ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಯ್ ಬಂಧನ
ನಟ ದುನಿಯಾ ವಿಜಯ್ ರನ್ನ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಿನ್ನೆ ತಡ ರಾತ್ರಿ ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಯ್ ಪೋಲೀಸರ ಅತಿಥಿ ಆಗಿದ್ದಾರೆ.
ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ ನಡೆಯುತ್ತಿತ್ತು. ಈ ವೇಳೆ ದುನಿಯಾ ವಿಜಿ ತಂಡ ಹಾಗೂ ಟ್ರೈನರ್ ಮಾರುತಿ ಗೌಡ ನಡುವೆ ಜಗಳ ಶುರುವಾಗಿದೆ.

ಎರಡು ತಂಡದ ನಡುವೆ ಮಾತಿಗೆ ಮಾತು ಬೆಳೆದು ದೊಡ್ಡ ಜಗಳ ಆಗಿದೆ. ಬಳಿಕ ಮಾರುತಿ ಗೌಡ ಎನ್ನುವವರನ್ನ ದುನಿಯಾ ವಿಜಯ್ ಹಾಗೂ ಮಣಿಪ್ರಸಾದ್ ಕಿಡ್ನಾಪ್ ಮಾಡಿದ್ದಾರೆ. ಕಾರಿನಲ್ಲಿ ಕರೆದೊಯ್ದಿದ್ದು, ಹಲ್ಲೆ ಮಾಡಿದ್ದಾರೆ ಎಂದು ಪಾನಿಪುರಿ ಕಿಟ್ಟಿ ಆರೋಪ ಮಾಡಿದ್ದಾರೆ.
ಈ ಹಿಂದೆ ಪಾನಿಪುರಿ ಕಿಟ್ಟಿ, ದುನಿಯಾ ವಿಜಯ್ಗೆ ಜಿಮ್ ಟ್ರೈನರ್ ಆಗಿದ್ದರು. ಮಾರುತಿ ಗೌಡ ಎನ್ನುವವರು ಪಾನಿಪುರಿ ಕಿಟ್ಟಿಯ ಅಣ್ಣನ ಮಗ ಆಗಿದ್ದಾರೆ. ಪಾನಿಪುರಿ ಕಿಟ್ಟಿ ಹಾಗೂ ದುನಿಯಾ ವಿಜಯ್ ನಡುವೆ ಮನಸ್ತಾಪ ಇತ್ತು.
ಐಪಿಸಿ ಸೆಕ್ಷನ್ 365 ,342, 325 ಹಾಗೂ 506 ಅಡಿ ಕೇಸ್ ದಾಖಲಿಸಲಾಗಿದೆ. ಮಾರುತಿ ಚಿಕ್ಕಪ್ಪ ನೀಡಿದ ದುನಿಯಾ ವಿಜಯ್ ಮೇಲೆ ದೂರು ನೀಡಿದ್ದು, ಹೈಗ್ರೌಂಡ್ ಪೊಲೀಸರು ಬಂದಿಸಿದ್ದಾರೆ.


Click it and Unblock the Notifications











