ನಾಗರತ್ನರಿಂದ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆಹೋದ ದುನಿಯಾ ವಿಜಯ್.!
ಸ್ಯಾಂಡಲ್ ವುಡ್ ನ 'ಕರಿಚಿರತೆ' ದುನಿಯಾ ವಿಜಯ್ ಕೌಟುಂಬಿಕ ಕಲಹ ಮುಂದುವರೆದಿದೆ. ಪತ್ನಿ ನಾಗರತ್ನ ರಿಂದ ವಿಚ್ಛೇದನ ಪಡೆಯಲು ಎರಡನೇ ಬಾರಿಗೆ ದುನಿಯಾ ವಿಜಯ್ ಕೋರ್ಟ್ ಮೆಟ್ಟಿಲೇರಿದ್ದಾರೆ.
2013 ರಲ್ಲಿ ನಾಗರತ್ನ ರಿಂದ ವಿಚ್ಛೇದನ ಕೋರಿ ದುನಿಯಾ ವಿಜಯ್ ಕೋರ್ಟ್ ಮೊರೆ ಹೋಗಿದ್ದರು. ಆದ್ರೆ, ವಿಚ್ಛೇದನ ನೀಡಲು ನಾಗರತ್ನ ನಿರಾಕರಿಸಿದ್ದರು. ಬಳಿಕ ರಾಜಿ-ಸಂಧಾನ ಮಾಡಿಕೊಂಡಿದ್ದ ದುನಿಯಾ ವಿಜಯ್-ನಾಗರತ್ನ ನಡುವೆ ಸದ್ಯಕ್ಕೆ ಎಲ್ಲವೂ ಸರಿ ಇಲ್ಲ.
ನಾಗರತ್ನಗೆ ವಿಚ್ಛೇದನ ನೀಡದೆ ಕೀರ್ತಿ ಗೌಡ ರನ್ನ ದುನಿಯಾ ವಿಜಯ್ ಮದುವೆ ಆಗಿದ್ದಾರೆ. ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುನಿಯಾ ವಿಜಯ್ ಜೈಲು ಪಾಲಾಗಿದ್ದಾಗ, ಕೀರ್ತಿ ಗೌಡ ಮೇಲೆ ನಾಗರತ್ನ ಹಲ್ಲೆ ನಡೆಸಿದ್ದರು.
ಹೀಗಾಗಿ, ಕ್ರೌರ್ಯದ ನೆಪವೊಡ್ಡಿ ನಾಗರತ್ನರಿಂದ ವಿಚ್ಛೇದನ ಪಡೆಯಲು ದುನಿಯಾ ವಿಜಯ್ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮುಂದೆ ಓದಿರಿ...

ನಾಗರತ್ನಗೆ ಸಂಕಷ್ಟ
ಕೀರ್ತಿ ಗೌಡ ಮೇಲೆ ನಾಗರತ್ನ ಹಲ್ಲೆ ನಡೆಸಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಕೀರ್ತಿ ಗೌಡ ಗಿರಿನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ನಾಗರತ್ನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಆಗಿದೆ. ಸದ್ಯಕ್ಕೆ ನಾಪತ್ತೆ ಆಗಿರುವ ನಾಗರತ್ನರನ್ನ ಹುಡುಕುವಲ್ಲಿ ಪೊಲೀಸರು ತಲ್ಲೀನರಾಗಿದ್ದಾರೆ. ಹೀಗಿರುವಾಗಲೇ ನಾಗರತ್ನಗೆ 'ವಿಚ್ಛೇದನ'ದ ಸಂಕಷ್ಟ ಎದುರಾಗಿದೆ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದುನಿಯಾ ವಿಜಯ್
ಒಂದ್ಕಡೆ ನಾಗರತ್ನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಆಗಿದೆ. ಇನ್ನೊಂದು ಕಡೆ ಕ್ರೌರ್ಯದ ಕಾರಣ ನೀಡಿ ನಾಗರತ್ನರಿಂದ ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯಕ್ಕೆ ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದಾರೆ. ನಾಗರತ್ನಗೆ ಪೆಟ್ಟು ಮೇಲೆ ಪೆಟ್ಟು ಬೀಳುತ್ತಿದೆ.

ಎಲ್ಲಿ ಹೋಗಿದ್ದಾರೆ ನಾಗರತ್ನ.?
ನಾಗರತ್ನ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆಯೇ, ಆಕೆ ಎಸ್ಕೇಪ್ ಆಗಿದ್ದಾರೆ. ನಾಗರತ್ನ ಎಲ್ಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ನಾಗರತ್ನ ವಿರುದ್ಧ ಹೋರಾಟ ನಿಲ್ಲಲ್ಲ ಎಂದು ದುನಿಯಾ ವಿಜಯ್ ಸ್ಪಷ್ಟವಾಗಿ ತಿಳಿಸಿದ್ದಾರೆ. ಇವರಿಬ್ಬರ ಜಗಳಕ್ಕೆ ಕೊನೆ ಎಂದು.?

ಮಗಳ ಮೇಲಿನ ಕೇಸ್ ಹಿಂಪಡೆದ ದುನಿಯಾ ವಿಜಯ್
ನಾಗರತ್ನ ಜೊತೆಗೆ ಮಗಳು ಮೋನಿಕಾ ಮೇಲೆಯೂ ದೂರು ದಾಖಲಾಗಿತ್ತು. ಆದ್ರೆ, ಮೋನಿಕಾ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಆಕೆ ಮೇಲೆ ಕೊಟ್ಟಿದ್ದ ಕಂಪ್ಲೇಂಟ್ ನ ದುನಿಯಾ ವಿಜಯ್ ವಾಪಸ್ ಪಡೆದಿದ್ದಾರೆ. ಆದ್ರೆ, ನಾಗರತ್ನ ಜೊತೆಗೆ ರಾಜಿ ಸಾಧ್ಯ ಇಲ್ಲ ಎಂದಿದ್ದಾರೆ ನಟ ವಿಜಯ್.


Click it and Unblock the Notifications











