»   » ಫೇಸ್ ಬುಕ್ ನಲ್ಲಿ 'ನಮಸ್ಕಾರ' ಮಾಡಿದ ಗಣೇಶ್

ಫೇಸ್ ಬುಕ್ ನಲ್ಲಿ 'ನಮಸ್ಕಾರ' ಮಾಡಿದ ಗಣೇಶ್

Posted By:
Subscribe to Filmibeat Kannada

ಅಭಿಮಾನಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಇನ್ನಷ್ಟು ಹತ್ತಿರವಾಗಿದ್ದಾರೆ. ಅರ್ಥಾತ್ ಸಾಮಾಜಿಕ ಜಾಲತಾಣಗಳಲ್ಲಿ 'ಮಳೆ ಹುಡುಗ' ಎಲ್ಲರ ಕೈಗೂ ಸಿಗಲಿದ್ದಾರೆ.

ಈಗಾಗಲೇ ಲಕ್ಕಿ ಸ್ಟಾರ್ ರಮ್ಯಾ, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟಿ ಸುಮಲತಾ ಸೇರಿದಂತೆ ಹಲವರು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇವರ ಸಾಲಿಗೆ ಗಣೇಶ್ ಕೂಡ ಸೇರಿದ್ದಾರೆ.

Kannada Actor Ganesh enters facebook officially

ಕೆಲ ತಿಂಗಳುಗಳ ಹಿಂದೆಯಷ್ಟೆ ಟ್ವಿಟ್ಟರ್ ನಲ್ಲಿ ಅಕೌಂಟ್ ಓಪನ್ ಮಾಡಿದ ಗಣೇಶ್, ಫ್ಯಾನ್ಸ್ ಗಳಿಗೆ ಮೇಘ ಸಂದೇಶ ಕಳುಹಿಸುತ್ತಿದ್ದರು. ಈಗ ಟ್ವಿಟ್ಟರ್ ಜೊತೆಗೆ ಫೇಸ್ ಬುಕ್ ಗೂ ಅಧಿಕೃತ ಎಂಟ್ರಿ ಕೊಟ್ಟು ಅಭಿಮಾನಿಗಳಿಗೆ ನಮಸ್ಕಾರ ಮಾಡಿದ್ದಾರೆ ಗಣೇಶ್. [ಟ್ವಿಟ್ಟರ್ ನಲ್ಲಿ 'ನಮಸ್ಕಾರ ನಮಸ್ಕಾರ ನಮಸ್ಕಾರ' ಗಣೇಶ್]

ಹೌದು, ಗಣೇಶ್ ಅಭಿನಯದ 25ನೇ ಸಿನಿಮಾ 'ಬುಗುರಿ' ಸದ್ಯದಲ್ಲೇ ರಿಲೀಸ್ ಆಗುತ್ತಿದೆ. ಇದರ ಪ್ರಮೋಷನ್ ಪ್ರಯುಕ್ತ ಅಭಿಮಾನಿಗಳ ಜೊತೆ ಫೇಸ್ ಬುಕ್ ನಲ್ಲಿ ಹರಟೆ ನಡೆಸುವ ಮನಸ್ಸು ಮಾಡಿದ್ದಾರೆ ಗಣೇಶ್.

Kannada Actor Ganesh enters facebook officially

ಗಣೇಶ್ ಹೆಸರಲ್ಲಿ ಈಗಾಗಲೇ ಅನೇಕ ಅಕೌಂಟ್ ಗಳು ಫೇಸ್ ಬುಕ್ ನಲ್ಲಿ ಚಾಲ್ತಿಯಲ್ಲಿವೆ. ಆದ್ರೆ, ಅವೆಲ್ಲವೂ ಫೇಕ್ ಅಕೌಂಟ್ ಗಳು. ಅವೆಲ್ಲದಕ್ಕೂ ಫುಲ್ ಸ್ಟಾಪ್ ಇಟ್ಟು, ಅಭಿಮಾನಿಗಳೊಂದಿಗೆ ನೇರವಾಗಿ ಮಾತನಾಡುವುದಕ್ಕೆ ಗಣೇಶ್ ಫೇಸ್ ಬುಕ್ ಗೆ ಕಾಲಿಟ್ಟಿದ್ದಾರೆ. [ಚಿನ್ನದ ಹುಡುಗ ಗಣೇಶ್ ಅದೃಷ್ಟವಂತ.! ಯಾಕೆ ಗೊತ್ತಾ?]

ಹಾಗಾದ್ರೆ, ಇನ್ಯಾಕೆ ತಡ..? ಗಣೇಶ್ ಜೊತೆ ಮಾತಾಡ್ಬೇಕು, 'ಬುಗುರಿ' ಸಿನಿಮಾ ಬಗ್ಗೆ ತಿಳಿದುಕೊಳ್ಳಬೇಕು ಅಂದ್ರೆ ಗಣೇಶ್ ಫೇಸ್ ಬುಕ್ ಪೇಜ್ ಗೆ ಭೇಟಿ ಕೊಡಿ...ಇದು ಗಣೇಶ್ ಅವರ ಅಫೀಶಿಯಲ್ ಫೇಸ್ ಬುಕ್ ಪೇಜ್.

English summary
Kannada Actor Ganesh has created his official Facebook page. Golden Star Ganesh fans can interact with him in ActorGaneshOfficial id.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada