'ಬಹದ್ದೂರ್' ಗಂಡು ಧ್ರುವ ಸರ್ಜಾಗೆ ಕೂಡಿ ಬಂತು ಕಂಕಣ ಭಾಗ್ಯ
Recommended Video

ಸಿನಿ ಲೋಕದಲ್ಲಿ ಮದುವೆ ಸೀಸನ್ ಜೋರಾಗಿದೆ. ನಿನ್ನೆ-ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್ವೀರ್ ಸಿಂಗ್ ಕಾಲಿಟ್ಟರು. ಇನ್ನೂ ಹಸೆಮಣೆ ಏರುವ ಹೊಸ್ತಿಲಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಇದ್ದಾರೆ.
ಇನ್ನೂ ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ನಿರ್ದೇಶಕ ಪವನ್ ಒಡೆಯರ್, ಗಾಯಕ ಸುನೀಲ್ ರಾವ್, ನಟಿ ಗೌತಮಿ ಗೌಡ, ನಯನ ಪುಟ್ಟಸ್ವಾಮಿ, ಕಿರುತೆರೆ ನಟ ಸ್ಕಂದ ಅಶೋಕ್ ಮದುವೆ ಆದರು.
ನಟ ಚಿರಂಜೀವಿ ಸರ್ಜಾ-ಮೇಘನಾ ರಾಜ್ ಕಲ್ಯಾಣೋತ್ಸವ ನಡೆದಿದ್ದು ಕೂಡ ಇದೇ ವರ್ಷ ಅನ್ನೋದು ನಿಮಗೆ ನೆನಪಿರಲಿ. ಇದೀಗ ಚಂದನವನದಲ್ಲಿ ಮತ್ತೆ ಮದುವೆ ರಂಗು ತುಂಬಲಿದೆ. 'ಬಹದ್ದೂರ್' ಗಂಡು ಧ್ರುವ ಸರ್ಜಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಮುಂದೆ ಓದಿರಿ..

ಗುಡ್ ನ್ಯೂಸ್ ಕೊಟ್ಟ ಧ್ರುವ ಸರ್ಜಾ
ಇದೇ ವರ್ಷದ ಮೇ ತಿಂಗಳಲ್ಲಿ ಚಿರಂಜೀವಿ ಸರ್ಜಾ ಅವರ ವಿವಾಹ ಮಹೋತ್ಸವ ನಡೆದಿತ್ತು. ಇದೀಗ ಸರ್ಜಾ ಫ್ಯಾಮಿಲಿಯಲ್ಲಿ ಮತ್ತೆ ಮದುವೆ ಸಂಭ್ರಮ ಶುರುವಾಗಿದೆ. ಚಿರು ಸಹೋದರ ಧ್ರುವ ಸರ್ಜಾಗೆ ಕಲ್ಯಾಣ ಫಿಕ್ಸ್ ಆಗಿದೆ.

ಅಂದು ಧ್ರುವ ಸರ್ಜಾ ಹೀಗೆ ಹೇಳಿದ್ದರು.!
''ನನಗೀಗ 30 ವರ್ಷ. 31ನೇ ಬರ್ತಡೆಯಷ್ಟರಲ್ಲಿ ಮದುವೆ ಆಗುತ್ತೇನೆ'' ಎಂದು ಕಳೆದ ತಿಂಗಳಷ್ಟೇ ತಮ್ಮ ಹುಟ್ಟುಹಬ್ಬದ ದಿನ (ಅಕ್ಟೋಬರ್ 6) ಧ್ರುವ ಸರ್ಜಾ ಹೇಳಿಕೆ ನೀಡಿದ್ದರು. ಅದರಂತೆ ಧ್ರುವ ಸರ್ಜಾ ಸದ್ಯ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಮುಂದಿನ ತಿಂಗಳು ಧ್ರುವ ಸರ್ಜಾ ನಿಶ್ಚಿತಾರ್ಥ
ಮುಂದಿನ ತಿಂಗಳು ಅಂದ್ರೆ ಡಿಸೆಂಬರ್ 9 ರಂದು ಧ್ರುವ ಸರ್ಜಾ ಅವರ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಬೆಂಗಳೂರಿನ ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಎಂಗೇಜ್ ಮೆಂಟ್ ಗಾಗಿ ಆರ್ಟ್ ಡೈರೆಕ್ಟರ್ ಸೆಟ್ ರೆಡಿ ಮಾಡುತ್ತಿದ್ದಾರೆ.

ಇದು ಲವ್ ಮ್ಯಾರೇಜ್.!
''ನಾನು ಪಕ್ಕಾ ಲವ್ ಮ್ಯಾರೇಜ್ ಆಗೋದು'' ಅಂತ ಧ್ರುವ ಸರ್ಜಾ ಹೇಳಿದ್ದರು. ಅದರಂತೆ ಪ್ರೀತಿಸಿದ ಹುಡುಗಿಯ ಜೊತೆಗೆ ಧ್ರುವ ಸರ್ಜಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಯಾರು 'ಆ' ಹುಡುಗಿ.?
ಸದ್ಯಕ್ಕೆ ಧ್ರುವ ಸರ್ಜಾ ಎಂಗೇಜ್ಮೆಂಟ್ ಗಾಗಿ ಸಕಲ ಸಿದ್ಧತೆ ನಡೆಯುತ್ತಿದೆ ಅನ್ನೋದು ಪಕ್ಕಾ. ಆದ್ರೆ, ಧ್ರುವ ಸರ್ಜಾ ವರಿಸಲಿರುವ ಹುಡುಗಿ ಯಾರು.? ಆಕೆಯ ಹಿನ್ನಲೆ ಏನು.? ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications











