For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಮದುವೆ: ಅಭಿಮಾನಿಗಳಿಗಿದೆ ಒಂದು ಸೂಪರ್ ಸ್ಪೆಷಲ್ ನ್ಯೂಸ್.!

  |
  Dhruva Sarja to host a special banquet for his fans | Filmibeat Kannada

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾನೇ ಹಾಗೆ. ಮನೆ ಬಳಿ ಯಾರೇ 'ಅಭಿಮಾನಿ' ಅಂತ ಬಂದರೂ ಧ್ರುವ ಸರ್ಜಾ ಪ್ರೀತಿಯಿಂದ ಮಾತನಾಡಿಸುತ್ತಾರೆ. ಎಷ್ಟೇ ಸುಸ್ತಾಗಿದ್ದರೂ ಅಭಿಮಾನಿಗಳನ್ನ ಮಾತ್ರ ಧ್ರುವ ಸರ್ಜಾ ಕಡೆಗಣಿಸುವುದಿಲ್ಲ. ಇದೀಗ ಮದುವೆಯಲ್ಲೂ ಅಷ್ಟೇ ತಮ್ಮ ಪ್ರೀತಿಯ ಅಭಿಮಾನಿಗಳಿಗಾಗಿ ಧ್ರುವ ಸರ್ಜಾ ಒಂದು ಸೂಪರ್ ಸ್ಪೆಷಲ್ ಪ್ಲಾನ್ ಮಾಡಿದ್ದಾರೆ.

  ಧ್ರುವ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ನವೆಂಬರ್ 24 ರಂದು ಪ್ರೇರಣಾ ಶಂಕರ್ ಜೊತೆಗೆ ಧ್ರುವ ಸರ್ಜಾ ವಿವಾಹ ಮಹೋತ್ಸವ ನಡೆಯಲಿದೆ. ನವೆಂಬರ್ 24 ರಂದು ತಮ್ಮ ಮದುವೆಗೆ ಸಾಕ್ಷಿ ಆಗಲು ಚಿತ್ರರಂಗದ ಗಣ್ಯರಿಗೆ ಧ್ರುವ ಸರ್ಜಾ ಆಹ್ವಾನ ನೀಡಿದ್ದರೆ, ನವೆಂಬರ್ 25 ರಂದು ಇಡೀ ದಿನ ಅಭಿಮಾನಿಗಳಿಗೆ ಮೀಸಲಿಟ್ಟಿದ್ದಾರೆ.

  ತಮ್ಮ ಮದುವೆ ಬಗ್ಗೆ ಸುದ್ದಿಗೋಷ್ಠಿ ಕರೆದ ಧ್ರುವ ಸರ್ಜಾ ಏನೇನು ಹೇಳಿದರು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ..

  ಅಭಿಮಾನಿಗಳನ್ನ ಧ್ರುವ ಸರ್ಜಾ ಕಡೆಗಣಿಸಿಲ್ಲ.!

  ಅಭಿಮಾನಿಗಳನ್ನ ಧ್ರುವ ಸರ್ಜಾ ಕಡೆಗಣಿಸಿಲ್ಲ.!

  ಸ್ಟಾರ್ ಗಳ ಮದುವೆ ಒಂದು ಪ್ರೈವೇಟ್ ಅಫೇರ್ ಆಗಿರೋದ್ರಿಂದ ಅಲ್ಲಿ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ಕೊಂಚ ನಿರ್ಬಂಧ ಇದ್ದೇ ಇರುತ್ತದೆ. ಹಾಗಂತ ಅಭಿಮಾನಿಗಳ ವಿಚಾರವಾಗಿ ಧ್ರುವ ಸರ್ಜಾ ಸಂಪೂರ್ಣವಾಗಿ ನಿರ್ಬಂಧ ಹೇರಿಲ್ಲ. ಹಾಗ್ನೋಡಿದ್ರೆ, ಧ್ರುವ ಸರ್ಜಾಗೆ ಅಭಿಮಾನಿಗಳು ಅಂದ್ರೆ ಪ್ರಾಣ. ಧ್ರುವ ಸರ್ಜಾ ಅಭಿನಯದ 'ಅದ್ಧೂರಿ', 'ಬಹದ್ದೂರ್', 'ಭರ್ಜರಿ' ಸಿನಿಮಾಗಳು ಸೂಪರ್ ಹಿಟ್ ಆಗೋಕೆ ಅಭಿಮಾನಿಗಳೇ ಕಾರಣ. ಹೀಗಾಗಿ, ತಮ್ಮ ವಿವಾಹ ಮಹೋತ್ಸವದಲ್ಲಿ ಅಭಿಮಾನಿಗಳನ್ನು ಧ್ರುವ ಸರ್ಜಾ ಕಡೆಗಣಿಸಿಲ್ಲ.

