'ಯುವರತ್ನ' ಚಿತ್ರಕ್ಕೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನ ಸ್ಟಾರ್ ನಟ

Recommended Video

Yuvaratna Kannada Movie: ಯುವರತ್ನ ಟೀಮ್ ಗೆ ಮತ್ತೊಬ್ಬ ಸ್ಯಾಂಡಲ್ ವುಡ್ ಸ್ಟಾರ್ ಸೇರ್ಪಡೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಭಾರಿ ಸದ್ದು ಮಾಡುತ್ತಿದೆ. ಸದ್ಯ ಧಾರವಾಡದಲ್ಲಿ ಚಿತ್ರೀಕರಣ ಮಾಡುತ್ತಿರುವ 'ಯುವರತ್ನ' ಚಿತ್ರತಂಡದಿಂದ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.

ಈಗಾಗಲೆ 40 ರಿಂದ 50 ಭಾಗದಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡಕ್ಕೆ ಸ್ಯಾಂಡಲ್ ವುಡ್ ನ ಮತ್ತೋರ್ವ ಸ್ಟಾರ್ ನಟನ ಎಂಟ್ರಿಯಾಗಿದೆ. ಅದು ಮತ್ಯಾರು ಅಲ್ಲ ದೂದ್ ಪೇಡ ದಿಗಂತ್. ಈ ಮೂಲಕ ದಿಗಂತ್ ಮೊದಲ ಬಾರಿಗೆ ಪವರ್ ಸ್ಟಾರ್ ಜೊತೆ ಸ್ಟ್ರೀನ್ ಶೇರ್ ಮಾಡುತ್ತಿದ್ದಾರೆ.

'ಯುವರತ್ನ' ಚಿತ್ರತಂಡಕ್ಕೆ ದಿಗಂತ್ ಎಂಟ್ರಿಯಾಗಿರುವ ಬಗ್ಗೆ ಹೊಂಬಾಳೆ ಫಿಲ್ಮ್ ಅಧಿಕೃತವಾಗಿ ಸಾಮಾಜಿಕ ಜಾಲತಣದಲ್ಲಿ ಬಹಿರಂಗ ಪಡಿಸಿದೆ. ಯುವರತ್ನ ಚಿತ್ರಕ್ಕೆ ಎಂಟ್ರಿಯಾದ ದಿಗಂತ್ ಗೆ ಚಿತ್ರತಂಡ ಗ್ರ್ಯಾಂಡ್ ವೆಲ್ ಕಮ್ ಮಾಡಿದೆ. ಆದ್ರೆ ಚಿತ್ರದಲ್ಲಿ ದಿಗಂತ್ ಪಾತ್ರ ಏನಾಗಿರಲಿದೆ ಎನ್ನುವ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ ಚಿತ್ರತಂಡ.

Kannada actor Diganth playing important role in Puneeth Rajkumar Yuvarathan Kannada film

ಇತ್ತೀಚಿಗಷ್ಟೆ 'ಯುವರತ್ನ' ಚಿತ್ರಕ್ಕೆ ಪ್ರಕಾಶ್ ರೈ ಎಂಟ್ರಿ ಕೊಟ್ಟಿದ್ದರು. ಇನ್ನು ಸಂಗೀತ ನಿರ್ದೇಶಕರಾಗಿ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ತಮನ್ ಕೂಡ ಎಂಟ್ರಿಯಾಗಿದ್ದಾರೆ. ಪುನೀತ್ ಅಭಿನಯದ ಪವರ್ ಸ್ಟಾರ್, ಚಕ್ರವ್ಯೂಹ ಸಿನಿಮಾಗಳಿಗೆ ತಮನ್ ಸಂಗೀತ ನಿರ್ದೇಶನ ಮಾಡಿದ್ದರು. ಈಗ ಮೂರನೆ ಭಾರಿ ಅಪ್ಪು ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

ಅಂದ್ಹಾಗೆ ದಿಗಂತ್ ಸದ್ಯ 'ಹುಟ್ಟುಹಬ್ಬದ ಶುಭಾಶಯಗಳು' ಮತ್ತು ವಿಜಯ್ ದೇವರಕೊಂಡ ಜೊತೆ ತೆಲುಗಿನ 'ಹೀರೋ' ಸಿನಿಮಾ ಸೇರಿದಂತೆ ಇನ್ನು ಹೆಸರಿಡದ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳ ಬಳಿಕ ಈಗ ಪವರ್ ಸ್ಟಾರ್ ಜೊತೆ ಮಿಂಚಲು ಸಜ್ಜಾಗಿದ್ದಾರೆ. 'ಫಾರ್ಚುನರ್' ಸಿನಿಮಾದ ನಂತರ ದಿಗಂತ್ ಅಭಿಮಾನಿಗಳ ಮುಂದೆ ಬಂದಿಲ್ಲ. ಆದ್ರೆ ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಸದ್ಯ ಪುನೀತ್ ಜೊತೆ ಕಾಣಿಸಿಕೊಳ್ಳುತ್ತಿರುವ ದಿಗಂತ್ ಯಾವ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

More from Filmibeat

English summary
Kannada actor Diganth playing important role in Puneeth Rajkumar's Yuvarathan Kannada film. This film is directed by Santhosh Anandram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X