''ದುಡಿಮೆಗೆ ಹತ್ತುವ ಮಂದಿ,ತಲೆ ಎತ್ತಿ ಬದುಕುತ್ತಾರೆ'' - ಧರ್ಮಣ್ಣ ಹೀಗೆ ಹೇಳಿದ್ದೇಕೆ..?

ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭಾವಂತ ಧರ್ಮಣ್ಣ ಕಡೂರು. ಪ್ರತಿಭೆ ಯಾರಪ್ಪನ ಸ್ವತ್ತು ಅಲ್ಲ ಅನ್ನುವುದನ್ನೂ ಸಾಬೀತು ಮಾಡಿ ಕಾಮಿಡಿ ಆಕ್ಟರ್‌ನಿಂದ ಆಕ್ಟರ್‌ ಆಗಿ ಬಡ್ತಿ ಪಡೆದ ಧರ್ಮಣ್ಣ ಮುಳ್ಳಿನ ಹಾದಿಯಲ್ಲಿ ನಡೆದು ಬಂದವರು. ಕಷ್ಟ-ನಷ್ಟದ ಬೆಂಕಿಯಲ್ಲಿ ಬೆಂದವರು.

ಇಂಥಾ ಧರ್ಮಣ್ಣ ಇವತ್ತು ಸಿನಿಮಾದಲ್ಲಿ ದುಡಿದ ದುಡ್ಡಿಂದ ಸ್ವಂತ ಮನೆಯನ್ನೂ ಕಟ್ಟಿಸಿದ್ದಾರೆ. ನೆಮ್ಮದಿಯ ಬದುಕನ್ನು ನಡೆಸುತ್ತಿದ್ದಾರೆ. ಇವತ್ತು ಧರ್ಮಣ್ಣ ಕೈ ತುಂಬಾ ದುಡ್ಡು ಇದೆ. ಇವರ ಅಭಿನಯವನ್ನೂ ಕೊಂಡಾಡುವ ವರ್ಗವೂ ಇದೆ. ಹಾಗಂಥ ಧರ್ಮಣ್ಣ ಮೈ ಮರೆತಿಲ್ಲ. ಹಳೆಯದೆಲ್ಲವನ್ನೂ ಮರೆತಿಲ್ಲ. ಇವತ್ತು ಕೂಡ ಧರ್ಮಣ್ಣಗೆ ತಾವು ನಡೆದು ಬಂದ ದಾರಿ ನೆನಪಿದೆ. ಇದಕ್ಕೆ ಪುರಾವೆ ಎನ್ನುವಂತೆ ಬಡ ಹುಡುಗನ ಕಷ್ಟವನ್ನೂ ಕಂಡು ಧರ್ಮಣ್ಣ ಮರುಗಿದ್ದಾರೆ. ತಮ್ಮೆದುರು ಆ ಹುಡುಗ ಹಂಚಿಕೊಂಡ ಕಥೆಯನ್ನೂ ಹಂಚಿಕೊಂಡಿದ್ದಾರೆ.

kannada-actor-dharmanna-kadur-shares-heartwarming-story-of-a-tea-selling-boy

ಈ ಹುಡುಗನ ಕಥೆ ಕೇಳಿದೆ. ಕೇಳಿದ ಮೇಲೆ ತುಂಬಾ ದುಃಖ ಮತ್ತು ಹೆಮ್ಮೆ ಎರಡೂ ಆದ್ವು ಎಂದು ಲೇಖನ ಆರಂಭ ಮಾಡಿರುವ ಧರ್ಮಣ್ಣ, ಇವತ್ತು ಕಾಮಾಕ್ಯ ಥಿಯೇಟರ್ ಹತ್ತಿರ ಟೀ ಮಾರ್ತಿದ್ದ, ನನ್ನ ಗಾಡಿಗೆ ಕೈ ಹೊಡೆದು ಚಂದ್ರೋದಯ ಥಿಯೇಟರ್ ತನಕ ಸ್ವಲ್ವ ಬಿಡಿ ಅಣ್ಣ ಅಂದ. ಅಯ್ತು ಬಾ ಅಂತ ಹತ್ತಿಸಿಕೊಂಡೆ. ಆಮೇಲೆ ಹಾಗೇ ವಿಚಾರಿಸಿದೆ, 'ಸ್ಕೂಲ್ ಇವತ್ತು ರಜಾ ಅಂತ ಟೀ ಮಾರ್ತಾ ಇದೀಯಾ ಗುಡ್' ಅಂದೆ. ಅದಕ್ಕೆ ಅವನು ಇಲ್ಲ ಅಣ್ಣ ನಾನು ಸ್ಕೂಲಿಗೆ ಹೋಗಲ್ಲ ಅಂದ. ನಾನು ಯಾಕೋ ಅಂತ ಕೇಳಿದೆ, ಆಗ ಅವನ ಕಥೆ ಹೇಳಿದ.

