For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಯ ಬಹುದಿನದ ಆಸೆ ಈಡೇರಿಸಿದ ಗೋಲ್ಡನ್ ಸ್ಟಾರ್ ಗಣೇಶ್ !

  |

  ಕರ್ನಾಟಕದ ಮೂಲೆ ಮೂಲೆಯಲ್ಲೂ ಗೋಲ್ಡನ್ ಸ್ಟಾರ್‌ ಗಣೇಶ್‌ಗೆ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡಬೇಕು ಅಂತ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ಅವರಿಗೆ ಗಣೇಶ್ ಭೇಟಿ ಮಾಡಲು ಸಾಧ್ಯವಾಗಿರುವುದಿಲ್ಲ. ಇಂತಹ ಅಭಿಮಾನಿಗಳಲ್ಲಿ ಯುವತಿಯೊಬ್ಬಳಿಗೆ ಗೋಲ್ಡನ್ ಸ್ಟಾರ್ ಗಣೇಶ್‌ರನ್ನು ಭೇಟಿ ಮಾಡಲು ಕಾತುರಳಾಗಿದ್ದಳು. ಕೊನೆಗೂ ಆ ಯುವತಿಯ ಆಸೆಯನ್ನು ಗಣೇಶ್ ಈಡೇರಿಸಿದ್ದಾರೆ.

  ಈ ಮಧ್ಯೆ ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಸಿನಿಮಾ ರಿಲೀಸ್ ಆಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗಣೇಶ್ ಅಭಿಮಾನಿಗಳು ಸಿನಿಮಾ ನೋಡಿ ನೆಚ್ಚಿನ ನಟನನ್ನು ಹೊಗಳಿಕೊಂಡಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅಂಧನಾಗಿ ನಟಿಸಿರುವ ಗಣೇಶ್ ಪಾತ್ರ ಅಭಿಮಾನಿಗೆ ಕಾಮಿಡಿ ಕಿಕ್ ಕೊಟ್ಟಿದೆ. ಗಣೇಶ್ ಕೂಡ ಸಿನಿಪ್ರಿಯರಿಗೆ ಮನರಂಜನೆ ನೀಡಲು ಸದಾ ಮುಂದಿರುತ್ತಾರೆ. ಹೀಗಾಗಿ ಸಖತ್ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ.

  ಬಾಲಕಿ ಅಭಿಮಾನಿ ಭೇಟಿಯಾದ ಗಣೇಶ್

  ಬಾಲಕಿ ಅಭಿಮಾನಿ ಭೇಟಿಯಾದ ಗಣೇಶ್

  ಭದ್ರಾವತಿ ಮೂಲದ ಬಾಲಕಿಯೊಬ್ಬರು ಗೋಲ್ಡನ್ ಸ್ಟಾರ್ ಗಣೇಶ್ ಅಪ್ಪಟ ಅಭಿಮಾನಿ. ಗಣೇಶ್ ನಟಿಸಿದ ಮುಂಗಾರು ಮಳೆ ಸಿನಿಮಾ ನೋಡಿದ್ದಲ್ಲಿಂದ ಈಕೆ ಗಣೇಶ್ ಫ್ಯಾನ್ ಆಗಿದ್ದಾರೆ. 2006ರಲ್ಲಿ ತೆರೆಕಂಡ ಸಿನಿಮಾದಿಂದ ಇಲ್ಲಿವರೆಗೆ ಗಣೇಶ್ ನಟಿಸಿದ ಪ್ರತಿಯೊಂದು ಸಿನಿಮಾವನ್ನು ಬಿಡದೆ ನೋಡಿದ್ದಾರೆ. ಹೀಗಾಗಿ ಗಣೇಶ್ ಮೇಲೆ ಅಭಿಮಾನ. ಇಲ್ಲಿಂದ ಒಮ್ಮೆಯಾದರೂ ಗೋಲ್ಡನ್ ಸ್ಟಾರ್ ಗಣೇಶ್‌ರನ್ನು ಭೇಟಿ ಮಾಡಲೇ ಬೇಕು. ಒಂದು ಫೋಟೊನಾದರೂ ತೆಗೆಸಿಕೊಳ್ಳಬೇಕು ಅಂತ ಆಸೆ ಇತ್ತು. ಅಂದಹಾಗೇ ಗೋಲ್ಡನ್ ಸ್ಟಾರ್ ಗಣೇಶ್ ಡೈ ಹಾರ್ಡ್ ಫ್ಯಾನ್ ಹೆಸರು ಸ್ಫೂರ್ತಿ. ಈಕೆಯ ವಯಸ್ಸು 19 ವರ್ಷ.

