ಗೋಲ್ಡನ್ ಸ್ಟಾರ್ ಗಣೇಶ್ ತಂದೆ ನಿಧನ
Recommended Video

ತಂದೆಯನ್ನು ಕಳೆದುಕೊಂಡ ಗಣೇಶ್..! | Filmibeat Kannada
ನಟ, ಗೋಲ್ಡನ್ ಸ್ಟಾರ್ ಗಣೇಶ್ ಅವರ ತಂದೆ ಇಂದು ವಿಧಿವಶರಾಗಿದ್ದಾರೆ.ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಸಂಜೆ ಅವರು ನಿಧನ ಹೊಂದಿದ್ದಾರೆ.
ಗಣೇಶ್ ಅವರ ತಂದೆ ರಾಮಕೃಷ್ಣಪ್ಪ ಅನಾರೋಗ್ಯದಿಂದ ಬಳಲುತಿದ್ದರು. ಈ ಕಾರಣ ಅವರು ಕೆಲದಿನಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
82 ವರ್ಷ ವಯಸ್ಸಾಗಿದ್ದ ರಾಮಕೃಷ್ಣಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಸಾವನ್ನಪ್ಪಿದರು.

ನೆಲಮಂಗಲ ಸಮೀಪದ ಅಡಕಿಮಾರನಹಳ್ಳಿಯಲ್ಲಿ ಗಣೇಶ್ ತಂದೆ ಹಾಗೂ ತಾಯಿ ವಾಸವಿದ್ದರು. ನಾಳೆ ಬೆಳಿಗ್ಗೆ ಹನ್ನೊಂದು ಘಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ. ನೆಲಮಂಗಲ ಬಳಿ ಇರೋ ಅಡಕಮಾರನ ಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
English summary
Kannada actor Ganesh father Rama kishnappa (82) passes away.


Click it and Unblock the Notifications