ಪತ್ನಿ ಜೊತೆ ಬೈಕಲ್ಲಿ ಹೊರಟ ಧ್ರುವ ಸರ್ಜಾ ಸರಳತೆಗೆ ಅಭಿಮಾನಿಗಳು ಫಿದಾ

Recommended Video

ಹೆಂಡತಿ ಜೊತೆ ಜಾಲಿ ರೈಡ್ ಹೊರಟ ಧೃವ | DHRUVA SARJA | RIDE | FILMIBEAT KANNADA

ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿರುವ ಧ್ರುವ ಪತ್ನಿಯ ಜೊತೆ ಜಾಲಿ ಬೈಕ್ ರೈಡ್ ಹೊರಟಿದ್ದಾರೆ. ಅಂದ್ಹಾಗೆ ಧ್ರುವ ಇತ್ತೀಚಿಗೆ ಚಿತ್ರೀಕರಣಕ್ಕೆ ಬೈಕ್ ನಲ್ಲಿ ಹೊರಟಿದ್ದಾರೆ. ಜೊತೆಗೆ ಪತ್ನಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ರೈಡ್ ಹೊರಟಿದ್ದಾರೆ.

ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಇಬ್ಬರು ಬೈಕ್ ನಲ್ಲಿ ಹೋಗುತ್ತಿದ್ದರೆ ಧ್ರುವ ಇತ್ತೀಚಿಗೆ ಕೊಂಡುಕೊಂಡ ದುಬಾರಿ ಕಾರು ಅವರಿಬ್ಬರನ್ನು ಹಿಂಬಾಲಿಸುತ್ತ ಹೋಗುತ್ತಿದೆ. ಧ್ರುವ ಪತ್ನಿ ಪ್ರೇರಣಾ ಹಸಿರು ಬಣ್ಣದ ಸೆಲ್ವಾರ್ ನಲ್ಲಿ ಕಂಗೊಳಿಸುತ್ತಿದ್ದಾರೆ. ಇಬ್ಬರು ಬೈಕ್ ನಲ್ಲಿ ಜಾಲಿಯಾಗಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

kannada Actor Dhruva Sarja And His Wife Prerana Bike Ride

ಧ್ರುವ ಸರ್ಜಾ ಬೈಕ್ ನಲ್ಲಿ ಒಡಾಡುತ್ತಿರುವುದನ್ನು ನೋಡಿ ಅಭಿಮಾನಿಗಳು, ಸ್ಯಾಂಡಲ್ ವುಡ್ ನ ಸರಳ ನಟ, ಧ್ರುವ ನೋಡಿ ಸಂತಸವಾಗುತ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಕನ್ನಡ ಚಿತ್ರಾಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

kannada Actor Dhruva Sarja And His Wife Prerana Bike Ride

ಸದ್ಯ ರಿಲೀಸ್ ಆಗಿರುವ ಟ್ರೈಲರ್ ಗೆ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದು ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಡಿಸೆಂಬರ್ ಗೆ ಪೊಗರು ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಡಿಸೆಂಬರ್ ಹೋಗಿ ನಂತರ ಸಂಕ್ರಾಂತಿ ಬಂದರು ಸಿನಿಮಾ ರಿಲೀಸ್ ಆಗಿಲ್ಲ. ಸಂಕ್ರಾತಿಗೆ ಬರುತ್ತೆ ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸದ್ಯ ಪೊಗರು ಮಾರ್ಚ್ ನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.

More from Filmibeat

English summary
kannada actor Dhruva Sarja and his wife Prerana bike ride.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X