಂಡಿದ್ದಾರೆ. ಫೆಬ್ರವರಿ 15 ಮತ್ತು 16ರಂದು ಮೈಸೂರಿನಲ್ಲಿ ಮದುವೆ ನಡೆಯಲಿದೆ.

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಡಾಲಿ ಧನಂಜಯ್ ತಮ್ಮ ಮದುವೆ ವಿಚಾರ ಬಹಿರಂಗಪಡಿಸಿದ್ದರು. ಗೆಳತಿ ಧನ್ಯತಾ ಜೊತೆ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಮೈಸೂರಿನಲ್ಲಿ ಓದುತ್ತಿದ್ದಾಗಲೇ ಶುರುವಾದ ಇಬ್ಬರ ಪರಿಚಯ ಕಳೆದ ಎರಡು ವರ್ಷಗಳಿಂದ ಪ್ರೀತಿಗೆ ತಿರುಗಿತ್ತು. ಇದೀಗ ಮದುವೆ ಆಗಲು ಇಬ್ಬರು ಮುಂದಾಗಿದ್ದಾರೆ.

Kannada Actor Dhananjaya and Dhanyatha wedding card goes viral

ಇತ್ತೀಚೆಗೆ ಧನಂಜಯ್ ಹುಟ್ಟೂರಿನಲ್ಲಿ ನಿಶ್ಚಿತಾರ್ಥ ಸಮಾರಂಭ ಕೂಡ ನೆರವೇರಿತ್ತು. ಕೆಲವೇ ಆಪ್ತರ ಸಮ್ಮುಖದಲ್ಲಿ ಧನು- ಧನ್ಯಾ ಉಂಗುರು ಬದಲಿಸಿಕೊಂಡಿದ್ದರು. ಸದ್ಯ ಸರಳ ಸುಂದರವಾದ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ. ಸ್ವತಃ ಧನಂಜಯ್ ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮದೇ ಹಸ್ತಾಕ್ಷರದಲ್ಲಿ ಎಲ್ಲರನ್ನೂ ಮದುವೆಗೆ ಆಹ್ವಾನಿಸಿದಂತೆ ಲಗ್ನ ಪತ್ರಿಕೆ ಡಿಸೈನ್ ಮಾಡಲಾಗಿದೆ.

"ನಿಮ್ ಪ್ರೀತಿಯ ಧನಂಜಯ ಹಾಗೂ ಧನ್ಯತಾ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇವೆ" ಎಂದು ಮದುವೆ ಆಮಂತ್ರಣ ಮಾಡಿದ್ದಾರೆ.

ತಾವು ಎಲ್ಲಿದ್ದರೂ ಜಗದ ಯಾವುದೇ ಮೂಲೆಯಲ್ಲಿ ಇದ್ದರೂ ಕುಟುಂಬ ಸಮೇತರಾಗಿ ಬಂದು ನಮ್ಮ ಸಮಾಗಮಕ್ಕೆ ನೀವು ಆಶೀರ್ವದಿಸಬೇಕು. ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ, ಮತ್ತೆಲ್ಲಾ ಕ್ಷೇಮವಷ್ಟೇ. ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ ಧನಂಜಯ ಹಾಗೂ ಧನ್ಯತಾ" ಎಂದು ಬರೆಯಲಾಗಿದೆ.

ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಡಾಲಿ ಮದುವೆ ಮಂಟಪ ಸಿದ್ಧವಾಗಲಿದೆ. ಫೆಬ್ರವರಿ 15ರಂದು ಸಂಜೆ 6 ಗಂಟೆಗೆ ಮದುವೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮರುದಿನ ಬೆಳಗ್ಗೆ 8-20ರಿಂದ 10 ಗಂಟೆವರೆಗಿನ ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ನಡೆಯಲಿದೆ. ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ಚಿತ್ರರಂಗದ ತಾರೆಯರು ಸಾಕ್ಷಿ ಆಗಲಿದ್ದಾರೆ.

ಈಗಾಗಲೇ ನಟ ಧನಂಜಯ್ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಅವರ ಮದುವೆಗೆ ಪರಭಾಷಾ ತಾರೆಯರು ಸಾಕ್ಷಿ ಆಗುವ ನಿರೀಕ್ಷೆಯಿದೆ. ಅಭಿಮಾನಿಗಳಿಗೂ ವಿಶೇಷ ವ್ಯವಸ್ಥೆ ಮಾಡುತ್ತಾರಾ ಕಾದು ನೋಡಬೇಕಿದೆ. ಎರಡು ತಿಂಗಳು ಮುನ್ನ ಆಮಂತ್ರಣ ಪತ್ರಿಕೆ ಸಿದ್ಧ ಮಾಡಿ ಆಪ್ತರನ್ನು ಮದುವೆಗೆ ಆಹ್ವಾನಿಸಲು ಧನಂಜಯ್- ಧನ್ಯತಾ ಜೋಡಿ ಮುಂದಾಗಿದೆ.

ಧನಂಜಯ್ ಕೈ ಹಿಡಿಯುತ್ತಿರುವ ಧನ್ಯತಾ ವೃತ್ತಿಯಲ್ಲಿ ವೈದ್ಯೆ. ಪ್ರಸೂತಿ ತಜ್ಞೆ ಆಗಿರುವ ಅವರು ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಲರ್‌ಫುಲ್ ಫೋಟೊಶೂಟ್ ಮಾಡಿಸಿ ಜೋಡಿ ಮದುವೆ ವಿಚಾರ ಹಂಚಿಕೊಂಡಿದ್ದರು. ಈ ಸುದ್ದಿ ಕೇಳಿ ಡಾಲಿ ಅಭಿಮಾನಿಗಳು ಖುಷಿಯಾಗಿದ್ದರು.

ಸಿನಿಮಾಗಳ ವಿಚಾರಕ್ಕೆ ಬಂದರೆ ಧನಂಜತ್ ನಟನೆಯ 'ಜೀಬ್ರಾ' ಹಾಗೂ 'ಪುಷ್ಪ'-2 ಚಿತ್ರಗಳು ಇತ್ತೀಚೆಗೆ ಬಿಡುಗಡೆ ಆಗಿತ್ತು. 'ಪುಷ್ಪ'-2 ಚಿತ್ರದ ಕ್ಲೈಮ್ಯಾಕ್ಸ್‌ನ ಸಣ್ಣ ಝಲಕ್‌ನಲ್ಲಿ ಮಾತ್ರ ಮಿಂಚಿದ್ದರು. ಇದು ಅಭಿಮಾನಿಗಳಿಗೆ ಬೇಸರ ತಂದಿತ್ತು. ಧನಂಜಯ್ ನಟನೆಯ 'ಉತ್ತರಕಾಂಡ' ಸಿನಿಮಾ ಚಿತ್ರೀಕರಣ ತಡವಾಗುತ್ತಿದೆ. 'ಅಣ್ಣಾ ಫ್ರಂ ಮೆಕ್ಸಿಕೋ' ಹಾಗು 'ಜಿಂಗೋ' ಎಂಬ ಚಿತ್ರಗಳಲ್ಲಿ ಸದ್ಯಕೆ ಬಣ್ಣ ಹಚ್ಚಿದ್ದಾರೆ.

More from Filmibeat

English summary
Actor Dhananjaya shares his wedding simple invitation card
Read more about: dhananjay sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X