ಅಪ್ಪ ಆಟೋ ಓಡಿಸುತ್ತಿದ್ದರು, ತೀರಿಹೋದರು. ಈಗ ಅಮ್ಮ, ನಾನು ಮತ್ತೆ ಎರಡು ವರ್ಷದ ತಮ್ಮ ಇದ್ದೇವೆ. ನಾನು ಓದೋಕೆ ಹೋದ್ರೆ ಮನೆ ಮತ್ತೆ ಖರ್ಚು ಯಾರು ನೋಡ್ಕೊತಾರೆ ಅಣ್ಣ ಕಷ್ಟ ಅಗುತ್ತೆ, ಅದಕ್ಕೆ ಅಮ್ಮ ಟೀ ಮಾಡಿಕೊಡ್ತಾರೆ, ನಾನು ಮಾರಿಕೊಂಡು ಬರ್ತಿನಿ. ಹೇಗೋ ನಡೀತಾ ಇದೆ ಅಂದ. ಏನು ಮಾತಾಡಬೇಕು ಗೊತ್ತಾಗಲೇ ಇಲ್ಲ. ನನಗನಿಸಿದ ಒಂದೆರಡು ಸಲಹೆಗಳನ್ನು ಕೊಟ್ಟು, ತುಂಬಾ ಕಾಡಿದ ಅವನ ಜೊತೆ ಒಂದು ಪೋಟೋ ತಗೊಂಡೆ. ನೋವೇ ಇರದವನಂತೆ ನಕ್ಕ, ಕೂಸಿನ ಹಾಗೆ.

ಜೀವನ ಕೆಲವರಿಗೆ ಎಷ್ಟು ಸುಲಭವೋ ಕೆಲವರಿಗೆ ಅಷ್ಟೇ ಕಠಿಣ ಕೂಡ. ಮಂದಿಗೆ ಸಹಾಯ ಮಾಡುವ ಸರ್ಕಾರ, ಸಂಘ ಸಂಸ್ಥೆಗಳ ಕಣ್ಣಿಗೆ ಇಂತಹವರು ಬಿದ್ದು, ಇವರ ಬದುಕು ಸ್ವಲ್ಪ ಸುಲಭವಾದರೆ ಅವರ ಉದ್ದೇಶ ಸಾರ್ಥಕ. ದುಡಿಮೆಗೆ ಹತ್ತುವ ಮಂದಿ, ತಲೆ ಎತ್ತಿ ಬದುಕುತ್ತಾರೆ ನಗು ನಗುತ್ತಾ ಎಂದು ಮತ್ತೊಮ್ಮೆ ಮನವರಿಕೆ ಮಾಡಿದ ಹುಡುಗನಿಗೆ ಕೋಟಿ ಧನ್ಯವಾದ. ಎಂದು ತಮ್ಮ ಬರಹವನ್ನೂ ಧರ್ಮಣ್ಣ ಮಗಿಸಿದ್ದಾರೆ.

ಹೀಗೆ ಆ ಹುಡುಗನ ಬದುಕಿನ ಹೋರಾಟಕ್ಕೆ ಅಕ್ಷರದ ರೂಪವನ್ನೂ ಧರ್ಮಣ್ಣ ಕೊಟ್ಟಿದ್ದಾರೆ. ಧರ್ಮಣ್ಣ ಅವರ ಈ ಬರಹಕ್ಕೆ ಅನೇಕರು ಪ್ರತಿಕ್ರಿಯೆಯನ್ನೂ ನೀಡಿದ್ಧಾರೆ. ನಿಮ್ಮದು ಸಹೃದಯಿ ಸರಳ ವ್ಯಕ್ತಿತ್ವ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಟೀ ಮಾರುವ ಆ ಹುಡುಗನಿಗೆ ಒಳ್ಳೇಯದಾಗಲಿ ಎಂದು ಹರಸಿ ಹಾರೈಸುತ್ತಿದ್ಧಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X