ಧ್ರುವ ಕೈಯಲ್ಲಿ ಆಂಜನೇಯನ ಮೆಹಂದಿ: ಅರಿಶಿಣ ಶಾಸ್ತ್ರ ಸಂಭ್ರಮದಲ್ಲಿ 'ಪೊಗರು' ಹುಡುಗ

ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದುವೆ ಸಂಭ್ರಮ ಜೋರಾಗಿದೆ. ಇಂದು ಬೆಳಗ್ಗೆಯಿಂದ ಮದುವೆ ಶಾಸ್ತ್ರಗಳು ನಡೆಯುತ್ತಿದ್ದು ಮದುಮಗ ಧ್ರುವ ಸರ್ಜಾ ಪ್ರತಿಯೊಂದು ಶಾಸ್ತ್ರಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಧ್ರುವ ಮದುವೆ ಸಂಭ್ರಮದಲ್ಲಿ ಅಣ್ಣ ಚಿರುಸರ್ಜಾ, ಅತ್ತಿಗೆ ಮೇಘನಾ ರಾಜ್, ಸೇರಿದಂತೆ ಇಡೀ ಸರ್ಜಾ ಕುಟುಂಬ ಭಾಗಿಯಾಗಿದೆ.

ಸರ್ಜಾ ಮನೆಯಲ್ಲಿ ಮದುವೆ ಸಂತಸ ಕಳೆಗಟ್ಟಿದ್ದು, ಮನೆಯ ಮುಂದೆ ಹಸಿರು ಚಪ್ಪರ, ಬಾಳೆಕಂಡ, ಹೂ ಮಾಲೆ ಜಗಮಗಿಸುತ್ತಿದೆ. ಧ್ರುವ ಮದುವೆಗೆ ಇನ್ನೊಂದೆ ದಿನ ಭಾಕಿ ಇದೆ. ಇಬ್ಬರು ಮನೆಯಲ್ಲೂ ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರ ಸೇರಿದಂತೆ ಸಾಕಷ್ಟು ಶಾಸ್ತ್ರಗಳು ಜೋರಾಗಿ ನಡೆಯುತ್ತಿದೆ. ಶಾಸ್ತ್ರಗಳಲ್ಲಿ ಧ್ರುವ ಮತ್ತು ಪ್ರೇರಣಾ ಇಬ್ಬರು ಕೊಂಗೊಳಿಸುತ್ತಿದ್ದಾರೆ.

ಧ್ರುವ ಸರ್ಜಾ ಕೈಯಲ್ಲಿ ಆಂಜನೇಯ

ಧ್ರುವ ಸರ್ಜಾ ಕೈಯಲ್ಲಿ ಆಂಜನೇಯ

ಧ್ರುವ ಸರ್ಜಾ ಆಂಜನೇಯನ ಭಕ್ತ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಧ್ರುವ ಆಂಜನೇಯ ಫೋಟೋ ಇತ್ತು. ವಿಶೇಷ ಅಂದರೆ ಧ್ರುವ ಮೆಹಂದಿ ಶಾಸ್ತ್ರದಲ್ಲೂ ಆಂಜನೇಯ ರಾರಾಜಿಸುತ್ತಿದ್ದಾನೆ. ಹೌದು, ಧ್ರುವ ಸರ್ಜಾ ಅಂಗೈಗೆ ಆಂಜನೇಯನ ಚಿತ್ರ ಬಿಡಿಸಿಕೊಂಡಿದ್ದಾರೆ. ಅಣ್ಣ ಚಿರು ಓಂ ಚಿತ್ರವನ್ನು ಬಿಡಿಸಿಕೊಂಡಿದ್ದಾರೆ. ಇಬ್ಬರು ಅಣ್ಣತ್ತಮ್ಮಂದಿರ ಮೆಹಂದಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅರಿಶಿಣ ಶಾಸ್ತ್ರ

