ಭರ್ಜರಿ ಚಿತ್ರೀಕರಣದಲ್ಲಿ ದುನಿಯಾ ವಿಜಯ್ 'ಸಲಗ'
Recommended Video
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ 'ಸಲಗ' ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಮೊನ್ನೆ ಮೊನ್ನಯಷ್ಟೆ ಅದ್ಧೂರಿ ಮುಹೂರ್ತ ಮಾಡಿಕೊಂಡು, ಸಕಲ ತಯಾರಿಗಳೊಂದಿಗೆ ಚಿತ್ರೀಕರಣಕ್ಕೆ ಇಳಿದಿರುವ ವಿಜಿ ಟೀಂ ಸದ್ಯ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.
ದುನಿಯಾ ವಿಜಯ್ ನಾಯಕನಾಗಿ ಅಭಿನಯಿಸುವ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ವಿಜಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಕೊಂಚ ಹೆಚ್ಚಾಗಿದೆ. ಜೊತೆಗೆ ವಿಜಿ ಜೊತೆ ಇರುವ ಅದ್ಭುತವಾದ ಟೀಂ ಸಲಗ ಉತ್ತಮವಾಗಿ ಮೂಡಿ ಬರುವ ಸೂಚನೆ ನೀಡುತ್ತಿದೆ.
'ಟಗರು' ಚಿತ್ರದಲ್ಲಿ ಕೆಲಸ ಮಾಡಿದ ಅನೇಕರು 'ಸಲಗ' ಚಿತ್ರತಂಡದಲ್ಲಿ ಕಾಣಸಿಗುತ್ತಾರೆ. ವಿಶೇಷವಾಗಿ ಟಗರು ಚಿತ್ರದ ತಾಂತ್ರಿಕ ವರ್ಗ ಸಲಗ ಚಿತ್ರದಲ್ಲಿದೆ. ಚಿತ್ರಕ್ಕೆ ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಸಂಗೀತ, ಮಾಸ್ತಿ ಸಂಭಾಷಣೆ ಚಿತ್ರಕ್ಕೆ ಇರಲಿದೆ.

ಇನ್ನು ಪೊಲೀಸ್ ಪಾತ್ರದಲ್ಲಿ ಡಾಲಿ ಧನಂಜಯ್, ಕಾನ್ಸ್ಟೇಬಲ್ ಸರೋಜ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ. ಸದ್ಯ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿ ಇರುವ ಚಿತ್ರತಂಡ ಒಂದಿಷ್ಟೊ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ 'ಸಲಗ' ಚಿತ್ರದ ಕುತೂಹಲವನ್ನು ಹೆಚ್ಚುಮಾಡಿದೆ.


Click it and Unblock the Notifications











