ಹೈದರಾಬಾದ್‌ಗೆ ಧ್ರುವ ಸರ್ಜಾ ಮತ್ತು ನಂದ ಕಿಶೋರ್ ಹೋಗಿದ್ದೇಕೆ?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ. ಮೊದಲೇ ಹೇಳಿರುವಂತೆ ಈ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಾಣಲಿದೆ.
ಪೊಗರು ಚಿತ್ರದ ಖರಾಬು ಹಾಡು ಕರ್ನಾಟಕದಲ್ಲಿ ದೊಡ್ಡ ಹಿಟ್ ಆಗಿದ್ದು, ಅದೇ ರೀತಿ ಆಂಧ್ರ ಹಾಗೂ ತೆಲಂಗಾಣದಲ್ಲಿಯೂ ತೆಲುಗು ವರ್ಷನ್ ಹಾಡು ಸೂಪರ್ ಹಿಟ್ ಎನಿಸಿಕೊಂಡಿದೆ.
ಜನವರಿಯಲ್ಲಿ ಪೊಗರು ಸಿನಿಮಾ ಬಿಡುಗಡೆ ಮಾಡುವ ಸಿದ್ಧತೆ ನಡೆಸುತ್ತಿರುವ ನಿರ್ದೇಶಕ ನಂದಕಿಶೋರ್ ಈಗ ಹೈದರಾಬಾದ್‌ಗೆ ತೆರಳಿದ್ದಾರೆ. ನಟ ಧ್ರುವ ಸರ್ಜಾ ಜೊತೆ ಹೈದರಾಬಾದ್‌ಗೆ ಬಂದಿಳಿದಿರುವ ಡೈರೆಕ್ಟರ್ ಸಿನಿಮಾಗೆ ಸಂಬಂಧಿಸಿದ ಕೆಲಸದ ಉದ್ದೇಶದಿಂದ ಭೇಟಿ ನೀಡಿದ್ದಾರೆ.

ಆದ್ರೆ, ಹೈದರಾಬಾದ್ ಪ್ರಯಾಣದ ನಿರ್ದಿಷ್ಟ ಕಾರಣ ಸದ್ಯಕ್ಕೆ ಸಿಕ್ಕಿಲವಾದರೂ, ಪೊಗರು ತೆಲುಗಿನಲ್ಲಿ ಬಿಡುಗಡೆ ಮಾಡುತ್ತಿರುವ ಕಾರಣ, ಈ ಸಂಬಂಧ ಮಾತುಕತೆಗೆ ತೆರಳಿದ್ದಾರೆ ಎನ್ನಲಾಗಿದೆ.
ಧ್ರುವ ಸರ್ಜಾ ಹಾಗೂ ನಂದ ಕಿಶೋರ್ ಇಬ್ಬರು ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಪೊಗರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ತೆಲುಗು ನಟ ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











