For Quick Alerts
  ALLOW NOTIFICATIONS  
  For Daily Alerts

  ಅಂದು ದುಷ್ಮನ್, ಇಂದು ಫ್ರೆಂಡ್; ದುನಿಯಾ ವಿಜಿ ಹೇಳ್ತಿರೋದು ಯಾರ ಬಗ್ಗೆ?

  By Harshitha
  |

  ''ಅವನು ನಾನು ಇಪ್ಪತ್ತು ವರ್ಷದಿಂದ ಗೊತ್ತಿರೋರು. ಆರಂಭದಲ್ಲಿ ಅವನು ನನ್ನ ದುಷ್ಮನ್, ಬಾಡಿ ಬಿಲ್ಡಿಂಗ್ ಟೈಮಲ್ಲಿ ನೀನಾ ನಾನಾ ಅಂತ ಜಿದ್ದಿಗೆ ಬಿದ್ದಿದ್ದೂ ಇದೆ. ಆದ್ರೆ ಕಾಲ ಕ್ರಮೇಣ ಗೆಳೆಯರಾದ್ವಿ. ಜೀವದ ಗೆಳೆಯರಾದ್ವಿ''

  - ಹೀಗಂತ 'ಬ್ಲಾಕ್ ಕೋಬ್ರಾ' ದುನಿಯಾ ವಿಜಯ್ ಹೇಳಿರುವುದು ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಬಾಡಿ ಬಿಲ್ಡಿಂಗ್ ಟ್ರೇನರ್ ಪಾನಿ ಪೂರಿ ಕಿಟ್ಟಿ ಬಗ್ಗೆ.

  ಹೌದು, ಇಂದು ಗಾಂಧಿನಗರದ ಎಲ್ಲಾ ಸ್ಟಾರ್ ನಟರಿಗೆ ಬೇಕಾಗಿರುವ ಪಾನಿ ಪೂರಿ ಕಿಟ್ಟಿ ಒಂದ್ಕಾಲದಲ್ಲಿ ದುನಿಯಾ ವಿಜಯ್ ಗೆ ದುಷ್ಮನ್ ಆಗಿದ್ದವರು ಅಂದ್ರೆ ನೀವು ನಂಬಲೇಬೇಕು.

  ಬಾಡಿ ಬಿಲ್ಡಂಗ್ ಕಾನ್ಟೆಸ್ಟ್ ಬಂದ್ರೆ 'ನೀನಾ...ನಾನಾ...' ಅಂತ ಇಬ್ಬರ ಜುಗಲ್ಬಂದಿ ಶುರುವಾಗ್ತಿತ್ತು. ಹಾಗೂ ಹೀಗೂ 11 ಬಾರಿ ಮಿಸ್ಟರ್ ಇಂಡಿಯಾ ಗೋಲ್ಡ್, 24 ಬಾರಿ ಮಿಸ್ಟರ್ ಕರ್ನಾಟಕ ಕಿರೀಟ ತೊಟ್ಟ ಪಾನಿ ಪೂರಿ ಕಿಟ್ಟಿ ಬಾಡಿ ಬಿಲ್ಡಿಂಗ್ ಲೋಕದಲ್ಲಿ ಹೆಸರುವಾಸಿ ಆದರು. ಇತ್ತ ದುನಿಯಾ ವಿಜಯ್ ಸಿನಿಮಾ ಹೀರೋ ಆಗ್ಬಿಟ್ಟರು. ಇಬ್ಬರ ದುಷ್ಮನಿ ಗೆಳೆತನವಾಗಿ ಬದಲಾಗಿದ್ದು ಇಲ್ಲಿಂದಲೇ. [ಯಶ್, ದುನಿಯಾ ವಿಜಯ್, ಪ್ರೇಮ್...ಎಲ್ಲರಿಗೂ 'ಇವರೇ' ಬೇಕು!]

  ದುನಿಯಾ ವಿಜಯ್ ಅಭಿನಯದ 'ಶಂಕರ್ ಐ.ಪಿ.ಎಸ್' ಸಿನಿಮಾದಿಂದ ಈಗ ಚಿತ್ರೀಕರಣವಾಗುತ್ತಿರುವ 'ಮಾಸ್ತಿ ಗುಡಿ' ಚಿತ್ರದವರೆಗೂ ದುನಿಯಾ ವಿಜಯ್ ಗೆ ಪರ್ಸನಲ್ ಟ್ರೇನರ್ ಆಗಿರುವುದು ಇದೇ ಪಾನಿ ಪೂರಿ ಕಿಟ್ಟಿ.

  ಮೊದಲು ದುನಿಯಾ ವಿಜಯ್, ನಂತರ ಲವ್ಲಿ ಸ್ಟಾರ್ ಪ್ರೇಮ್, ಯಶ್, ಚೇತನ್ ಚಂದ್ರ...ಹೀಗೆ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ನಟರಿಗೆ ಟ್ರೇನಿಂಗ್ ಮಾಡಲು ಶುರುಮಾಡಿದ ಪಾನಿ ಪೂರಿ ಕಿಟ್ಟಿ ಇದೀಗ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿರುವ ತಮ್ಮದೇ ಜಿಮ್ ಓಪನ್ ಮಾಡುತ್ತಿದ್ದಾರೆ.

  ವಿದ್ಯಾರಣ್ಯಪುರದಲ್ಲಿ 'ಮಸಲ್ ಪ್ಲಾನೆಟ್' ಜಿಮ್ ಇದೇ ತಿಂಗಳ 24 ರಂದು ಉದ್ಘಾಟನೆ ಆಗಲಿದೆ. ಗೆಳೆಯ ಕಿಟ್ಟಿಯ ಈ ಹೊಸ ಪ್ರಯತ್ನಕ್ಕೆ ಶುಭಹಾರೈಸಿ, ನಟ ದುನಿಯಾ ವಿಜಯ್ ಫೇಸ್ ಬುಕ್ ನಲ್ಲಿ ಸುದೀರ್ಘ ಸ್ಟೇಟಸ್ ಹಾಕಿದ್ದಾರೆ.

  ''ನಮ್ಮ ದೇಹದೊಳಗಿದ್ದ ಬೆವರೆಂಬ ರಾಕ್ಷಸ ಹೊರಗೆ ಹೋದ್ರೆ ಯಶಸ್ಸು ತೆಪ್ಪಗೆ ನಮ್ಮ ಹಿಂದೆ ಬರುತ್ತೆ...ಗೆಳೆಯ ಲವ್ ಯೂ ಕಣೋ..'' ಅಂತ ಪಾನಿ ಪೂರಿ ಕಿಟ್ಟಿ ಬಗ್ಗೆ ದುನಿಯಾ ವಿಜಯ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ['ಆಕ್ಷನ್ ಹೀರೋ' ಆಗ್ಬೇಕೆನ್ನೋ ಆಸೆ ನಿಮಗೂ ಇದ್ಯಾ?]

  ಇಷ್ಟೇ ಅಲ್ಲದೇ, 'ಮಸಲ್ ಪ್ಲಾನೆಟ್' ಉದ್ಘಾಟನೆಗೆ ವಿಶೇಷ ಅತಿಥಿಯಾಗಿ ದುನಿಯಾ ವಿಜಯ್ ಭಾಗವಹಿಸುತ್ತಿದ್ದಾರೆ. ಗೆಳೆಯನ ಹೊಸ ಪ್ರಯತ್ನಕ್ಕೆ ತಾವೇ ಖುದ್ದಾಗಿ ದುನಿಯಾ ವಿಜಯ್ ಪ್ರಚಾರ ಮಾಡುತ್ತಿರುವುದು ವಿಶೇಷ.

  ಕಿಟ್ಟಿ ಅವರಿಗೆ 'ಪಾನಿ ಪೂರಿ ಕಿಟ್ಟಿ' ಅಂತ ಕರೆಯುವುದು ಯಾಕೆ ಎನ್ನುವ ಲೇಖನ ಸದ್ಯದಲ್ಲೇ ಪ್ರಕಟವಾಗಲಿದೆ. ನಿರೀಕ್ಷಿಸಿ....

  English summary
  Kannada Actor Duniya Vijay has taken his facebook account to promote 'Muscle Planet' gym which is owned by his friend Pani Puri Kitty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X