For Quick Alerts
  ALLOW NOTIFICATIONS  
  For Daily Alerts

  ಮದುವೆ ಮುಗಿಯುತ್ತಿದ್ದಂತೆಯೇ ಮತ್ತೆ ಚಿತ್ರೀಕರಣಕ್ಕೆ ಹೊರಟ ನಟ ಧ್ರುವ ಸರ್ಜಾ

  |

  ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವೈವಾಹಿಕ ಜೀವನಕ್ಕೆ ಕಾಲಿಟ್ಟು ನಾಲ್ಕು ದಿನಗಳಾಗಿದೆ. ಇದೆ ತಿಂಗಳು 24ಕ್ಕೆ ಧ್ರುವ ಸರ್ಜಾ ಬಾಲ್ಯದ ಗೆಳತಿ ಪ್ರೇರಣ ಶಂಕರ್ ಜೊತೆ ಹಸೆಮಣೆ ಏರಿದ್ದಾರೆ. ಮದುವೆಯಾಗಿ ಇನ್ನು ನಾಲ್ಕುದಿನಗಳಾಗಿಲ್ಲ ಆಗಲೆ ಧ್ರುವ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ.

  ಮದುವೆಯಲ್ಲೂ ಗಡ್ಡ ತೆಗೆಯದ ಧ್ರುವ ಸರ್ಜಾ: ಪತ್ನಿ ಪ್ರೇರಣಾಗೆ ಬೇಸರ ಇದ್ಯಾ.?ಮದುವೆಯಲ್ಲೂ ಗಡ್ಡ ತೆಗೆಯದ ಧ್ರುವ ಸರ್ಜಾ: ಪತ್ನಿ ಪ್ರೇರಣಾಗೆ ಬೇಸರ ಇದ್ಯಾ.?

  ಧ್ರುವ ಸದ್ಯ ಬಹು ನಿರೀಕ್ಷೆಯ 'ಪೊಗರು' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಕೊನೆಯ ಹಂತದ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಸದ್ಯ ಮದುವೆಯ ಕಾರಣ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಧ್ರುವ ಈಗ ಮತ್ತೆ ಚಿತ್ರೀಕರಣಕ್ಕೆ ಹೊರಟಿದ್ದಾರೆ.

  ಮದುವೆ ನಂತರ ಚಿತ್ರೀಕರಣದಲ್ಲಿ ಧ್ರುವ

  ಮದುವೆ ನಂತರ ಚಿತ್ರೀಕರಣದಲ್ಲಿ ಧ್ರುವ

  ಪೊಗರು ಚಿತ್ರದ ಚಿತ್ರೀಕರಣ ಸದ್ಯ ಬೆಂಗಳೂರಿನ್ಲಲಿ ನಡೆಯುತ್ತಿದೆ. ನಾಳೆ ಆಕ್ಷನ್ ಪ್ರಿನ್ಸ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಇನ್ನು ಡಿಸೆಂಬರ್ 5 ರಿಂದ ಪೊಗರು ಚಿತ್ರದ ಹಾಡಿನ ಚಿತ್ರೀಕರಣ ನಡೆಸಲು ಪ್ಲಾನ್ ಮಾಡಿದೆ ಚಿತ್ರತಂಡ. ಡಿಸೆಂಬರ್ ನಲ್ಲಿಯೆ ಸಂಪೂರ್ಣ ಚಿತ್ರೀಕರಣ ಮುಗಿಸಿ ಜನವರಿಯಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡಲು ಚಿತ್ರತಂಡ ನಿರ್ಧರಿಸಿದೆ.

  ಚಿತ್ರಗಳು: ತಾರೆಗಳ ತೋಟದಲ್ಲಿ ಧ್ರುವ ಸರ್ಜಾ 'ಅದ್ಧೂರಿ' ಕಲ್ಯಾಣಚಿತ್ರಗಳು: ತಾರೆಗಳ ತೋಟದಲ್ಲಿ ಧ್ರುವ ಸರ್ಜಾ 'ಅದ್ಧೂರಿ' ಕಲ್ಯಾಣ

  ಧ್ರುವ ಡೆಡಿಕೇಶನ್ ಗೆ ಅಭಿಮಾನಿಗಳ ಮೆಚ್ಚಿಗೆ

  ಧ್ರುವ ಡೆಡಿಕೇಶನ್ ಗೆ ಅಭಿಮಾನಿಗಳ ಮೆಚ್ಚಿಗೆ

  ಚಿತ್ರೀಕರಣ ಇನ್ನು ಭಾಕಿ ಇರುವ ಕಾರಣ ಧ್ರುವ ಮದುವೆಯಲ್ಲೂ ಕೂಡ ಉದ್ದ ದಾಡಿ ಮತ್ತು ಗಡ್ಡ ಬಿಟ್ಟಿದ್ದರು. ಮದುವೆಯಾಗಿ ಇನ್ನು ನಾಲ್ಕೈದು ದಿನಗಳಲ್ಲೆ ಚಿತ್ರೀಕರಣಕ್ಕೆ ಮರಳಲುತ್ತಿರುವ ಧ್ರುವ ಡೆಡಿಕೇಶನ್ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಟ್ರೈಲರ್ ಗೆ ಉತ್ತಮ ರೆಸ್ಪಾನ್ಸ್

  ಟ್ರೈಲರ್ ಗೆ ಉತ್ತಮ ರೆಸ್ಪಾನ್ಸ್

  'ಪೊಗರು' ನಂದಕಿಶೋರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈಗಾಗಲೆ ಡೈಲಾಗ್ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಧ್ರುವಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

  ಧೃವ ಮದುವೆಯಲ್ಲಿ ಮೇಘನಾ ರಾಜ್ ನಡೆದುಕೊಂಡ ರೀತಿಗೆ ಅಭಿಮಾನಿಗಳಿಂದ ಮೆಚ್ಚುಗೆಧೃವ ಮದುವೆಯಲ್ಲಿ ಮೇಘನಾ ರಾಜ್ ನಡೆದುಕೊಂಡ ರೀತಿಗೆ ಅಭಿಮಾನಿಗಳಿಂದ ಮೆಚ್ಚುಗೆ

  24ಕ್ಕೆ ಮದುವೆ 25ಕ್ಕೆ ಆರತಕ್ಷತೆ

  24ಕ್ಕೆ ಮದುವೆ 25ಕ್ಕೆ ಆರತಕ್ಷತೆ

  ಇದೆ ತಿಂಗಳು 24ಕ್ಕೆ ಧ್ರುವ ಮದುವೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ಇರುವ ಸಂಸ್ಕೃತಿ ಬೃಂದಾವನ ಕನ್ಷೆನ್ಸನ್ ಹಾಲ್ ನಲ್ಲಿ ಅದ್ಧೂರಿಯಾಗಿ ನಡೆಯಿತು. 25ರಂದು ಅಭಿಮಾನಿಗಳಿಗಾಗಿ ವಿಶೇಷ ಆರತಕ್ಷತೆಯನ್ನು ಹಮ್ಮಿಕೊಂಡಿದ್ದರು. ಸುಮಾರು 30 ಸಾವಿರ ಅಭಿಮಾನಿಗಳು ಧ್ರುವ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

  English summary
  Kannada actor Dhruva Sarja will back to Pogaru Shooting after marriage. Pogaru is directed by Nanda Kishore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X