ಶಂಕರ್ ನಾಗ್ ಪತ್ನಿಗೆ ಧ್ರುವ ಸರ್ಜಾ ಮದುವೆಯ ಮಮತೆಯ ಕರೆಯೋಲೆ

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಇದೇ ತಿಂಗಳು 24ರಂದು ಧ್ರುವ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಾಲ್ಯದ ಗೆಳತಿ ಪ್ರೇರಣ ಶಂಕರ್ ಜೊತೆ ಧ್ರುವ ಹಸೆಮಣೆ ಏರುತ್ತಿದ್ದಾರೆ. ಈಗಾಗಲೆ ಧ್ರುವ ಮದುವೆ ಆಮಂತ್ರಣ ಪತ್ರಿಕೆ ಹಂಚುವಲ್ಲಿ ಬ್ಯುಸಿಯಾಗಿದ್ದಾರೆ.

ಸ್ನೇಹಿತರು, ಕುಟುಂಬದವರು, ಗಣ್ಯರು ಮತ್ತು ನಟ ನಟಿಯರಿಗೆ ಧ್ರುವ ಮದುವೆಯ ಮಮತೆಯ ಕರೆಯೋಲೆ ನೀಡುತ್ತಿದ್ದಾರೆ. ಈಗಾಗಲೆ ಸಾಕಷ್ಟು ಗಣ್ಯರಿಗೆ ಧ್ರುವ ಸರ್ಜಾ ಆಮಂತ್ರಣ ಪತ್ರಿಕೆ ತಲುಪಿದೆ. ಇತ್ತೀಚಿಗೆಷ್ಟೆ ಧ್ರುವ ಶಂಕರ್ ನಾಗ್ ಪತ್ನಿ ಅರುಂಧತಿ ರಾವ್ ಮತ್ತು ನಾದಿನಿ ಪದ್ಮಾಪತಿ ರಾವ್ ಸೇರಿದಂತೆ ಅನೇಕರಿಗೆ ಆಮಂತ್ರಣ ನೀಡಿದ್ದಾರೆ.

ಶಂಕ್ರಣ್ಣನ ಪತ್ನಿಗೆ ಧ್ರುವ ಸರ್ಜಾ ಮದುವೆಯ ಕರೆಯೋಲೆ

ಶಂಕ್ರಣ್ಣನ ಪತ್ನಿಗೆ ಧ್ರುವ ಸರ್ಜಾ ಮದುವೆಯ ಕರೆಯೋಲೆ

ಧ್ರುವ ಸರ್ಜಾ ಸದ್ಯ ಮದುವೆ ಆಮಂತ್ರಣ ಪತ್ರಿಕೆ ನೀಡುವಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರರಂಗದ ಅನೇಕ ಗಣ್ಯರಿಗೆ ಮದುವೆ ಕರೆಯೋಲೆ ನೀಡಿದ್ದಾರೆ. ಇತ್ತೀಚಿಗಷ್ಟೆ ಧ್ರುವ ಶಂಕರ್ ನಾಗ್ ಪತ್ನಿ ಅರುಂಧತಿ ರಾವ್ ಭೇಟಿಯಾಗಿ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅರುಂಧತಿ ರಾವ್ ಜೊತೆಗೆ ಅವರ ಸಹೋದರಿ ನಟಿ ಪದ್ಮಾಪತಿ ರಾವ್ ಅವರಿಗೂ ಮದುವೆ ಮಮತೆಯ ಕರೆಯೋಲೆ ನೀಡಿದ್ದಾರೆ. ಶಂಕ್ರಣ್ಣನ ಪತ್ನಿಯನ್ನು ಭೇಟಿಯಾಗಿ ಮದುವೆ ಕರೆಯೋಲೆ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುಧಾರಾಣಿಗೆ ತಲುಪಿದ ಆಮಂತ್ರಣ ಪತ್ರಿಕೆ

ಸುಧಾರಾಣಿಗೆ ತಲುಪಿದ ಆಮಂತ್ರಣ ಪತ್ರಿಕೆ

ಸ್ಯಾಂಡಲ್ ವುಡ್ ನ ಹಿರಿಯ ನಟಿ ಸುಧಾರಾಣಿ ಅವರಿಗೂ ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆ ತಲುಪಿದೆ. ಇತ್ತೀಚಿಗೆ ಧ್ರುವ ಮಲ್ಲೇಶ್ವರದಲ್ಲಿ ಇರುವ ಸುಧಾರಾಣಿ ನಿವಾಸಕ್ಕೆ ಭೇಟಿ ನೀಡಿ ಮದುವೆಗೆ ಆಹ್ವಾನ ಮಾಡಿದ್ದಾರೆ. ಧ್ರುವ ಸರ್ಜಾ ಮನೆಗೆ ಭೇಟಿ ನೀಡಿ ಆಮಂತ್ರಣ ಪತ್ರಿಕೆ ನೀಡುತ್ತಿರುವ ಫೋಟೋವನ್ನು ಸುಧಾರಾಣಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಫೋಟೋ ಶೇರ್ ಮಾಡಿದ್ದಾರೆ.

ಸತೀಶ್ ಕೈಯಲ್ಲಿ ಧ್ರುವ ಮದುವೆ ಆಮಂತ್ರಣಗಳನ್ನು

ಸತೀಶ್ ಕೈಯಲ್ಲಿ ಧ್ರುವ ಮದುವೆ ಆಮಂತ್ರಣಗಳನ್ನು

ನಟ ನೀನಾಸಂ ಸತೀಶ್ ಗೂ ಈಗೀಗಲೆ ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆ ತಲುಪಿದೆ. ಸತೀಶ್ ಮನೆಗೆ ಭೇಟಿ ನೀಡಿ ಧ್ರುವ ಮದುವೆಯ ಮಮತೆಯ ಕರೆಯೋಲೆ ನೀಡಿದ್ದಾರೆ. ಧ್ರುವ ಮದುವೆ ಆಮಂತ್ರಣ ಪತ್ರಿಕೆ ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಧನಂಜಯ್ ಮತ್ತು ಪ್ರಜ್ವಲ್ ಗೆ ತಲುಪಿದ ಆಮಂತ್ರಣಗಳನ್ನು

ಧನಂಜಯ್ ಮತ್ತು ಪ್ರಜ್ವಲ್ ಗೆ ತಲುಪಿದ ಆಮಂತ್ರಣಗಳನ್ನು

ಧ್ರುವ ಸರ್ಜಾ ಮದುವೆ ಆಮಂತ್ರಣ ಡಾಲಿ ಖ್ಯಾತಿಯ ಧನಂಜಯ್ ಕೈ ಸೇರಿದೆ. ಧನಂಜಯ್ ಮನೆಗೆ ಭೇಟಿ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ. ಜೊತೆಗೆ ನಟ ಪ್ರಜ್ವಲ್ ದೇವರಾಜ್ ಮನೆಗೂ ಭೇಟಿ ಮಾಡಿ ಆಮಂತ್ರಣ ನೀಡಿದ್ದಾರೆ. ಆಂಜನೇಯ ರಾರಾಜಿಸುವ ಧ್ರುವ ಮದುವೆ ಆಮಂತ್ರಣ ಪತ್ರಿಕೆ ಚಿತ್ರರಂಗದ ಸಾಕಷ್ಟು ಗಣ್ಯರ ಕೈ ಸೇರಿದೆ.

More from Filmibeat

English summary
Kannada actor Dhruva Sarja invited Arundhati Rao, Padmavati Rao and other actress for his wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X