ಹ್ಯಾಟ್ರಿಕ್ ಸಿನಿಮಾಗಾಗಿ ಮತ್ತೆ ಒಂದಾದ ಗಣೇಶ್ - ಪ್ರೀತಮ್ ಗುಬ್ಬಿ
ನಟ ಗಣೇಶ್ ಈಗ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದೀಗ ಅವರ ಸಿನಿಮಾಗಳ ಸಾಲಿಗೆ ಮತ್ತೊಂದು ಹೊಸ ಸಿನಿಮಾ ಸೇರಿಕೊಂಡಿದೆ ಅದೇ 'ಮರೆಯುವ ಮುನ್ನ'.
'ಮರೆಯುವ ಮುನ್ನ' ನಟ ಗಣೇಶ್ ಅವರ ಹೊಸ ಸಿನಿಮಾ. ಈ ಸಿನಿಮಾವನ್ನು ಪ್ರೀತಮ್ ಗುಬ್ಬಿ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದರೆ, ಇದು ಗಣೇಶ್ ಹಾಗೂ ಪ್ರೀತಮ್ ಗುಬ್ಬಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಮೂರನೇ ಸಿನಿಮಾ.
ಈ ಹಿಂದೆ 'ಮಳೆಯಲಿ ಜೊತೆಯಲಿ' ಹಾಗೂ 'ದಿಲ್ ರಂಗೀಲಾ' ಸಿನಿಮಾಗಳನ್ನು ಗಣೇಶ್ ಗಾಗಿ ಪ್ರೀತಮ್ ಮಾಡಿದ್ದರು. ಅದಕ್ಕೂ ಹಿಂದೆ 'ಮುಂಗಾರು ಮಳೆ' ಸಿನಿಮಾಗೆ ಸಹ ಅವರೇ ಕಥೆ ಬರೆದಿದ್ದರು.

ಈ ಎಲ್ಲ ಸಿನಿಮಾಗಳ ನಂತರ ಮತ್ತೆ ಈ ಜೋಡಿ ಒಂದಾಗಿದೆ. 'ಮರೆಯುವ ಮುನ್ನ' ಚಿತ್ರ ಪಕ್ಕಾ ಗಣೇಶ್ ಸ್ಟೈಲ್ ಗೆ ಹೊಂದಿಕೊಳ್ಳವ ರೀತಿ ಇದ್ದು, ಇದೊಂದು ರೊಮ್ಯಾಂಟಿಕ್ ಸಿನಿಮಾ ಆಗಿದೆಯಂತೆ.
ಈ ಸಿನಿಮಾಗಳ ಜೊತೆಗೆ 'ಗಿಮಿಕ್', 'ಗೀತಾ' ಹಾಗೂ 'ಆರೆಂಜ್' ಸಿನಿಮಾಗಳಲ್ಲಿ ಗಣೇಶ್ ತೊಡಗಿದ್ದಾರೆ.
English summary
Kannada actor Ganesh new movie titled as 'Mareyuva Munna'. The movie is directing by Preetham Gubbi.


Click it and Unblock the Notifications