'ಸಲಗ' ಜೊತೆ ಡಾಲಿ ಧನಂಜಯ್ ಹುಟ್ಟುಹಬ್ಬದ ಸಂಭ್ರಮ
Recommended Video
ಸ್ಯಾಂಡಲ್ ವುಡ್ ನ ಡಾಲಿ ಅಂತನೆ ಖ್ಯಾತಿ ಗಳಿಸಿರುವ ನಟ ಧನಂಜಯ್ ಗೆ ಹುಟ್ಟುಹಬ್ಬದ ಸಂಭ್ರಮ. ಚಿತ್ರೀಕರಣದ ನಡುವೆಯೂ ಸೆಟ್ ನಲ್ಲಿಯೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಧನಂಜಯ್. ಟಗರು ಚಿತ್ರದ ನಂತರ ಪ್ರಖ್ಯಾತಿಗಳಿಸಿರುವ ಧನಂಜಯ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯ ಸಲಗ ಚಿತ್ರದ ಚಿತ್ರೀಕರಣದಲ್ಲಿರುವ ಧನಂಜಯ್ ಗೆ 'ಸಲಗ' ಟೀಂ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿದೆ. ಕೆ.ಪಿ ಶ್ರೀಕಾಂತ್ ನಿರ್ಮಾಣದ ದುನಿಯಾ ವಿಜಯ್ ನಟನೆಯ ಜೊತೆಗೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಇಡೀ ಚಿತ್ರತಂಡ ಧನಂಜಯ್ ಹುಟ್ಟುಹಬ್ಬವನ್ನು ಆಚರಣೆ ಮಾಡಿ ಆಡ್ವಾನ್ಸ್ ವಿಶ್ ಮಾಡಿದ್ದಾರೆ.

ಅಂದ್ಹಾಗೆ ಸಲಗ ಚಿತ್ರದಲ್ಲಿ ಧನಂಜಯ್ ಎಸಿಪಿ ಸಮರ್ಥ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮೂಲಕ ಖಾಕಿ ತೊಟ್ಟು ಖದರ್ ತೋರಿಸಲಿದ್ದಾರೆ ಧನಂಜಯ್. ಇನ್ನು ಹುಟ್ಟುಹಬ್ಬದ ಪ್ರಯುಕ್ತ ಧನಂಜಯ್ ಅಭಿನಯದ ಬಡವ ರಾಸ್ಕಲ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ವಿಭಿನ್ನ ಟೈಟಲ್ ಮತ್ತು ಕಾನ್ ಸೆಪ್ಟ್ ಮೂಲಕ ಧನಂಜಯ್ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ವಿಶೇಷ ಅಂದ್ರೆ 'ಬಡವ ರಾಸ್ಕಲ್' ಮೂಲಕ ನಿರ್ಮಾಪಕನಾಗಿಯು ಬಡ್ತಿ ಪಡೆಯುತ್ತಿದ್ದಾರೆ.

ಧನಂಜಯ್ ಬಳಿ ಸದ್ಯ ಯುವರತ್ನ, ಪೊಗರು, ಪಾಪ್ ಕಾರ್ನ್ ಮಂಕಿ ಟೈಗರ್ ಮತ್ತು ಡಾಲಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಲನ್ ಮತ್ತು ನಾಯಕನಾಗಿ ಮಿಂಚುತ್ತಿದ್ದಾರೆ. ಟಗರು ಚಿತ್ರದ ನಂತರ ಸಖತ್ ಬ್ಯುಸಿಯಾಗಿರುವ ಧನಂಜಯ್ ತೆಲುಗು ಚಿತ್ರರಂಗದಲ್ಲೂ ಮಿಂಚಿದ್ದಾರೆ.


Click it and Unblock the Notifications











