»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಧನ್ಯವಾದ ಅರ್ಪಿಸಿದ ಧ್ರುವ ಸರ್ಜಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಧನ್ಯವಾದ ಅರ್ಪಿಸಿದ ಧ್ರುವ ಸರ್ಜಾ

Posted By:
Subscribe to Filmibeat Kannada

ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದಾರೆ. 'ಭರ್ಜರಿ' ಸಿನಿಮಾದಲ್ಲಿ ಸುಮಾರು 12 ನಿಮಿಷಗಳ ಕಾಲ ದರ್ಶನ್ ರವರ ವಾಯ್ಸ್ ಓವರ್ ಇರಲಿದೆ.

ತಮ್ಮ ಬಿಜಿ ಶೆಡ್ಯೂಲ್ ನಡುವೆಯೂ ತಮ್ಮ ಚಿತ್ರಕ್ಕೆ ಧ್ವನಿ ನೀಡಿರುವುದರಿಂದ 'ದಾಸ' ದರ್ಶನ್ ರವರಿಗೆ 'ಭರ್ಜರಿ' ನಾಯಕ ಧ್ರುವ ಸರ್ಜಾ ಹೃತ್ಪೂರ್ವಕವಾಗಿ ಧನ್ಯವಾದಗಳನ್ನ ಅರ್ಪಿಸಿದ್ದಾರೆ.

'ಭರ್ಜರಿ' ಚಿತ್ರವನ್ನು ದರ್ಶನ್ ಅಭಿಮಾನಿಗಳು ನೋಡಲೇಬೇಕು! ಏಕೆ?

Kannada Actor Dhruva Sarja thanks Challenging Star Darshan

''ಭರ್ಜರಿ' ಚಿತ್ರಕ್ಕೆ ತಮ್ಮ ಧ್ವನಿ ನೀಡಿ, ಚಿತ್ರವನ್ನ ಇನ್ನಷ್ಟು ಸ್ಪೆಷಲ್ ಮಾಡಿದ ನಲ್ಮೆಯ ದರ್ಶನ್ ರವರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮಗೆ ನಾನು ಚಿರಋಣಿ ಸರ್'' ಎಂದು ನಟ ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ.

ಧ್ರುವ ಸರ್ಜಾ ರವರ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

ಅಂದ್ಹಾಗೆ, 'ಭರ್ಜರಿ' ಸಿನಿಮಾದ ಕಥೆ 'ಲೈಫ್ ಅಂಡ್ ಚಾಲೆಂಜ್' ಎಂಬ ಕಾನ್ಸೆಪ್ಟ್ ಅಡಿ ಸಾಗಲಿದ್ದು, ಸಿನಿಮಾದ ಆರಂಭ, ಇಂಟರ್ವಲ್ ಹಾಗೂ ಕೊನೆಯಲ್ಲಿ ದರ್ಶನ್ ರವರ ಧ್ವನಿ ಇರಲಿದೆ.

'ಭರ್ಜರಿ' ಚಿತ್ರದಲ್ಲಿ ಧ್ರುವ ಸರ್ಜಾ, ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ 'ಬಹದ್ದೂರ್' ಚೇತನ್ ಆಕ್ಷನ್ ಕಟ್ ಹೇಳಿದ್ದಾರೆ.

English summary
Kannada Actor Dhruva Sarja has taken his twitter account to thank Challenging Star Darshan for lending his voice for 'Bharjari' movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada