ಇನ್ಸ್ಟಾಗ್ರಾಮ್ ಗೆ ಬಂದ ಆಕ್ಷನ್ ಪ್ರಿನ್ಸ್ : ಒಂದೇ ದಿನಕ್ಕೆ ಲಕ್ಷಾಂತರ ಫಾಲೋವರ್ಸ್
Recommended Video

ಸಿನಿಮಾ ತಾರೆಯರಿಗೆ ಸಾಮಾಜಿಕ ಜಾಲತಾಣಗಳು ಅಭಿಮಾನಿಗಳ ಜೊತೆಗೆ ಸದಾ ಸಂಪರ್ಕದಲ್ಲಿ ಇರಲು ಸಹಾಯ ಮಾಡುತ್ತದೆ. ಅದೇ ಕಾರಣಕ್ಕೆ ಅನೇಕ ಸ್ಟಾರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದಾರೆ.
ಇದೀಗ ನಟ ಧ್ರುವ ಸರ್ಜಾ ಕೂಡ ಇನ್ಸ್ಟಾಗ್ರಾಮ್ ಗೆ ಬಂದಿದ್ದಾರೆ. ಧ್ರುವ ಸರ್ಜಾ ಟ್ವಿಟ್ಟರ್ ಖಾತೆ ಹೊಂದಿದ್ದರೂ, ಅಷ್ಟೊಂದು ಸಕ್ರೀಯವಾಗಿ ಇರಲಿಲ್ಲ. ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದ, ಅವರು ಈಗ ನಿರಂತರವಾಗಿ ತಮ್ಮ ಸಿನಿಮಾಗಳ ಅಪ್ ಡೇಟ್ಸ್ ತಿಳಿಸಲಿದ್ದಾರೆ.
ಅಂದಹಾಗೆ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದು, ಒಂದೇ ದಿನಕ್ಕೆ ಲಕ್ಷಾಂತರ ಫಾಲೋವರ್ಸ್ ಗಳನ್ನು ಪಡೆದಿದ್ದಾರೆ. ಮುಂದೆ ಓದಿ..

ಇನ್ಸ್ಟಾಗ್ರಾಮ್ ಖಾತೆ ತೆರೆದ ಧ್ರುವ
ಟ್ವಿಟ್ಟರ್ ಖಾತೆ ಹೊಂದಿದ್ದ ನಟ ಧ್ರುವ ಸರ್ಜಾ, ಇಷ್ಟು ದಿನದಿಂದ ಇನ್ಸ್ಟಾಗ್ರಾಮ್ ಅಕೌಂಟ್ ತೆರೆದಿರಲಿಲ್ಲ. ಆದರೆ, ಇದೀಗ ಇನ್ಸ್ಟಾಗ್ರಾಮ್ ಲೋಕಕ್ಕೆ ಧ್ರುವ ಆಗಮನ ಆಗಿದೆ. ವಿಡಿಯೋ ಮೂಲಕ ಹೊಸ ಇನ್ಸ್ಟಾಗ್ರಾಮ್ ಖಾತೆಯ ವಿವರವನ್ನು ಧ್ರುವ ನೀಡಿದ್ದಾರೆ.

ಮಾವನ ಮಗಳಿಂದ ಸ್ವಾಗತ
ಇನ್ಸ್ಟಾಗ್ರಾಮ್ ಗೆ ಬಂದ ಧ್ರುವ ಸರ್ಜಾಗೆ ಮಾವನ ಮಗಳು ಸ್ವಾಗತ ಮಾಡಿದ್ದಾರೆ. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಧ್ರುವ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಳ್ಳುವ ಮೂಲಕ ಧ್ರುವ ಗೆ ವಿಶ್ ಮಾಡಿದ್ದಾರೆ.

ಒಂದೇ ದಿನದಲ್ಲಿ ಲಕ್ಷಾಂತರ ಫಾಲೋವರ್ಸ್
ನಿನ್ನೆ (ಜುಲೈ 4) ರಂದು ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ. ಈವರೆಗೆ ಒಂದೇ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಒಂದೇ ದಿನದಲ್ಲಿ ಲಕ್ಷಾಂತರ ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ, ಧ್ರುವ ಇನ್ಸ್ಟಾಗ್ರಾಮ್ ನಲ್ಲಿ 1 ಲಕ್ಷದ 64 ಸಾವಿರ ಫಾಲೋವರ್ಸ್ ಗಳನ್ನು ಪಡೆದಿದ್ದಾರೆ.

ಪ್ರತಿ ಸಿನಿಮಾ ಅಪ್ ಡೇಟ್ ನೀಡುತ್ತಾರಂತೆ
ಇನ್ಸ್ಟಾಗ್ರಾಮ್ ಖಾತೆ ಬಗ್ಗೆ ಮಾತನಾಡಿರುವ ಧ್ರುವ ಸರ್ಜಾ ''ನಾನು ಸೋಷಿಯಲ್ ಮೀಡಿಯಾದಲ್ಲಿ ಸಕ್ರೀಯವಾಗಿ ಇರಲಿಲ್ಲ. ಆದರೆ, ಇನ್ನು ಮುಂದೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿ ಇರಬೇಕು ಎಂದು ನಿರ್ಧಾರ ಮಾಡಿದ್ದೇನೆ. ನನ್ನ ಮುಂದಿನ ಸಿನಿಮಾ 'ಪೊಗರು'. ಆ ಸಿನಿಮಾದ ಎಲ್ಲ ವಿವರವನ್ನು ಇಲ್ಲಿ ನೀಡುತ್ತೇನೆ.'' ಎಂದು ಹೇಳಿದ್ದಾರೆ.


Click it and Unblock the Notifications











