ದಾರಿ ತಪ್ಪಿದ ಡಾ.ರಾಜ್ ಮೊಮ್ಮಗನಿಗೆ ಹೊಸ ಹೆಸರು

ವರನಟ ಡಾ.ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಧೀರನ್ ರಾಮ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತಿಂಗಳಾಗಿದೆ. ವಿಶೇಷ ಅಂದ್ರೆ ಧೀರನ್ ತಾತನ ದಾರಿ ತಪ್ಪಿದ ಮಗ ಸಿನಿಮಾದ ಟೈಟಲ್ ಅನ್ನೆ ಬಳಸಿಕೊಂಡು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಈಗಾಗಲೆ ಚಿತ್ರೀಕರಣ ಸಹ ಮುಗಿರುವ ಧೀರನ್ ಮತ್ತು ತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

ಆದ್ರೀಗ ಚಿತ್ರತಂಡ ಚಿತ್ರದ ಟೈಟಲ್ ಬದಲಾಯಿಸುವ ನಿರ್ಧಾರ ಮಾಡಿದೆಯಂತೆ. ಚಿತ್ರದ ಕಥೆಗೂ ಮತ್ತು ಟೈಟಲ್ ಗೂ ಹೊಂದಾಣಿಕೆಯಾಗದ ಕಾರಣ ಟೈಟಲ್ ಬದಲಾಯಿಸುವ ಯೋಚನೆ ಮಾಡಿದೆಯಂತೆ ಚಿತ್ರತಂಡ. ಆದ್ರೆ ಯಾವ ಟೈಟಲ್ ಎನ್ನುವುದು ಇನ್ನು ಫೈನಲ್ ಆಗಿಲ್ಲವಂತೆ. ಈಗಾಗಲೆ ಚಿತ್ರತಂಡದ ಬಳಿ ಸದ್ಯ ಮೂರು ಟೈಟಲ್ ಇದೆಯಂತೆ. ಈ ಮೂರು ಟೈಟಲ್ ನಲ್ಲಿ ಯಾವ ಹೆಸರು ಹೊಂದಾಣಿಕೆಯಾಗುತ್ತೆ ಎಂದು ನಿರ್ಧರಿಸಿ ಕೆಲವೆ ದಿನಗಳಲ್ಲಿ ಅಂತಿಮಮಾಡಲಿದೆ ಚಿತ್ರತಂಡ.

ಚಿತ್ರದಲ್ಲಿ ಧೀರನ್ ರಾಮ್ ಕುಮಾರ್ ಗೆ ನಾಯಕಿಯಾಗಿ ಮಾನ್ವಿತಾ ಹರೀಶ್ ಕಾಣಿಸಿಕಂಡಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಸಿನಿಮಾ ನವೆಂಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಚಿತ್ರಕ್ಕಾಗಿ ಧೀರನ್ ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ಮೊದಲ ಚಿತ್ರದಲ್ಲಿಯೆ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚಿದ್ದಾರೆ ಧೀರನ್. ಅಲ್ಲದೆ ಚಿತ್ರದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಕೊಂಡಿದ್ದಾರೆ.

Kannada Actor Dheeren Ramkumars Daari Tappida Maga Is Set To Undergo A Title Change

ಅಂದ್ಹಾಗೆ ಚಿತ್ರಕ್ಕೆ ಅನಿಲ್ ಕುಮಾರ್ ಅಕ್ಷನ್ ಕಟ್ ಹೇಳಿದ್ದಾರೆ. ಜಯಣ್ಣ ಕಂಬೈನ್ಸ್ ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಚಿತ್ರದ ಮೊದಲ ಹಾಡನ್ನು ಮುಂದಿನ ತಿಂಗಳು ಮೊದಲ ವಾರದಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ. ಧೀರನ್ ಮೊದಲ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿ ಇದೆ.

More from Filmibeat

English summary
Kannada actor Dheeren ramkumar's Daari Tappida Maga is set to undergo a title change.
Read more about: dheeren ramkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X