ಡಬ್ಬಿಂಗ್ ನಲ್ಲಿ ಆಕ್ಷನ್ ಪ್ರಿನ್ಸ್: 'ಪೊಗರು' ರಿಲೀಸ್ ಯಾವಾಗ ಗೊತ್ತಾ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಧ್ರುವ ಸಿನಿಮಾಗಾಗಿ ಅಭಿಮಾನಿಗಳು ಸಹ ಕತರದಿಂದ ಕಾಯುತ್ತಿದ್ದಾರೆ. ಭರ್ಜರಿ ಸಿನಿಮಾದ ನಂತರ ಧ್ರುವ ಅಭಿಮಾನಿಗಳ ಮುಂದೆ ಬಂದಿಲ್ಲ. ಹಾಗಾಗಿ ಪೊಗರು ಸಿನಿಮಾದ ಮೇಲೆ ನಿರೀಕ್ಷೆ ಇಮ್ಮಡಿಯಾಗಿದೆ.

ಈಗಾಗಲೆ ಬ್ಯಾಕ್ ಟು ಬ್ಯಾಕ್ ಹ್ಯಾಟ್ರಿಕ್ ಹಿಟ್ ನೀಡಿರುವ ಧ್ರುವ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ಪೊಗರು ಚಿತ್ರೀಕರಣ ಮುಗಿಸಿರುವ ಆಕ್ಷನ್ ಪ್ರಿನ್ಸ್ ಈಗ ಡಬ್ಬಿಂಗ್ ನಲ್ಲಿ ನಿರತರಾಗಿದ್ದಾರೆ. ಇತ್ತೀಚಿಗಷ್ಟೆ ಧ್ರುವ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಗೆ ಹಾಜರಾಗಿದ್ದರು.

ಚಿತ್ರದಲ್ಲಿ ಡೈಲಾಗ್ ಗಳು ಹೆಚ್ಚಾಗಿದ್ದು ಸುದೀರ್ಘ ಡೈಲಾಗ್ ಗಳನ್ನು ತಮ್ಮ ಶೈಲಿಯಲ್ಲಿ ಹೇಳುತ್ತಿದ್ದರು. ಡಬ್ಬಿಂಗ್ ಮುಗಿಸಿ ಮಾಧ್ಯಮದವರ ಜೊತೆ ಚಿತ್ರದ ಅನುಭವವನ್ನು ಹಂಚಿಕೊಂಡರು. ಈ ಸಿನಿಮಾದಲ್ಲಿ ತುಂಬ ಲೋಕಲ್ ಭಾಷೆ ಬಳಸಿದ್ದೀವಿ. ಹೇಳುವುದಕ್ಕಿಂತ ಸಿನಿಮಾ ನೋಡಿದರೆ ಚೆನ್ನಾಗಿರುತ್ತೆ. ಚಿತ್ರದಲ್ಲಿ ಡೈಲಾಗ್ ಜಾಸ್ತಿ ಇದೆ. ಬೇರೆ ಶೈಲಿಯಲ್ಲಿ ಹೇಳುವುದಕ್ಕೆ ಪ್ರಯತ್ನ ಪಟ್ಟಿದ್ದೇನೆ. ಸುಮಾರು ಒಂದೂವರೆ ವರ್ಷದಿಂದ ಯಾವುದೆ ಸಿನಿಮಾ ಒಪ್ಪಿಕೊಳ್ಳದೆ ನಾನು ಮತ್ತು ನಿರ್ದೇಶಕರು ಈ ಸಿನಿಮಾಗಾಗಿ ಕೆಲಸ ಮಾಡಿದ್ದೀವಿ. ಸಧ್ಯದಲ್ಲೇ ಪೊಗರು ತೆರೆಗೆ ಬರುತ್ತೆ" ಎಂದು ಹೇಳಿದರು.

Kannada Actor Dhruva Sarja Busy In Pogaru Dubbing

ಈಗಾಗಲೆ ಚಿತ್ರದ ಡೈಲಾಗ್ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಸಹ ಸಾಕಷ್ಟು ಸಮಯದಿಂದ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಸಿನಿಮಾ ಮಾರ್ಚ್ ತಿಂಗಳ ಕೊನೆಯಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಅಂದರೆ ಸಿನಿಮಾ ತೆಲುಗಿನಲ್ಲೂ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಪೊಗರು ನಿರ್ದೇಶಕ ನಂದ ಕಿಶೋರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರಕ್ಕೆ ಬಿ.ಕೆ ಗಂಗಾಧರ್ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈಗಾಗಲೆ ಮೊದಲ ಭಾಗದ ಡಬ್ಬಿಂಗ್ ಮುಗಿಸಿರುವ ರಶ್ಮಿಕಾ ಸಧ್ಯದಲ್ಲೇ ಡಬ್ಬಿಂಗ್ ಗೆ ಹಾಜರಾಗಲಿದ್ದಾರೆ. ಇನ್ನು ಚಿತ್ರದಲ್ಲಿ ಅಂತರಾಷ್ಟ್ರೀಯ ಬಾಡಿ ಲಿಲ್ಡರ್ಸ್ ಕೂಡ ಕಾಣಿಸಿಕೊಂಡಿದ್ದಾರೆ.

More from Filmibeat

English summary
Kannada Actor Dhruva Sarja busy in Pogaru Dubbing. This movie is directed by Nanda Kishore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X