»   » ಭಲೇ 'ಅರ್ಜುನ' ಎಂದ ಗೋಲ್ಡನ್ ಸ್ಟಾರ್ ಗಣೇಶ್

ಭಲೇ 'ಅರ್ಜುನ' ಎಂದ ಗೋಲ್ಡನ್ ಸ್ಟಾರ್ ಗಣೇಶ್

Posted By:
Subscribe to Filmibeat Kannada

ಡೈನಾಮಿಕ್ ಸ್ಟಾರ್ ದೇವರಾಜ್ ಮತ್ತು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮೊಟ್ಟ ಮೊದಲ ಬಾರಿಗೆ ತೆರೆಮೇಲೆ ಒಂದಾಗಿ ಅಭಿನಯಿಸಿರುವ ಸಿನಿಮಾ 'ಅರ್ಜುನ'.

ಅಪ್ಪಟ ಕ್ರೈಂ ಥ್ರಿಲ್ಲರ್ ಚಿತ್ರವಾಗಿರುವ 'ಅರ್ಜುನ'ನ ನೋಡಿ ಪ್ರೇಕ್ಷಕರು ಜೈ ಅಂದಿದ್ದಾರೆ. ರಾಜ್ಯಾದ್ಯಂತ 'ಅರ್ಜುನ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಕಲೆಕ್ಷನ್ ನಲ್ಲೂ 'ಅರ್ಜುನ' ಹಿಂದೆ ಬಿದ್ದಿಲ್ಲ.

Kannada Actor Ganesh lauds Kannada Movie 'Arjuna'

ಹೀಗಿರುವಾಗಲೇ, ಗೋಲ್ಡನ್ ಸ್ಟಾರ್ ಗಣೇಶ್ 'ಅರ್ಜುನ' ಚಿತ್ರವನ್ನ ವೀಕ್ಷಿಸಿದ್ದಾರೆ. ನಿನ್ನೆಯಷ್ಟೆ (ಸೆಪ್ಟೆಂಬರ್ 27) ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ 'ಅರ್ಜುನ' ಚಿತ್ರವನ್ನ ಕಣ್ತುಂಬಿಕೊಂಡರು ಮಳೆ ಹುಡುಗ ಗಣೇಶ್. [ವಿಮರ್ಶೆ: ಸಸ್ಪೆನ್ಸ್, ಥ್ರಿಲ್ಲರ್, ಟ್ವಿಸ್ಟ್...ಯಾವುದೂ ಇಲ್ಲದ 'ಅರ್ಜುನ']

'ಅರ್ಜುನ' ಚಿತ್ರದ ನಿರ್ದೇಶಕ ಪಿ.ಸಿ.ಶೇಖರ್ ಮತ್ತು ಪ್ರಜ್ವಲ್ ದೇವರಾಜ್ ಜೊತೆ ಕೂತು ಚಿತ್ರ ನೋಡಿದ ಗಣೇಶ್ 'ಅರ್ಜುನ'ನನ್ನ ಕೊಂಡಾಡಿದರು. ''ಪರ್ಫೆಕ್ಷನ್ ಗೆ ಇನ್ನೊಂದು ಹೆಸರೇ 'ಅರ್ಜುನ'. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಪ್ರಜ್ವಲ್ ದೇವರಾಜ್, ದೇವರಾಜ್, ಭಾಮಾ ನಟನೆ ಬ್ರಿಲಿಯಂಟಾಗಿದೆ'' ಅಂತ ಹಾಡಿ ಹೊಗಳಿದ್ದಾರೆ ಗಣೇಶ್. [ಡೈನಾಮಿಕ್ ಅಪ್ಪ-ಮಗನ 'ಅರ್ಜುನ' ಬಗ್ಗೆ ವಿಮರ್ಶಕರು ಏನಂತಾರೆ?]

ಗಣೇಶ್ ರವರ ಗೋಲ್ಡನ್ ಮಾತುಗಳಿಗೆ ಪ್ರಜ್ವಲ್ ದೇವರಾಜ್ ಮತ್ತು ಪಿ.ಸಿ.ಶೇಖರ್ ಫುಲ್ ಖುಷ್ ಆಗಿದ್ದಾರೆ.

English summary
Golden Star Ganesh watched Devaraj and Prajwal Devaraj starrer Kannada Movie 'Arjuna' yesterday (September 27th) in Mantri Mall, Bengaluru and appreciated the team effort.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada