»   » 'ಅಮೂಲ್ಯಾ..' ಎಂದ ಗೋಲ್ಡನ್ ಸ್ಟಾರ್ ಗಣಿ!!

'ಅಮೂಲ್ಯಾ..' ಎಂದ ಗೋಲ್ಡನ್ ಸ್ಟಾರ್ ಗಣಿ!!

Posted By:
Subscribe to Filmibeat Kannada

ಸೂಪರ್ ಹಾಡುಗಳು ಹಾಗೂ ಟ್ರೈಲರ್ ಮೂಲಕ ಸದ್ಯಕ್ಕೆ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿರುವ 'ರಾಮ್ ಲೀಲಾ' ಚಿತ್ರತಂಡ ಮತ್ತೆ ಸುದ್ದಿಯಲ್ಲಿದೆ. ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಅಮೂಲ್ಯಾ ಅವರು ಲೀಡ್ ರೋಲ್ ನಲ್ಲಿ ಮಿಂಚಿರುವ 'ರಾಮ್ ಲೀಲಾ' ಚಿತ್ರದ ನಾಲ್ಕನೇ ಸ್ಪೆಷಲ್ ಹಾಡನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಬಿಡುಗಡೆ ಮಾಡಿದ್ದಾರೆ.

ಅಂದಹಾಗೆ 'ರಾಮ್ ಲೀಲಾ' ಚಿತ್ರತಂಡ ಮಾತುಕೊಟ್ಟಂತೆ ಪ್ರತೀವಾರ ಚಿತ್ರದ ಒಂದೊಂದು ಹಾಡನ್ನು ರಿಲೀಸ್ ಮಾಡುತ್ತಿದ್ದು, ಈ ವಾರ 'ಅಮೂಲ್ಯಾ' ಎಂಬ ಹಾಡನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೈಯಲ್ಲಿ ಬಿಡುಗಡೆ ಮಾಡಿಸಿದ್ದಾರೆ.

Kannada Actor Ganesh releases 4th song of 'Ramleela'

ನಟ ಗಣಿ ಅವರು ತಮ್ಮ ಹೊಸ ಚಿತ್ರ 'ಪಟಾಕಿ' ಯ ಶೂಟಿಂಗ್ ಸ್ಪಾಟ್ ನಲ್ಲಿ, ಪೊಲೀಸ್‌ ಕಾಸ್ಟ್ಯೂಮ್ ನಲ್ಲಿದ್ದುಕೊಂಡೇ 'ರಾಮ್ ಲೀಲಾ' ಚಿತ್ರದ ನಾಲ್ಕನೇ ಸ್ಪೆಷಲ್ ಹಾಡನ್ನು ಬಿಡುಗಡೆ ಮಾಡಿದ್ದಾರೆ.['ರಾಮ್ ಲೀಲಾ' ಸುರ್ರ್..ಸೂಪರ್ರು, ಹಾಡು ಬಿಡುಗಡೆ ಮಾಡಿದ ಉಪೇಂದ್ರ]

ಈ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರೆ, ನಟ ಧ್ರುವ ಸರ್ಜಾ, ನಟ ಉಪೇಂದ್ರ ಹಾಗು ನಟ ಶಿವರಾಜ್ ಕುಮಾರ್ ಅವರು ಸರದಿ ಪ್ರಕಾರ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.['ರಾಮ್ ಲೀಲಾ' ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್]

ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅವರು ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಚಿತ್ರದ ನಾಲ್ಕನೇ ವಿಶೇಷ ಹಾಡನ್ನು ಬಿಡುಗಡೆ ಮಾಡಿದ್ದು, ಹಾಡಿನ ವಿಡಿಯೋ ಇಲ್ಲಿದೆ ನೋಡಿ..

"ರಾಮ್ ಲೀಲಾ' ಚಿತ್ರದ ಟ್ರೈಲರ್ ನಾನು ನೋಡಿದ್ದೀನಿ, ಇದೀಗ ಪಕ್ಕಾ ಎಂರ್ಟಟೈನರ್ ಚಿತ್ರದ ಈ ಅಮೂಲ್ಯ ಸಾಂಗ್ ಕೂಡ ತುಂಬಾ ಚೆನ್ನಾಗಿದೆ. ಸೌಂದರ್ಯ ಜಗದೀಶ್ ಪ್ರೊಡಕ್ಷನ್ಸ್ ಹೌಸ್ ನಲ್ಲಿ ಮೂಡಿಬರುತ್ತಿರುವ ಈ ಹಾಡಿನಲ್ಲಿ ಅಮೂಲ್ಯಾ ಹಾಗೂ ಚಿರು ಅವರು ತುಂಬಾ ಚೆನ್ನಾಗಿ ಕಾಣ್ತಾ ಇದ್ದಾರೆ. ಎಲ್ಲರಿಗೂ ಆಲ್ ದ ಬೆಸ್ಟ್ ಎಂದು ನಟ ಗಣೇಶ್ ಅವರು ಹಾಡು ಬಿಡುಗಡೆ ಮಾಡಿ, ಇಡೀ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.

English summary
The team of 'Ramleela' is releasing each song of the film one week apart. After the first two songs were released by Dhruva Sarja and the second song by Upendra, the third song was released on Chiranjeevi Sarja's birthday by Shiva Rajkumar at his residence. And the 4th song released by Golden Star Ganesh at 'Pataki' Shooting spot. The movie is directed by Vijay Kiran.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada