ದೂದ್ ಪೇಡ ದಿಗಂತ್ ಇನ್ಮೇಲೆ 'ಮಾರಿಗೋಲ್ಡ್'

ಸ್ಯಾಂಡಲ್ ವುಡ್ ನ ದೂದ್ ಪೇಡ ದಿಗಂತ್ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಈಗ ದೂದ್ ಪೇಡ 'ಮಾರಿಗೋಲ್ಡ್' ಆಗಿದ್ದಾರೆ. ಅಂದರೆ ಹೆಸರು ಬದಲಾಯಿಸಿಕೊಂಡರಾ ಅಂತ ಅಂದ್ಕೋಬೇಡಿ. ದಿಗಂತ್ 'ಮಾರಿಗೋಲ್ಡ್' ಎನ್ನುವ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಅಂದ್ಹಾಗೆ ಮಾರಿಗೋಲ್ಡ್ ಎಂದಾಕ್ಷಣ ಬಿಸ್ಕತ್ ಕಂಪನಿ ಅಂತ ಅಂದ್ಕೋಬೇಡಿ. ಈ ಮಾರಿಗೋಲ್ಡ್, ಗೋಲ್ಡ್ ಅನ್ನು ಮಾರಿ ಎನ್ನುವುದು. ಇದು ಕ್ರೈಮ್, ಕಾಮಿಡಿ ಥ್ರಿಲ್ಲರ್ ಸಿನಿಮಾ. ಅನಿರೀಕ್ಷಿತವಾಗಿ ನಡೆಯುವ ಅಪರಾಧ ಪ್ರಕರಣದಲ್ಲಿ ಗೋಲ್ಡ್ ಬಿಸ್ಕತ್ ಸಿಕ್ಕ ಬಳಿಕ ಏನಾಗುತ್ತೆ ಎಂಬುದು ಚಿತ್ರದ ಕಥೆ.

ಚಿತ್ರಕ್ಕೆ ರಾಘವೇಂದ್ರ ನಾಯಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಘವೇಂದ್ರ ಈಗ ಪೂರ್ಣಪ್ರಮಾಣದ ನಿರ್ದೇಶಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ದಿಗಂತ್ ಸದ್ಯ ಗಾಳಿಪಟ-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿದ ಬಳಿಕ ಮಾರಿಗೋಲ್ಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಮಾರ್ಚ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

Kannada Actor Diganth Next Film Titled Marigold

ದಿಗಂತ್ ಬಳಿ ಸದ್ಯ ಗಾಳಿಪಟ-2 ಸಿನಿಮಾ ಸೇರಿದಂತೆ ಹುಟ್ಟುಹಬ್ಬದ ಶುಭಾಶಯಗಳು, ಯುವರತ್ನ ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಜೊತೆಗೆ ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆಗೆ ಹೀರೋ ಸಿನಿಮಾದಲ್ಲು ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಸಿನಿಮಾಗಳ ಜೊತೆಗೀಗ ಮಾರಿಗೋಲ್ಡ್ ಸಿನಿಮಾ ಕೂಡ ಒಪ್ಪಿಕೊಂಡಿದ್ದಾರೆ.

More from Filmibeat

English summary
Kannada Actor Diganth next film titled Marigold. This movie is directed Raghavendra naik.
Read more about: diganth ದಿಗಂತ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X