  ಮೂರು ದಿನ ಊಟ ಬಿಟ್ಟಿದ್ದ ಗಣೇಶ್ ಅಭಿಮಾನಿ

  ಮೂರು ದಿನ ಊಟ ಬಿಟ್ಟಿದ್ದ ಗಣೇಶ್ ಅಭಿಮಾನಿ

  ಭದ್ರಾವತಿ ಮೂಲ ಆಗಿದ್ದರೂ ಸ್ಫೂರ್ತಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆ ಯುವತಿ ತನ್ನ ಕುಟುಂಬಸ್ಥರ ಜೊತೆ ಗಣೇಶ್ ಅಭಿನಯದ 'ಸಖತ್' ಸಿನಿಮಾ ನೋಡಲು ಹೋಗಿದ್ದರು. ಒರಿಯನ್ ಮಾಲ್ ಗೆ ಸಿನಿಮಾ ನೋಡಲು ಹೋಗಿದ್ದರು. ಈ ವೇಳೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಓರಿಯನ್ ಮಾಲ್‌ಗೆ ಹೋಗಿದ್ದರು. ಈ ವೇಳೆ ಗಣೇಶ್ ಭೇಟಿ ಮಾಡಲಾಗದೇ ಸ್ಪೂರ್ತಿ ಬೇಸರಗೊಂಡಿದ್ದರು. ಗಣೇಶ್ ಮಿಸ್ ಆಗಿದ್ದಕ್ಕೆ ಮೂರು ದಿನ ಊಟವನ್ನೇ ಬಿಟ್ಟಿದ್ದರಂತೆ. ಆಗ ಬಾಲಕಿಯ ಪೋಷಕರು ಆಪ್ತರ ಮೂಲಕ ಗಣೇಶ್ ಸಂಪರ್ಕಿಸಿ ಮನೆಗೆ ಭೇಟಿ ಕೊಟ್ಟಿದ್ದಾರೆ.

  ಅಭಿಮಾನಿಗೆ ಬುದ್ಧಿವಾದ ಹೇಳಿದ ಗಣೇಶ್

  ಅಭಿಮಾನಿಗೆ ಬುದ್ಧಿವಾದ ಹೇಳಿದ ಗಣೇಶ್

  ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ನೆಚ್ಚಿನ ಅಭಿಮಾನಿ ಭೇಟಿ ಮಾಡಿ ಪ್ರೀತಿಯ ಅಪ್ಪುಗೆ ಕೊಟ್ಟು ಮಾತಾಡಿಸಿದ್ದಾರೆ. ಅಭಿಮಾನಕ್ಕಾಗಿ ಹೀಗೆ ಊಟ ಎಲ್ಲಾ ಬಿಡಬಾರದು ಅಂತಾ ಕಿವಿ ಮಾತು ಹೇಳಿದ್ದಾರೆ. ಯುವತಿ ಕೂಡ ಗಣೇಶ್‌ ಭೇಟಿ ತನ್ನ ಆಸೆಯನ್ನು ಪೂರೈಸಿಕೊಂಡಿದ್ದಾಳೆ. ಅಭಿಮಾನಿಯನ್ನು ಮನೆಗೆ ಕರೆಸಿ ವಿಶೇಷವಾಗಿ ಸತ್ಕಾರಿಸಿರುವ ಗಣಿ ಗೋಲ್ಡನ್ ಹಾರ್ಟ್ ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

  ಸುನಿ ಗಣೇಶ್ 'ಸಖತ್' ಸಿನಿಮಾ ನೋಡಿ

  ಸುನಿ ಗಣೇಶ್ 'ಸಖತ್' ಸಿನಿಮಾ ನೋಡಿ

  'ಸಖತ್' ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಕಾಮಿಡಿ ಥ್ರಿಲ್ಲರ್ ಸಿನಿಮಾ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಚಮಕ್ ಬಳಿಕ ಮತ್ತೆ ಈ ಜೋಡಿ ಪಕ್ಕಾ ಎಂಟರ್‌ಟೈನ್ಮೆಂಟ್ ಸಿನಿಮಾ ಮಾಡಿದ್ದರು.

  English summary
  Kannada actor golden star Ganesh met his die hard fan at his house. She is following Ganesh since Mugaru Male release. But she wanted desparatly to meet Ganesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X