  ಉಪೇಂದ್ರ ಮತ್ತು ದುನಿಯ ವಿಜಿ ಕೈ ಸೇರಿದ ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆಉಪೇಂದ್ರ ಮತ್ತು ದುನಿಯ ವಿಜಿ ಕೈ ಸೇರಿದ ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆ

  ಅಭಿಮಾನಿಗಳಿಗೆ ವಿಶೇಷ ಔತಣ ಕೂಟ

  ಅಭಿಮಾನಿಗಳಿಗೆ ವಿಶೇಷ ಔತಣ ಕೂಟ

  ತಮ್ಮನ್ನು ಪ್ರೀತಿಸುವ ಅಭಿಮಾನಿಗಳನ್ನ ದೇವರು ಅಂತ ಕರೆಯುವ ಧ್ರುವ ಸರ್ಜಾ ನವೆಂಬರ್ 25 ರಂದು ತಮ್ಮೆಲ್ಲಾ ಫ್ಯಾನ್ಸ್ ಗಾಗಿ ಔತಣ ಕೂಟ ಆಯೋಜಿಸಿದ್ದಾರೆ. ನವೆಂಬರ್ 25 ರಂದು ಇಡೀ ದಿನ ಅಭಿಮಾನಿಗಳಿಗಾಗಿಯೇ ಧ್ರುವ ಸರ್ಜಾ ಮೀಸಲಿಟ್ಟಿದ್ದಾರೆ. ಅಂದು ನವ ಜೋಡಿಗೆ ಆಶೀರ್ವಾದ ಮಾಡಿ, ಊಟ ಮಾಡುವ ಅವಕಾಶವನ್ನ ತಮ್ಮ ಅಭಿಮಾನಿಗಳಿಗೆ ಧ್ರುವ ಸರ್ಜಾ ಕಲ್ಪಿಸಿದ್ದಾರೆ.

  ಆ ಕಡೆ ಅಯೋಧ್ಯೆ ತೀರ್ಪು: ಈ ಕಡೆ ಧ್ರುವ ಸರ್ಜಾ ಟ್ವೀಟ್ಆ ಕಡೆ ಅಯೋಧ್ಯೆ ತೀರ್ಪು: ಈ ಕಡೆ ಧ್ರುವ ಸರ್ಜಾ ಟ್ವೀಟ್

  ಮದುವೆಯಲ್ಲೂ ರಾರಾಜಿಸಲಿದ್ದಾನೆ ಆಂಜನೇಯ

  ಮದುವೆಯಲ್ಲೂ ರಾರಾಜಿಸಲಿದ್ದಾನೆ ಆಂಜನೇಯ

  ಧ್ರುವ ಸರ್ಜಾ ಅಪ್ಪಟ ಆಂಜನೇಯನ ಭಕ್ತ. ಹೀಗಾಗಿ, ನಿಶ್ಚಿತಾರ್ಥ ಮತ್ತು ಮದುವೆಯ ಕರೆಯೋಲೆಯಲ್ಲೂ ಆಂಜನೇಯ ಇದ್ದಾನೆ. ಧ್ರುವ ಸರ್ಜಾ ಮದುವೆಯಲ್ಲೂ ಆಂಜನೇಯ ರಾರಾಜಿಸಲಿದ್ದಾನಂತೆ. ಮದುವೆಯ ಥೀಮ್ ಮತ್ತು ಉಡುಗೆ ವಿಭಿನ್ನವಾಗಿ ಇರುತ್ತದೆ ಅಂತ ಧ್ರುವ ಸರ್ಜಾ ಹೇಳಿದ್ದಾರೆ.

  ಮದುವೆ ಎಲ್ಲಿ, ಯಾವಾಗ.?

  ಮದುವೆ ಎಲ್ಲಿ, ಯಾವಾಗ.?

  ನವೆಂಬರ್ 24 ರಂದು ಭಾನುವಾರ ಬೆಳಗ್ಗೆ 7.15 ರಿಂದ 7.45 ರವರಿಗೆ ಸಲ್ಲುವ ಶುಭ ವೇಳೆಯಲ್ಲಿ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಕೊರಳಿಗೆ ಧ್ರುವ ಸರ್ಜಾ ಮಾಂಗಲ್ಯಧಾರಣೆ ಮಾಡಲಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದಲ್ಲಿ ಇರುವ ಸಂಸ್ಕೃತಿ ಬೃಂದಾವನ ಕನ್ವೆನ್ಷನ್ ಹಾಲ್ ನಲ್ಲಿ ಮದುವೆ ಸಮಾರಂಭ ನಡೆಯಲಿದೆ. ಸಂಜೆ 7.30 ರಿಂದ ಆರತಕ್ಷತೆ ನೆರವೇರಲಿದೆ. ಚಿತ್ರರಂಗದ ಗಣ್ಯರು ಆಗಮಿಸಿ ವಧು-ವರರಿಗೆ ಆಶೀರ್ವಾದ ಮಾಡಲಿದ್ದಾರೆ. ಮಾರನೇ ದಿನ ಅಲ್ಲೇ ಅಭಿಮಾನಿಗಳಿಗೆ ಔತಣಕೂಟ ಆಯೋಜಿಸಲಾಗಿದೆ.

  English summary
  Kannada Actor Dhruva Sarja to host a special banquet for his fans on November 25th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X