twitter
    For Quick Alerts
    ALLOW NOTIFICATIONS  
    For Daily Alerts

    ಅರ್ಜುನ್ 'ಕಿಸ್'ಗೆ ಸಾಥ್ ನೀಡಿದ ನಟ ಧ್ರುವ ಸರ್ಜಾ

    |

    ನಿರ್ದೇಶಕ ಎ ಪಿ ಅರ್ಜುನ್ ಮತ್ತು ಧ್ರುವ ಸರ್ಜಾ ನಡುವೆ ಉತ್ತಮ ಬಾಂಧವ್ಯವಿದೆ. ಧ್ರುವ ಸರ್ಜಾ ಮೊದಲ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದೆ ಎಪಿ ಅರ್ಜುನ್. ಈ ಮೂಲಕ ಧ್ರುವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು ಅರ್ಜುನ್. ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಫುಲ್ ಜೋಡಿ ಎನಿಸಿಕೊಂಡಿದ್ದಾರೆ.

    ಈಗ ನಿರ್ದೇಶಕ ಎ ಪಿ ಅರ್ಜುನ್ 'ಕಿಸ್'ಗೆ ನಟ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ. ಹೌದು ಅರ್ಜುನ್ ನಿರ್ದೇಶನದ ಕಿಸ್ ಚಿತ್ರಕ್ಕೆ ನಟ ಧ್ರುವ ಸರ್ಜಾ ಹಿನ್ನಲೆ ಧ್ವನಿ ನೀಡಿದ್ದಾರೆ. 'ಕಿಸ್' ಸಿನಿಮಾ ಸೆಟ್ಟೇರಿ ವರ್ಷದ ಮೇಲಾಗಿದೆ. ಚಿತ್ರಾಭಿಮಾನಿಗಳು ಯಾವಾಗ ತೆರೆಗೆ ಬರುತ್ತೆ ಅಂತ ಕಾತುರದಿಂದ ಕಾಯುತ್ತಿದ್ದಾರೆ. ಅಲ್ಲದೆ ಚಿತ್ರದ ಹಾಡುಗಳು ನಿರೀಕ್ಷೆ ಮಟ್ಟವನ್ನು ಮತ್ತಷ್ಟು ಹೆಚ್ಚಿದೆ.

    Recommended Video

    ದರ್ಶನ್ ಗೆ ಸೀನಿಯರ್ ಅಂದ್ರೆ ತುಂಬಾ ಇಷ್ಟ..? | Darshan

    ಇನ್ಸ್ಟಾಗ್ರಾಮ್ ನಲ್ಲಿ ಭಾವಿ ಪತ್ನಿ ಜೊತೆ ಧ್ರುವ ಮೊದಲ ಟಿಕ್ ಟಾಕ್ಇನ್ಸ್ಟಾಗ್ರಾಮ್ ನಲ್ಲಿ ಭಾವಿ ಪತ್ನಿ ಜೊತೆ ಧ್ರುವ ಮೊದಲ ಟಿಕ್ ಟಾಕ್

    ಅಂದ್ಹಾಗೆ ಚಿತ್ರದಲ್ಲಿ ವಿರಾಟ್ ಮತ್ತು ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಒಂದು ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದಾರೆ. ಈಗ ಧ್ರುವ ಸರ್ಜಾ ಜೊತೆಯಾಗಿರುವುದು 'ಕಿಸ್'ಗೆ ಮತ್ತಷ್ಟು ಬಲ ಬಂದಿದೆ.

    Kannada Actor Dhruva Sarja Gave Voice For Kiss Film

    'ಕಿಸ್' ಹೆಸರೇ ಹೇಳುವ ಹಾಗೆ ಇದೊಂದು ರೋಮ್ಯಾಂಟಿಕ್ ಸಿನಿಮಾ. ಚಿತ್ರಕ್ಕೆ 'ತುಂಟ ತುಟಿಗಳ ಆಟೋಗ್ರಾಫ್' ಎನ್ನುವ ಟ್ಯಾಗ್ ಲೈನ್ ಕೂಡ ಇದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ 'ಕಿಸ್' ಸಧ್ಯದಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ.

    English summary
    Kannada actor Dhruva sarja gave voice for Kiss film. This film is directed by A P Arjun.
    Tuesday, August 20, 2019, 19:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X