Dhruva Sarja Birthday CDP: ಹನುಮಂತನ ಬಲದೊಂದಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆರ್ಭಟ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಣೆಗೆ ಕ್ಷಣಗಣನೆ ಶುರುವಾಗಿದೆ. ಇತ್ತೀಚೆಗಷ್ಟೆ ಗಂಡು ಮಗುವನ್ನು ಸ್ವಾಗತಿಸಿದ ಧ್ರುವ ಹುಟ್ಟುಹಬ್ಬದ ಸಂಭ್ರಮ ಡಬಲ್ ಆಗಲಿದೆ. ಕಳೆದ ವರ್ಷ ಆಕ್ಷನ್ ಪ್ರಿನ್ಸ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿರಲಿಲ್ಲ. ಆದರೆ ಈ ಬಾರಿ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಕೈ ಕುಲುಕಿ ಶುಭ ಕೋರುವ ಅವಕಾಶ ಸಿಗುತ್ತಿದೆ.

ಅಣ್ಣ ಚಿರಂಜೀವಿ ಸರ್ಜಾ ಅಗಲಿಕೆ ಬಳಿಕ ನೋವಿನಲ್ಲೇ ಇದ್ದ ಧ್ರುವ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದರು. 3 ವರ್ಷಗಳ ಬಳಿಕ ಈ ಬಾರಿ ಹುಟ್ಟುಹಬ್ಬದ ದಿನ(ಅಕ್ಟೋಬರ್ 6) ಅಭಿಮಾನಿಗಳ ಕೈಗೆ ಸಿಗುತ್ತಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಧ್ರುವ ಹುಟ್ಟುಹಬ್ಬ ಆಚರಣೆ ಶುರುವಾಗಿದೆ. ಅಂದರೆ ಆಕ್ಷನ್‌ ಪ್ರಿನ್ಸ್ ಬರ್ತ್‌ಡೇ ಕಾಮನ್ ಸಿಡಿಪಿಗಳು ಸಖತ್ ವೈರಲ್ ಆಗ್ತಿದೆ. ಈಗಾಗಲೇ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

Dhruva-Sarjas-birthday-CDP

ಇನ್ನು ಧ್ರುವ ಹುಟ್ಟುಹಬ್ಬ ಸಂಭ್ರಮದಲ್ಲೇ ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಎಲ್ಲರೂ ಸಿನಿಮಾ ನೋಡುವಂತೆ ಆಕ್ಷನ್ ಪ್ರಿನ್ಸ್ ಮನವಿ ಮಾಡಿದ್ದಾರೆ. ರಾಮ್‌ ನಾರಾಯಣ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿರು ಪಾತ್ರಕ್ಕೆ ಧ್ರುವ ಡಬ್ ಮಾಡಿದ್ದಾರೆ.

ಸದ್ಯ ಧ್ರುವ ಸರ್ಜಾ 'ಮಾರ್ಟಿನ್' ಹಾಗೂ 'ಕೆಡಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2 ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡದಾಗಿ ತೆರೆಗೆ ಬರಲಿವೆ. ವರ್ಷಾಂತ್ಯಕ್ಕೆ 'ಮಾರ್ಟಿನ್' ಆರ್ಭಟ ಶುರುವಾಗಲಿದೆ. ಎ. ಪಿ ಅರ್ಜುನ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ವೈಭವಿ ಶಾಂಡಿಲ್ಯ ನಾಯಕಿಯಾಗಿ ಮಿಂಚಿದ್ದಾರೆ.

ಸಾಮಾನ್ಯವಾಗಿ ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕಾಮನ್ ಡಿಪಿ ಕ್ರಿಯೇಟ್ ಮಾಡಿ ಟ್ರೆಂಡ್ ಮಾಡುತ್ತಾರೆ. ಆದರೆ 'ಮಾರ್ಟಿನ್' ಚಿತ್ರತಂಡ ಧ್ರುವ ಬರ್ತ್‌ಡೇ ಸಿಡಿಪಿ ರಿಲೀಸ್ ಮಾಡಿದೆ. ಹನುಮಂತನ ದೊಡ್ಡ ಅಭಿಮಾನಿ ಆಕ್ಷನ್ ಪ್ರಿನ್ಸ್. ಹಾಗಾಗಿ ಹನುಮಂತನ ಚಿತ್ರದ ಮುಂದೆ ಧ್ರುವ ಖಡಕ್ ಲುಕ್‌ನಲ್ಲಿ ಯುವರಾಜನಂತೆ ಕಾಣಿಸಿಕೊಂಡಿರುವ ಸಿಡಿಪಿ ಡಿಸೈನ್ ಮಾಡಲಾಗಿದೆ. ಸಿಡಿಪಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಅಭಿಮಾನಿಗಳು ಸಹ ಸ್ಪೆಷಲ್ ಡಿಪಿ ಕ್ರಿಯೇಟ್ ಮಾಡಿ ರಿಲೀಸ್ ಮಾಡಿಸಿದ್ದಾರೆ. ಧ್ರುವ ಸರ್ಕಾರಿ ಶಾಲಾ ಮಕ್ಕಳ ಎದುರು ಕೈ ಮುಗಿದು ನಿಂತಿರುವಂತೆ ಆ ಡಿಪಿ ಇದೆ. ಎರಡು ಬರ್ತ್‌ಡೇ ಸಿಡಿಪಿಗಳು ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದೆ. ಇನ್ನು ಮಧ್ಯರಾತ್ರಿಯಿಂದಲೇ ಧ್ರುವ ಸರ್ಜಾ ನಿವಾಸದಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆ ಶುರುವಾಗಲಿದೆ. ದೊಡ್ಡಮಟ್ಟದಲ್ಲಿ ವಿಐಪಿಗಳು(ಅಭಿಮಾನಿಗಳು) ಈ ಸಂಭ್ರಮಾಚರಣೆಯಲ್ಲಿ ಭಾಗಿ ಆಗಲಿದ್ದಾರೆ.

ಎರಡು ವಾರದ ಹಿಂದೆ ನಟ ಧ್ರುವ ಸರ್ಜಾ ಅಭಿಮಾನಿಯೊಬ್ಬರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಇದರಿಂದ ಧ್ರುವ ಬಹಳ ನೋವು ಅನುಭವಿಸುವಂತಾಯಿತು. ನೆಚ್ಚಿನ ನಟನನ್ನು ನೋಡಲು ರಘುನಾಥ್ ಭಜಂತ್ರಿ ಎಂಬುವವರು ಪ್ರಯತ್ನಿಸಿದ್ದರು. ನಟ ಪ್ರಥಮ್ ಆತನನ್ನು ಧ್ರುವಗೆ ಪರಿಚಯಿಸಲು ಮನಸ್ಸು ಮಾಡಿದ್ದರು. ಈ ಹುಟ್ಟುಹಬ್ಬದ ದಿನ ಆತನನ್ನು ಭೇಟಿ ಮಾಡಲು ಧ್ರುವ ನಿರ್ಧಸಿದ್ದರು. ಅಷ್ಟರಲ್ಲಿ ಆತ ಜೀವ ಚೆಲ್ಲಿದ್ದು ಭಾರೀ ನೋವು ತಂದಿತ್ತು. ಆ ನೋವಿನಿಮದ ಹೊರಬರಲು ಧ್ರುವ ಸಾಕಷ್ಟು ಸಮಯ ತೆಗೆದುಕೊಂಡರು ಎಂದು ಪ್ರಥಮ್ ವಿವರಿಸಿದ್ದರು.

ಧ್ರುವ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾರ್ಟಿನ್, ಕೆಡಿ ಸಿನಿಮಾಗಳ ಟೀಸರ್ ರಿಲೀಸ್ ಆಗುತ್ತಾ? ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಕೊನೆಪಕ್ಷ ಹೊಸ ಪೋಸ್ಟರ್ ರಿಲೀಸ್ ಮಾಡಿ ಆಕ್ಷನ್ ಪ್ರಿನ್ಸ್‌ಗೆ ಶುಭ ಕೋರುವ ಸಾಧ್ಯತೆಯಿದೆ.

More from Filmibeat

English summary
Martin team launched Dhruva sarja's CDP ahead of his birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X