ಹುಟ್ಟುಹಬ್ಬದಂದು ದುನಿಯಾ ವಿಜಿ ಮತ್ತೊಂದು ವಿವಾದ: ತಲ್ವಾರ್ ನಲ್ಲಿ ಕೇಕ್ ಕಟ್ ಮಾಡಿದ ನಟ

Recommended Video

ಕತ್ತಿಯಲ್ಲಿ ಕೇಕ್ ಕತ್ತರಿಸಿದ ದುನಿಯಾ ವಿಜಯ್,ಸಂಭ್ರಮಿಸಿದ ಅಭಿಮಾನಿಗಳು| DUNIYA VIJAY |SALAGA|FILMIBEAT KANNADA

ಸ್ಯಾಂಡಲ್ ವುಡ್ ನ ಬ್ಲ್ಯಾಕ್ ಕೋಬ್ರ ನಟ ದುನಿಯಾ ವಿಜಯ್ 46ನೇ ವರ್ಷದ ಹುಟ್ಟಹುಬ್ಬದ ಸಂಭ್ರಮದಲ್ಲಿ ಇದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆ ಬಳಿ ಇರುವ ತಮ್ಮ ನಿವಾಸದಲ್ಲಿ, ಅಭಿಮಾನಿಗಳ ಜೊತೆ ರಾತ್ರಿ ಹುಟ್ಟುಹಬ್ಬ ಆಚರಿಸಿಕೊಂಡ ವಿಜಯ್ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಬರ್ತಡೇ ಕೇಕ್ ಅನ್ನು ತಲ್ವಾರ್ ನಲ್ಲಿ ಕತ್ತರಿಸುವ ಮೂಲಕ ಹುಟ್ಟುಹಬ್ಬದ ದಿನವೂ ಎಡವಟ್ಟು ಮಾಡಿಕೊಂಡಿದ್ದಾರೆ.

ಯಾವುದೆ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವಂತಿಲ್ಲ ಮತ್ತು ಪ್ರದರ್ಶಿವಂತಿಲ್ಲ. ಇದು ಆರ್ಮ್ಸ್ ಆಕ್ಟ್ ಆಡಿ ಅಪರಾಧವಾಗುತ್ತೆ. ಆದರೆ ವಿಜಿ ತಲ್ವಾರ್ ನಲ್ಲಿ ಕೇಕ್ ಕತ್ತರಿಸಿ ಅವಾಂತರ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಡಿಸಿಪಿ ರೋಹಿಣಿ ಸೆಪಟ್ ತನಿಖೆ ನಡೆಸುವಂತೆ ಗಿರಿನಗರ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

Kannada Actor Duniya Vijay Cutting His Birthday Cake At Talwar

ವಿಜಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಆದರೆ ಆಗಲೆ ವಿಜಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ನನ್ನ ಗಮನಕ್ಕೆ ಬಾರದೆ ಎಡವಟ್ಟಾಗಿದೆ, ಕ್ಷಮೆ ಇರಲಿ" ಎಂದಿದ್ದಾರೆ. ವಿಜಿ ಕೇಟ್ ಕತ್ತರಿಸುವ ಸಮಯದಲ್ಲಿ ವಿಜಯ್ ಜೊತೆ ತಾಯಿ, ಪತ್ನಿ ಕೀರ್ತಿ ಮತ್ತು ಸಲಗ ಚಿತ್ರದ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸಹ ಇದ್ದರು.

Kannada Actor Duniya Vijay Cutting His Birthday Cake At Talwar

ಇನ್ನು ಹುಟ್ಟುಹಬ್ಬದ ವಿಶೇಷವಾಗಿ ಬಹುನಿರೀಕ್ಷೆಯ ಸಲಗ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾವಿದು. ಈಗಾಗಲೆ ಮೊದಲ ಹಾಡು ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸದ್ಯ ರಿಲೀಸ್ ಆಗಿರುವ ಟೀಸರ್ ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

More from Filmibeat

English summary
Kannada actor Duniya Vijay cutting his birthday cake at Talwar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X