ಅರಿಶಿಣ ಶಾಸ್ತ್ರ

ಮದುವೆ ಅಂದ್ಮೇಲೆ ಅರಿಶಿಣ ಶಾಸ್ತ್ರದ ಬಗ್ಗೆ ಹೇಳಬೇಕಾ. ಧ್ರುವ ಸರ್ಜಾ ಮನೆಯಲ್ಲು ಹಳದಿ ಶಾಸ್ತ್ರವನ್ನು ಜೋರಾಗಿ ಮಾಡಿದ್ದಾರೆ. ಧ್ರುವ ಸರ್ಜಾರನ್ನು ಕೂರಿಸಿ ಮನೆಯವರೆಲ್ಲ ಅರಿಶಿಣ ಹಚ್ಚಿದ್ದಾರೆ. ಅರ್ಜುನ್ ಸರ್ಜಾ, ಮೇಘನಾ ರಾಜ್ ಸೇರಿದಂತೆ ಇಡೀ ಕುಟುಂಬ ಹಳದಿ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ. ವಿಶೇಷ ಅಂದರೆ ನಟಿ ತಾರಾ ಕೂಡ ಭಾಗಿಯಾಗಿ ಧ್ರುವ ಸರ್ಜಾಗೆ ಅರಿಶಿಣ ಹಚ್ಚಿದ್ದಾರೆ.

ಇಂದು ಸಂಜೆ ಕಂಕಣ ಶಾಸ್ತ್ರ

ಇಂದು ಸಂಜೆ ಕಂಕಣ ಶಾಸ್ತ್ರ

ಇಂದು ಸಂಜೆ ಎರಡು ಕುಟುಂಬದವರು ಬೃಂದಾವನ ಕನ್ವೆಕ್ಷ್ಷನ್ ಹಾಲ್ ಗೆ ತೆರಳಿದ್ದಾರೆ. ಶಾಸ್ತ್ರದ ಪ್ರಕಾರ ಲಗ್ನ ಕಟ್ಟುವ ಶಾಸ್ತ್ರ, ಕಂಕಣ ಕಟ್ಟುವ ಶಾಸ್ತ್ರ ಸೇರಿದಂತೆ ಇನ್ನು ಸಾಕಷ್ಟು ಶಾಸ್ತ್ರಗಳು ನಡೆಯಲಿದೆ. ಧ್ರುವ ಇಂದು ಬೆಳಗ್ಗೆಯಿಂದನೇ ಶಾಸ್ತ್ರಗಳಲ್ಲಿ ಭಾಗಿಯಾಗಿದ್ದು ಪ್ರತಿಯೊಂದು ಶಾಸ್ತ್ರಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಶುಭ ವೃಶ್ಚಿಕ ಲಗ್ನದಲ್ಲಿ ಮದುವೆ

ಶುಭ ವೃಶ್ಚಿಕ ಲಗ್ನದಲ್ಲಿ ಮದುವೆ

ನಾಳೆ ಧ್ರುವ ಸರ್ಜಾ ಮತ್ತು ಪ್ರೇರಣ ಮದುವೆ ನಡೆಯಲಿದೆ. ಇಬ್ಬರ ಮದುವೆಗೆ ಬೆಂಗಳೂರಿನ 'ಸಂಸ್ಕೃತಿ ಬೃಂದಾವನ ಕನ್ವೆಷನ್ ಹಾಲ್' ಸಜ್ಜಾಗಿದೆ. ಬೆಳಗ್ಗೆ 7.15 ರಿಂದ 7.45ರ ವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಧ್ರುವ ಮತ್ತು ಪ್ರೇರಣಾ ಶಂಕರ್ ಪತಿ-ಪತ್ನಿಯರಾಗಲಿದ್ದಾರೆ. ಬೆಳಗ್ಗೆ ಮದುವೆ ನಡೆದರೆ ಅದೆ ದಿನ ಸಂಜೆ 7.30ಕ್ಕೆ ಆರತಕ್ಷತೆ ಕಾರ್ಯಕ್ರಮ ಕೂಡ ನಡೆಯಲಿದೆ. ಅದ್ದೂರಿ ಆರತಕ್ಷತೆ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು ಭಾಗಿಯಾಗಿ ಧ್ರುವ ಮತ್ತು ಪ್ರೇರಣಾ ಜೋಡಿಗೆ ಆಶೀರ್ವಾದ ಮಾಡಲಿದ್ದಾರೆ. ಇನ್ನು ವಿಶೇಷ ಅಂದರೆ 25ರಂದು ಅಭಿಮಾನಿಗಳಿಗಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

More from Filmibeat

English summary
Kannada actor Dhruva Sarja grand Haladi ceremony. Dhruva Sarja will getting marriage to Prerana Shankar on November 23.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X