ಡಿಸೆಂಬರ್ 11 ರಂದು ದಿಗಂತ್ 'ಶಾರ್ಪ್ ಶೂಟರ್' ರಿಲೀಸ್
ನಿರ್ದೇಶಕ ಗೌಸ್ ಪೀರ್ ಪ್ಲಾನ್ ಪ್ರಕಾರ ನಡೆದಿದ್ದರೆ, 'ಶಾರ್ಪ್ ಶೂಟರ್' ಈ ತಿಂಗಳು ಬಿಡುಗಡೆ ಆಗಬೇಕಿತ್ತು. ಅದ್ರೆ, ಕಾರಣಾಂತರಗಳಿಂದ ನವೆಂಬರ್ ನಲ್ಲಿ 'ಶಾರ್ಪ್ ಶೂಟರ್' ರಿಲೀಸ್ ಆಗ್ಲಿಲ್ಲ.
ಬದಲಾಗಿ, ಡಿಸೆಂಬರ್ 11 ರಂದು ರಾಜ್ಯಾದ್ಯಂತ ನಿಮ್ಮ ಮುಂದೆ ಬರಲಿದೆ 'ಶಾರ್ಪ್ ಶೂಟರ್'. ಆ ಮೂಲಕ ಎರಡು ವರ್ಷಗಳ ನಂತರ ದೂದ್ ಪೇಡ ದಿಗಂತ್ ಸ್ಯಾಂಡಲ್ ವುಡ್ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ. ['ಬಿಗ್ ಬಾಸ್' ವೇದಿಕೆಯಲ್ಲಿ ದಿಗಂತ್-ಐಂದ್ರಿತಾ 'ಶಾರ್ಪ್ ಶೂಟರ್']

ಸ್ವಲ್ಪ ಲವ್, ಸ್ವಲ್ಪ ಫ್ರೆಂಡ್ ಶಿಪ್, ಸ್ವಲ್ಪ ರೋಮ್ಯಾನ್ಸ್, ಜಾಸ್ತಿ ತರಲೆ ಇರುವ 'ಶಾರ್ಪ್ ಶೂಟರ್' ಚಿತ್ರದಲ್ಲಿ ದಿಗಂತ್ - ಸಂಗೀತ ಜೋಡಿಯಾಗಿದ್ದಾರೆ. ಚಿತ್ರದ 'ಕಬ್ಬಡಿ' ಐಟಂ ಸಾಂಗ್ ನಲ್ಲಿ ನಟಿ ಐಂದ್ರಿತಾ ರೇ, ದಿಗ್ಗಿ ಜೊತೆ ಸ್ಟೆಪ್ ಹಾಕಿರುವುದು ಸಿನಿಮಾದ ಸ್ಪೆಷಾಲಿಟಿ. ['ಶಾರ್ಪ್ ಶೂಟರ್' ದಿಗಂತ್ ಗೆ ಶುಕ್ರದೆಸೆ ಶುರು]
ಎಸ್.ಬಿ. ಎಂರ್ಟಟೈನ್ಮೆಂಟ್ ಅರ್ಪಿಸುವ 'ಶಾರ್ಪ್ ಶೂಟರ್' ಚಿತ್ರ ಪಕ್ಕಾ ಫ್ಯಾಮಿಲಿ ಎಂರ್ಟಟೈನರ್. ಇದುವರೆಗೂ ಚಾಕಲೇಟ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದ ದಿಗಂತ್ ಈ ಚಿತ್ರದಲ್ಲಿ ಸ್ವಲ್ಪ ಫೈಟ್ ಮಾಡಿ ಆಕ್ಷನ್ ಗೂ ಸೈ ಅಂದಿದ್ದಾರೆ.
ಲಾಂಗ್ ಗ್ಯಾಪ್ ನಂತರ ಅದೃಷ್ಟ ಪರೀಕ್ಷೆಗೆ ನಿಂತಿರುವ ದಿಗಂತ್ ಗೆ ಪ್ರೇಕ್ಷಕರು ದೂದ್ ಪೇಡ ತಿನ್ನಿಸ್ತಾರೋ, ಇಲ್ವೋ ಅಂತ ಕಾದು ನೋಡ್ಬೇಕು.


Click it and Unblock the Notifications











