ಇವತ್ತಾದರೂ ದುನಿಯಾ ವಿಜಯ್ ಗೆ ಜಾಮೀನು ಸಿಗುತ್ತಾ.?
Recommended Video

ಜಿಮ್ ಟ್ರೈನರ್ ಮಾರುತಿಗೌಡ ಅವರನ್ನ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿರುವ ಆರೋಪದಡಿ ಜೈಲು ಸೇರಿರುವ ನಟ ದುನಿಯಾ ವಿಜಯ್ ಮತ್ತು ಸ್ನೇಹಿತರಿಗೆ ಇವತ್ತಾದರೂ ಜಾಮೀನು ಸಿಗುತ್ತಾ ಎಂಬ ಕುತೂಹಲ ಕಾಡುತ್ತಿದೆ.
ಮ್ಯಾಜಿಸ್ಟ್ರೇಟ್ ಕೊರ್ಟ್ ನಲ್ಲಿ ಜಾಮೀನು ಸಿಗದ ಕಾರಣ ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ 29 ರಂದು ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ಆದೇಶ ನೀಡಲಿದೆ. ಹೀಗಾಗಿ, ದುನಿಯಾ ವಿಜಿ ಅವರ ಅಭಿಮಾನಿಗಳ ಚಿತ್ತ ಇಂದು ಸೆಷನ್ಸ್ ಕೋರ್ಟ್ ನತ್ತ ಬೀರಿದೆ.
ಅಕ್ಟೋಬರ್ 1ರಂದು ನಡೆದ ವಿಚಾರಣೆಯಲ್ಲಿ ದುನಿಯಾ ವಿಜಯ್ ಪರ ವಕೀಲರು ''ವಿಜಿ ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿಲ್ಲ, ಒಬ್ಬ ಸೆಲಿಬ್ರಿಟಿ ಎನ್ನುವ ಕಾರಣಕ್ಕೆ ಸೆಕ್ಷನ್ 226 ಹಾಕಲಾಗಿದೆ. ಅಲ್ಲದೆ, ಮಾರುತಿ ಗೌಡ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ'' ಎಂದು ವಾದ ಮಂಡಿಸಿದ್ದರು.

ವಾದ ವಿವಾದ ಆಲಿಸಿದ ಕೋರ್ಟ್ ಈ ತೀರ್ಪನ್ನು ಸೋಮವಾರಕ್ಕೆ ಮುಂದೂಡಿತ್ತು. ಒಂದು ವೇಳೆ ದುನಿಯಾ ವಿಜಯ್ ಗೆ ಇಂದು ಜಾಮೀನು ಸಿಕ್ಕರೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಮತ್ತೆ ಜಾಮೀನು ನಿರಾಕರಣೆ ಆದರೇ ಬಹುಶಃ ಹೈಕೋರ್ಟ್ ಗೆ ಹೋಗುವ ಸಾಧ್ಯತೆ ಇದೆ.
ಘಟನೆಯ ವಿವರ: ಸೆಪ್ಟೆಂಬರ್ 22ರ ರಾತ್ರಿ ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ ನಡೆಯುತ್ತಿತ್ತು. ಈ ವೇಳೆ ದುನಿಯಾ ವಿಜಿ ಮತ್ತು ತಂಡ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ಮಾಡಿ, ಕಾರಿನಲ್ಲಿ ಕರೆದೊಯ್ದಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಪಾನಿಪುರಿ ಕಿಟ್ಟಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ವಿಜಿ ಮತ್ತು ಸ್ನೇಹಿತರನ್ನ ಹೈಗ್ರೌಂಡ್ ಪೊಲೀಸರು ಬಂಧಿಸಿದ್ದರು.


Click it and Unblock the Notifications











