ಗಾರೆ ಕೆಲಸಗಾರನ ಮಗುವಿನ ಬಾಳಿಗೆ ಬೆಳಕಾದ ಧ್ರುವ ಸರ್ಜಾ, ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಕ್ಷನ್ ಪ್ರಿನ್ಸ್ ನೆರವು..!

ಸಾಮಾನ್ಯವಾಗಿ ಬೇರೆಯವರ ಕಷ್ಟಕ್ಕೆ ಚಿತ್ರರಂಗದವರು ಸ್ಪಂದಿಸುವುದಿಲ್ಲ ಎನ್ನುವ ಅಭಿಪ್ರಾಯ ಅನೇಕರಲ್ಲಿದೆ. ಕೇವಲ ತಮ್ಮ ಚಿತ್ರಗಳ ಬಿಡುಗಡೆಯ ಹೊತ್ತಿನಲ್ಲಿ ಮಾತ್ರ ಇವರಿಗೆ ಜನಸಾಮಾನ್ಯರು ನೆನಪಾಗುತ್ತಾರೆ ಎನ್ನುವುದು ಅನೇಕರ ಅನಿಸಿಕೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಕೆಲವರು ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾರೆ. ಬಡವರ ಕಣ್ಣೀರು ಒರೆಸುತ್ತಾರೆ. ಧ್ರುವಾ ಸರ್ಜಾ ಇದಕ್ಕೆ ಸದ್ಯದ ಉದಾಹರಣೆ.

ಹೌದು, ಮೊದಲಿಂದ ಒಂದಿಲ್ಲೊಂದು ರೀತಿಯಲ್ಲಿ ಅನೇಕರಿಗೆ ಸಹಾಯವನ್ನು ಮಾಡಿಕೊಂಡೇ ಬಂದಿರುವ ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಕಣ್ಣಿನಲ್ಲಿ ಪೊರೆ ಬೆಳೆದ ಪುಟ್ಟ ಬಾಲಕನ ಚಿಕಿತ್ಸೆಗೆ ನೆರವಾಗಿದ್ದಾರೆ. ಈ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಚಿರಂಜೀವಿಯ ಶಸ್ತ್ರ ಚಿಕಿತ್ಸೆಗಾಗಿ ಮಂಜುನಾಥ ನೇತ್ರಾಲಯದ ವೈದ್ಯರ ಬಳಿ ಮಾತನಾಡಿದ ಧ್ರುವಾ ಆ ನಂತರ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದಾರೆ. ಸ್ವಂತ ಖರ್ಚಿನಲ್ಲಿ ಬಾಲಕನ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಈ ಮೂಲಕ ದೃಷ್ಟಿದೋಷವನ್ನು ನಿವಾರಣೆ ಮಾಡಿದ್ದಾರೆ.

Kannada actor Dhruva Sarja extends his help for a child s eye surgery

ಈ ಕುರಿತು ಬಾಲಕನ ತಂದೆ ಮಾತನಾಡಿದ್ದು ನನ್ನ ಮಗನಿಗೆ ಕಣ್ಣಿನ ಸಮಸ್ಯೆಯಾಗಿತ್ತು. ಅದನ್ನು ಧ್ರುವ ಸರ್ಜಾ ಅವರ ಬಳಿ ಹೇಳಿಕೊಂಡೆವು ಅವರು ಕೂಡಲೇ ಆಸ್ಪತ್ರೆಗೆ ಕರೆ ಮಾಡಿದರು. ಅವರಿಂದ ನನ್ನ ಮಗನ ಕಣ್ಣಿನ ದೃಷ್ಟಿ ಸರಿಹೋಗಿದೆ. ಪ್ರಪಂಚವನ್ನು ಅವರಿಂದ ನನ್ನ ಮಗ ನೋಡುವಂತಾಗಿದೆ ಎಂದು ಹೇಳಿದ್ದಾರೆ. ನಿಮ್ಮ ಈ ಸಹಾಯಕ್ಕೆ ನಾನು ಸಾಯುವವರೆಗೆ ಚಿರಋಣಿ ಆಗಿರುತ್ತೇನೆ ಎಂದಿರುವ ಬಾಲಕನ ಪೋಷಕರು ಇದರ ಬಗ್ಗೆ ನಾನು ಹೊರಗೆ ಹೇಳಿದರೆ ನೀವು ಬೈಯ್ಯುತ್ತೀರಿ ಎಂದು ಗೊತ್ತಿದೆ, ಆದರೂ ಇದನ್ನು ಎಲ್ಲರಿಗೂ ಹೇಳಬೇಕೆಂದು ಹೇಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಈ ಕುರಿತು ಮಂಜುನಾಥ ನೇತ್ರಾಲಯದ ವೈದ್ಯರು ಕೂಡ ಮಾತನಾಡಿದ್ದು ಆ ಬಾಲಕನನ್ನು ನಮಗೆ ಧ್ರುವಾ ಸರ್ಜಾ ಕಳುಹಿಸಿದ್ದರು. ಅವನ ಪರೀಕ್ಷೆ ಮಾಡಿದಾಗ ಪೊರೆ ಇರುವುದು ಗೊತ್ತಾಯ್ತು. ನಾವು ಕೂಡಲೇ ಆಪರೇಷನ್ ಮಾಡಿದೆವು ಎಂದು ಹೇಳಿದ್ದಾರೆ. ಈ ವಿಚಾರವನ್ನು ಪ್ರಚಾರ ಮಾಡುವುದು ಬೇಡ ಎಂದು ಧ್ರುವಾ ಹೇಳಿದ್ದರು ಆದರೆ ಅವರಿಂದ ಉತ್ತಮವಾದ ಕೆಲಸವಾಗಿದೆ. ಅವರಿಗೆ ಇನ್ನಷ್ಟು ಒಳ್ಳೇಯದಾಗಲಿ ಎಂದಿದ್ದಾರೆ. ಇಂತಹ ಸಾಮಾಜಿಕ ಕೆಲಸಗಳನ್ನು ಇನ್ನೂ ಹೆಚ್ಚು ಮಾಡಲು ದೇವರು ಅವರಿಗೆ ಶಕ್ತಿಯನ್ನು ನೀಡಲಿ ಎಂದು ವೈದ್ಯರು ಹೇಳಿದ್ಧಾರೆ.

More from Filmibeat

Read more about: dhruva sarja help filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X